ಪಯೋನೀರ್ ಕಂಪೆನಿಯ ಹೊಸ ಸಂಗೀತ ಸಾಧನ

Posted By: Staff

ಪಯೋನೀರ್ ಕಂಪೆನಿಯ ಹೊಸ ಸಂಗೀತ ಸಾಧನ
ಪಯೋನೀರ್ ಕಂಪೆನಿ ಈಗ ಗ್ಯಾಜೆಟ್ಸ್ ಲೋಕದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಈಗಾಗಲೇ ಕೆಲವು ಅತ್ಯಾಧುನಿಕ ಗ್ಯಾಜೆಟ್ಸ್ ಗಳನ್ನು ಬಿಡುಗಡೆ ಮಾಡಿರುವ ಈ ಕಂಪೆನಿ ಇದೀಗ ಹೊಸ ಹೆಡ್ ಯುನಿಟ್ಸ್ ಮತ್ತು ಆಮ್ಫ್ಲಿಫಾಯರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜುಗೊಂಡಿದೆ.

ಆಶ್ಚರ್ಯವೆಂದರೆ ಈ ಕಂಪೆನಿಯಿಂದ ಬರುತ್ತಿರುವ ಒಟ್ಟೂ ಯುನಿಟ್ ಗಳು ಎಷ್ಟು ಗೊತ್ತೇ? 2 ಹೆಡ್ ಯುನಿಟ್ಸ್ ಮತ್ತು 3 ಆಮ್ಫ್ಲಿಫಾಯರ್. ಈ ಹೊಸ ಯುನಿಟ್ ಗಳಲ್ಲಿ ಹೆಡ್ ಸೆಟ್ ಗಳು DEH ಹೆಡ್ ಸೆಟ್ ಗಳಾಗಿದ್ದು ಅವು ಪಯೋನೀರ್ 149 & 249. ಆದರೆ ಇವೆಲ್ಲಾ ವಾಹನದಲ್ಲಿ ಮಾತ್ರ ಬಳಸುವಂತದ್ದು.

ಆಮ್ಫ್ಲಿಫಾಯರ್ ಗಳು GM ಆಗಿದ್ದು ಅವು 3500F, 5500T ಮತ್ತು 6500T. ಇವು ಸಾಕಷ್ಟು ವಿಶೇಷತೆ ಹೊಂದಿವೆ. ಮೊದಲನೆಯದಾಗಿ ಇವು ಆಧುನಿಕ ಪವರ್ ಸೌಲಭ್ಯ ಹೊಂದಿವೆ. ಕೈಗೆಟಕುವ ಬೆಲೆ ಹೊಂದಿರುವುದು ಇದರ ಇನ್ನೊಂದು ವಿಶೇಷ.

ಅತ್ಯಾಧುನಿಕ ಸೌಂಡ್ ರಿಟ್ರೀವರ್ ಮತ್ತು ಹೆಚ್ಚಿನ ಗುಣಮಟ್ಟದ ಸಂಗೀತವನ್ನು ಹೊಂದಿರುವ ಸಾಮರ್ಥ್ಯ ಇದೆ. ಜೊತೆಗೆ ಆಡಿಯೋ ಹೆಡ್ಸ್ ಯುನಿಟ್ ಇದೆ.
ಬರಲಿರುವ ಹೊಸ ಆಮ್ಫ್ಲಿಫಾಯರ್ ಗಳಲ್ಲಿ ಅನುಕ್ರಮವಾಗಿ 400W, 820W, 760W ಸಾಮರ್ಥ್ಯವಿದೆ. ಒಳ್ಳೆಯ ಸಂಗೀತಕ್ಕಾಗಿ ಫ್ರೀಕ್ವೆನ್ಸಿ ಹೊಂದಾಣಿಕೆ ಸೌಲಭ್ಯ ಕೂಡ ಲಭ್ಯ.

ಈ ಹೊಸ ಆಮ್ಫ್ಲಿ ಫಾಯರ್ ನಲ್ಲಿ ಬೂಸ್ಟ್ ವಾಲ್ಯೂಮ್, ಒಳ್ಳೆಯ ಶಬ್ಧ ಸಾಮರ್ಥ್ಯ, ಶ್ರೇಷ್ಟ ದರ್ಜೆಯ ಸಂಗೀತದ ಔಟ್ ಪುಟ್ ಇದರಲ್ಲಿದೆ.
ಈ ಹೊಸ ಯುನಿಟ್ ಗಳ ಬೆಲೆಯ ಮಾಹಿತಿ ಸದ್ಯಕ್ಕಿಲ್ಲ. ಆದರೆ ಬೆಲೆ ಅತ್ಯಂತ ಕಡಿಮೆ ಎಂದೇ ಅಂದಾಜಿಸಲಾಗಿದೆ. ಇನ್ನೇನು ಸದ್ಯದಲ್ಲಿಯೇ ಮಾರುಕಟ್ಟೆಯಲ್ಲಿ ಲಭ್ಯ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot