ಕೈಗೆಟಕುವ ಬೆಲೆಯಲ್ಲಿ ದಿ ಬೆಸ್ಟ್ ವಿಕೆಡ್ ಹೆಡ್ ಫೊನ್

3D ತಂತ್ರಜ್ಞಾನ ಇರುವ ಕಾರಣಕ್ಕೇ ಇದಕ್ಕೆ ಧನ್ಯವಾದ ಹೇಳಲೇಬೇಕು. ಇನ್ನು ಇದರ ಬಣ್ಣ, ಆಕಾರ, ಗ್ರಾಫಿಕ್ಸ್ ನೀವು ಊಹಿಸಲಸಾಧ್ಯವಾದ ರೀತಿ ಚೆನ್ನಾಗಿದೆ. ಇದರಲ್ಲಿ ಒಂದಾಗಿರುವ ಹೇರೊ ಮಾದರಿ ನೀಲಿ ಹಾಗೂ ಹಳದಿ ಬಣ್ಣಗಳ ಮಿಶ್ರಣದಲ್ಲಿದ್ದು ಥಟ್ಟನೆ ಮನಸೆಳೆಯುವಂತಿದೆ. ಸುಂದರ ಹಾಗೂ ಗಟ್ಟಿಯಾದ ಟಫ್ ಬ್ಯಾಂಡ್ ಬಾಡಿ, ಸೌಖ್ಯಕರವಾದ ಇಯರ್ ಕಪ್ಸ್, ಇನ್ ಲೈನ್ ವಾಲ್ಯೂಮ್ ಕಂಟ್ರೋಲ್, ಎಲ್ಲವೂ ಸೂಪರ್!
ಇದಕ್ಕಿರುವ ಬೆಲೆಗೆ ಹೋಲಿಸಿದರೆ ನಂಬಲಸಾಧ್ಯವಾಗಿದೆ. ಇದರಲ್ಲಿ ಹಾರ್ಡ್ ಕೋರ್ ಬಾಸ್ ಪರಿಣಾಮಕಾರಿಯಾಗಿದೆ. ಸಂಗೀತ ಪ್ರೇಮಿಗಳ ಪಾಲಿಗೆ ಇದು ಸಂಜೀವಿನಿ ಆಗಲಿರುವುದು ಸತ್ಯ. ಈ ಹೊಸ ಹೆಡ್ ಫೋನ್ ಅಗತ್ಯಗಳನ್ನೊಳಗೊಂಡಿದೆ, ಐಷಾರಾಮಿಯಿಂದ ದೂರವಿದೆ.
ಈ ಹೊಸ ಹೆಡ್ ಸೆಟ್ ಸದ್ಯದಲ್ಲಿಯೇ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಇದರ ಬೆಲೆ ತೀರಾ ಆಕರ್ಷಕ ಎನಿಸಲಿರುವ ರು. 800 ರಿಂದ 1000 ಎಂದು ಅಂದಾಜಿಸಲಾಗಿದೆ. ಇದೇ ಬೆಲೆಯಲ್ಲಿ ದೊರೆತರೆ ಖಂಡಿತವಾಗಿಯೂ ಇದಕ್ಕೆ ಜನ ಮುಗಿಬೀಳುವುದು ಗ್ಯಾರಂಟಿ. ಯಾವಾಗ ಬಿಡುಗಡೆ ಎಂಬ ಮಾಹಿತಿ ಸಿಕ್ಕ ತಕ್ಷಣ ಇಲ್ಲಿ ಸುದ್ದಿ ಪ್ರಕಟವಾಗುತ್ತದೆ, ನೋಡಲು ಮರೆಯದಿರಿ.


Click it and Unblock the Notifications








