ಬಾಸ್ ಕಂಪೆನಿ ಸಂಗೀತಲೋಕದಲ್ಲಿ ಸುಪ್ರಸಿದ್ಧ. ಈಗಾಗಲೇ ಇದು ಸಂಗೀತ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ಹೊಸ ಸಂಗೀತ ಸಾಧನ ವೈರ್ ಲೆಸ್ ಮೊಬೈಲ್ ಸ್ಪೀಕರ್ ಬಿಡುಗಡೆಗೆ ಸಜ್ಜಾಗಿದೆ. ಹೆಸರು ಬಾಸ್ ಸೌಂಡ್ ಲಿಂಕ್. ಈ ಹೊಸ ಸ್ಪೀಕರ್ ಬ್ಲೂಟೂಥ್ ಯುಟಿಲಿಟಿ ಹೊಂದಿದೆ.
ಇದರ ವಿನ್ಯಾಸ ಹಾಗೂ ರೂಪ ಅತ್ಯಾಕರ್ಷಕವಾಗಿದೆ. ಇದೊಂದು ಸಪರ್ ಆಡಿಯೋ ಗ್ಯಾಜೆಟ್ಸ್ ಅನಿಸಿಕೊಳ್ಳುವುದು ಗ್ಯಾರಂಟಿ ಎಂಬಂತಿದೆ. ಈ ಹೊಸ ಸ್ಪೀಕರ್ ಹೊಂದಿರುವ ಮುಚ್ಚಳ ಧೂಳು ಹಾಗೂ ಇತರ ಹಾನಿಗಳಿಂದ ಸ್ಪೀಕರನ್ನು ರಕ್ಷಿಸುತ್ತದೆ. ಆ ಮೂಲಕ ಸ್ಪೀಕರ್ ತನ್ನ ಉತ್ಕೃಷ್ಟತೆ ಮತ್ತು ಸೂಕ್ಷ್ಮತೆ ಉಳಿಸಿಕೊಳ್ಳಲಿದೆ.
ಜೊತೆಗೆ ಇದು ಲೆದರ್ ಕವರ್ ಕೂಡ ಅಳವಡಿಸಿ ಇದಕ್ಕೆ ಸಾಕಷ್ಟು ರಕ್ಷಣೆ ನೀಡಿದೆ. ಈ ಹೊಸ ಸಾಧನ ಎಲ್ಲಾ ಹೈ ಎಂಡ್ ಮೀಡಿಯಾ ಪ್ಲೇಯರ್ ಹಾಗೂ ಬ್ಲೂಟೂಥ್ ಡಿವೈಸ್ ಸಹಕಾರದೊಂದಿಗೆ ಲಭ್ಯ. ಈ ಹೊಸ ವೈರ್ ಲೆಸ್ ಸ್ಪೀಕರ್ ಈಗ ಮಾರ್ಕೆಟ್ ನಲ್ಲಿ ಲಭ್ಯವಿದೆ. ಇದರ ಬೆಲೆ ಸುಮಾರು ರು. 14,349 ಎಂದು ಹೇಳಲಾಗಿದೆ.