ಜೆಬಿಎಲ್ ಆಡಿಯೋದ ಹೊಸ ಏರ್ ಪ್ಲೇ ಸ್ಪೀಕರ್ ಸೂಪರ್!

Posted By: Staff

ಜೆಬಿಎಲ್ ಆಡಿಯೋದ ಹೊಸ ಏರ್ ಪ್ಲೇ ಸ್ಪೀಕರ್ ಸೂಪರ್!
ಗ್ಯಾಜೆಟ್ಸ್ ಲೋಕದ ಮಹಾರಾಜ ಜೆಬಿಎಲ್ ಕಂಪೆನಿ ಗ್ರಾಹಕರ ನಿರೀಕ್ಷೆಯ ಆಡಿಯೋ ಸಾಧನಗಳನ್ನು ಒದಗಿಸುವುದರಲ್ಲಿ ಎತ್ತಿದ ಕೈ. ಇದೀಗ ಹೊಸ ಜೆಬಿಎಲ್ ಇನ್ನೋವೇಟಿವ್ ಯುನಿಟ್ ಹೊಂದಿರುವ ವೈರ್ ಲೆಸ್ ಏರ್ ಪ್ಲೇ ಸ್ಪೀಕರ್ ಬಿಡುಗಡೆಗೆ ಸಜ್ಜಾಗಿದೆ.

ಏರ್ ಪ್ಲೇ ಸ್ಪೀಕರ್ಸ್ ನಲ್ಲಿ ಇನ್ನು ಮುಂದೆ ಜೆಬಿಎಲ್ ನ ಆಡಿಯೋ ಗ್ಯಾಜೆಟ್ಸ್ ಇರುವುದಲ್ಲದೇ ಇದು ವೈರ್ ಲೆಸ್ ಆಗಿರುವುದರಿಂದ ಬಳಕೆದಾರರಿಗೆ ಸಾಕಷ್ಟು ಪ್ರಯೋಜನವೂ ದೊರೆಯಲಿದೆ. ಇದರಲ್ಲಿರುವ ಬ್ಲೂಟೂಥ್ ಮೂಲಕ ಐಟ್ಯೂನ್ ಮ್ಯೂಸಿಕ್ ಲೈಬ್ರಿಯಲ್ಲಿರುವ ಯಾವುದೇ ಸಂಗೀತವನ್ನಾದರೂ ಜನರ ಕಿವಿಗೆ ತಲುಪಿಸಬಲ್ಲ ಸಾಮರ್ಥ್ಯ ಇದರಲ್ಲಿದೆ.

ಐಫೋನ್, ಐಪ್ಯಾಡ್, ಅಥವಾ ಐಪೋಡ್ ಟಚ್ ಸಪೋರ್ಟ್ ಮಾಡುವಂತಹ ಡಾಕ್ ಇದರಲ್ಲಿದೆ. ಆಂತರಿಕ ವೈ-ಫೈ, ವೈರ್ ಲೆಸ್ ಆಗಿರುವುದರಿಂದ ಡಿವೈಸ್ ಗೆ ಪ್ಲಗ್ ಇನ್ ಮಾಡದೆಯೂ ಬಳಕೆದಾರರು ಆಡಿಯೋ ಫೈಲ್ಸ್ ಗಳನ್ನು ಪ್ಲೇ ಮಾಡಬಹುದು. ಈ ಸಾಧನದ ವಿನ್ಯಾಸ ಕೂಡ ಚೆನ್ನಾಗಿದೆ. ಆಂತರಿಕ FM ರೇಡಿಯೋ, ಡ್ಯುಯಲ್ ಅಲಾರ್ಮ್ ಸೌಲಭ್ಯ, 10 ಚಾನೆಲ್ ಕೂಡ ಲಭ್ಯ.

ಈ ಹೊಸ ಸ್ಪೀಕರ್ 3 ಟ್ರಾನ್ಸ್ ಡ್ಯೂಸರ್ ಮೂಲಕ 360 ಡಿಗ್ರಿ ಅಂತರ ಕೂಡ ಕ್ರಮಿಸಬಲ್ಲದು. ಕಪ್ಪು ಹಾಗೂ ಬಿಳಿ ಬಣ್ಣಗಳಲ್ಲಿ ಲಭ್ಯವಿರುವ ಇದನ್ನು ಹರ್ಮಾನ್ ಕಂಪೆನಿ ಬಿಡುಗಡೆಗೊಳಿಸಲಿದೆ. ಇದರ ಬೆಲೆ ಸುಮಾರು ರು. 17,000 ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಜೆಬಿಎಲ್ ಹೈ-ಎಂಡ್ ಸ್ಪೀಕರ್ ಗಳಲ್ಲಿ ಇದು ಅತ್ಯುತ್ತಮ ಅಲ್ಲದಿದ್ದರೂ ಉತ್ತಮವಂತೂ ಹೌದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot