ಜಬ್ರಾ ಹೊಸ ಈಸೀ ಗೋ ಹೆಡ್ ಸೆಟ್ ಸುಪರ್ ಆಗಿದೆ!

Posted By: Staff

ಜಬ್ರಾ ಹೊಸ ಈಸೀ ಗೋ ಹೆಡ್ ಸೆಟ್ ಸುಪರ್ ಆಗಿದೆ!
ಇದೀಗ ಗ್ಯಾಜೆಟ್ಸ್ ಲೋಕ ಗರಿಗೆದರಿದೆ, ಬಹಳಷ್ಟು ಕಂಪೆನಿಗಳ ಹೊಸ ಹೊಸ ಗ್ಯಾಜೆಟ್ ಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯವಾಗುತ್ತಿದ್ದು ಸಾಕಷ್ಟು ಸ್ಪರ್ಧೆ ಎರ್ಪಟ್ಟಿದೆ. ಹೊಸ ಹೊಸ ಸಂಗೀತ ಸಾಧನಗಳು ದಿನಾಲೂ ಮಾರುಕಟ್ಟೆ ಸೇರುವ ದಿನ ಸದ್ಯದಲ್ಲೇ ಬರಲಿದೆ.

ಇದೀಗ ಹೊಸ 2 ಬ್ಲೂಟೂಥ್ ಹೆಡ್ ಸೆಟ್ ಬಿಡುಗಡೆಗೆ ಮುಂದಾಗಿದೆ ಜಬ್ರಾ. ಈ ಹೆಡ್ ಸೆಟ್ ಜೋಡಿಯ ವಿಶೇಷತೆ ಎಂದರೆ ಇದನ್ನು ಎರಡು ಮೊಬೈಲ್ ಹ್ಯಾಂಡ್ ಸೆಟ್ ಗಳಿಗೆ ಒಂದೇ ಸಮಯದಲ್ಲಿ ಜೋಡಿಸಬಹುದು. ಸಾಮಾನ್ಯವಾಗಿ ಹೆಡ್ ಸೆಟ್ ಗಳು ಕಪ್ಪು ಬಣ್ಣವನ್ನು ಹೊಂದಿರುತ್ತವೆ. ಆದರೆ ಈ ಹೊಸ ಜಬ್ರಾ ಹೆಡ್ ಸೆಟ್ ಆಕರ್ಷಕ ಗ್ಲೌಸಿ ರೆಡ್, ಬಿಳಿ ಹಾಗೂ ಕಪ್ಪು ಮಿಶ್ರಿತ ಬಣ್ಣದಲ್ಲಿ ಲಭ್ಯ. ಈ ಹೊಸ ಹೆಡ್ ಸೆಟ್ ಹೆಸರು ಜಬ್ರಾ ಈಸಿಗೋ ಬ್ಲೂಟೂಥ್ ಹೆಡ್ ಸೆಟ್.

ಈ ಹೊಸ ಹೆಡ್ ಸೆಟ್ ನಿರಂತರವಾಗಿ ಮತ್ತು ನಿರಾತಂಕವಾಗಿ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೊನ್ ಗಳಿಗೆ ಸಂಪರ್ಕಕ್ಕೆ ಒಳಪಡಿಸಲ್ಪಡುತ್ತವೆ. ಇವು ಒಳಬರುವ ಕರೆಗಳನ್ನು ಸ್ವೀಕರಿಸಿ ಮುಗಿದ ತಕ್ಷಣ ಕೊನೆಗೊಳಿಸುತ್ತವೆ. ವಿಡಿಯೋ/ಮ್ಯೂಸಿಕ್ ಪ್ಲೇಬ್ಯಾಕ್, ಡಿಜಿಟಲ್ ಸಿಗ್ನಲ್ ಪ್ರೊಸೆಸಿಂಗ್ ತಂತ್ರಜ್ಞಾನ, ಕ್ರಿಸ್ಟಲ್ ಕ್ಲಿಯರ್ ಆಡಿಯೋ, ಇಯರ್ ಹುಕ್ ಸೌಲಭ್ಯಗಳಿವೆ.

ಬಾಕ್ ವರ್ಡ್ ಕಾಂಪಿಟೇಬಲ್ 2.1 ಬ್ಲೂಟೂಥ್ ಆವೃತ್ತಿ ಕನೆಕ್ಟಿವಿಟಿ ಇದರಲ್ಲಿದೆ. ಕೇವಲ 8 ಗ್ರಾಮ್ ತೂಕ ಹೊಂದಿರುವ ಇದು ಶಬ್ಧದ ಕಂಟ್ರೋಲ್ ಸಾಮರ್ಥ್ಯ ಕೂಡ ಹೊಂದಿದೆ. ಈ ಹೊಸ ಹೆಡ್ ಸೆಟ್ 1 ವರ್ಷದ ವಾರಂಟಿ ಹಾಗೂ ಬೆಲೆ ಸುಮಾರು ರು. 2,150 ರಲ್ಲಿ ಲಭ್ಯ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot