ಇನ್ನು ಜಗತ್ತಿಗೆ ಒಂದೇ ಒಂದು ರೇಡಿಯೋ ಸಾಕು!

Posted By: Staff

ಇನ್ನು ಜಗತ್ತಿಗೆ ಒಂದೇ ಒಂದು ರೇಡಿಯೋ ಸಾಕು!
ಗ್ಯಾಜೆಟ್ ಉದ್ಯಮ ಈಗ ತುಂಬಾ ಸದ್ದು ಹಾಗೂ ಸುದ್ದಿಯಲ್ಲಿದೆ. ದಿನಾಲೂ ಹೊಸ ಹೊಸ ಉತ್ಪನ್ನಗಳು ಇಲ್ಲಿ ಲಭ್ಯ. ಈ ಕ್ಷೇತ್ರ ಹೊಸ ಹೊಸ ಸಂಗೀತ ಸಾಧನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದೀಗ ಹೊಸ ಸಾಹಸವೊಂದು ಬರಲಿದೆ. ಅದು ಲಿವಿಯೋ ಕಂಪೆನಿ ತರುತ್ತಿರುವ ಹೊಸ ರೇಡಿಯೋ ಕಿಟ್. ಈ ರೇಡಿಯೋ ಕಿಟ್ ಐಪೋಡ್ ಮತ್ತು ಐಫೊನಿನಲ್ಲಿ ಬಳಕೆಯಾಗಲಿದೆ.

ಲೀವಿಯೋ ರೇಡಿಯೋ ಮತ್ತು ಕಾರ್ ಇಂಟರ್ನೆಟ್ ರೇಡಿಯೊ ಇದೀಗ ಹೊಸ ಆಂತರಿಕ ಮೀಡಿಯಾ ಪ್ಲೇಯರ್ ಬಳಕೆಗೆ ತಂದಿದ್ದು ಇದರಿಂದ ಐಪೋಡ್ ಮತ್ತಿ ಐಫೋನಿನಲ್ಲಿ ಟ್ರಾಕ್ ಪ್ಲೇ ಮಾಡಲು ಸಮರ್ಥವಾಗಿದೆ. ಇದರಲ್ಲಿ ಅಡಕವಾಗಿರುವ ಬ್ಲೂಟೂಥ್ ನಿಂದ ಇದು ಸಾಧ್ಯವಾಗಲಿದೆ.

ಇದರಲ್ಲಿರುವ ಪ್ರೀ ಲೋಡೆಡ್ ಕಿಟ್ ಇಂಟರ್ನೆಟ್ ರೇಡಿಯೋ ಅಪ್ಲಿಕೇಶನ್ ಹೊಂದಿದೆ. ಇದರಿಂದ 45,000 FM ರೇಡಿಯೋ ಸ್ಟೇಷನ್ ಗಳು ಜಗತ್ತಿನಾದ್ಯಂತ ನಿರಂತರವಾಗಿ ಸಂಗೀತಸುಧೆ ಹರಿಸಲಿವೆ.

ಈ ಹೊಸ ಸಾಧನವನ್ನು ಕಾರ್ ಸ್ಟಿರಿಯೋ ಮೂಲಕ ಕೂಡ ಐಪೋಡ್ ಮತ್ತು ಐಫೊನ್ ನೀಡಲಿವೆ. ತಿಂಗಳ, ಯಾವುದೇ ಫೀ ಇಲ್ಲದೇ USB ಪೋರ್ಟ್ ಈ ಸೌಲಭ್ಯ ಒದಗಿಸಲಿದೆ. ಈ ಹೊಸ ಸಾಧನದ ಸೌಲಭ್ಯ ಆಪಲ್ ಕಂಪನಿಯ ಎಲ್ಲ ಅತ್ಯಾಧುನಿಕ ಉತ್ಪನ್ನಗಳಲ್ಲಿಯೂ ಇನ್ನು ಮುಂದೆ ಲಭ್ಯವಾಗಲಿದೆ. ಈ ಹೊಸ ರೇಡಿಯೋ ಕಿಟ್ ಬೆಲೆ ರು. 5,737.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot