ಹೊಸ ಏರ್ ಪ್ಲೇ ಸ್ಪೀಕರ್ ಹೇಗಿದೆ ನೋಡಿ!

Posted By: Staff

ಹೊಸ ಏರ್ ಪ್ಲೇ ಸ್ಪೀಕರ್ ಹೇಗಿದೆ ನೋಡಿ!
ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಪೀಕರ್ ಇವೆ. ಹೊಸ ಹೊಸ ತಂತ್ರಜ್ಞಾನದ, ವಿನ್ಯಾಸದ ಹಾಗೂ ದರಗಳ ಸ್ಪೀಕರ್ ಗಳು ಮಾರಾಟದಲ್ಲಿ ಹೊಸ ದಾಖಲೆಯತ್ತ ಸಾಗುತ್ತಿವೆ. ಸಂಗೀತ ಲೋಕ ಇನ್ನೂ ಶ್ರೀಮಂತವಾಗುವ ಸೂಚನೆ ದಟ್ಟವಾಗಿದೆ. ಇದೀಗ ಹೊಸ ಸ್ಪೀಕರ್ ಬಿಡುಗಡೆಗೆ ಸಜ್ಜಾಗಿದೆ ಈಗಾಗಲೇ ಸೌಂಡ್ ವಿಸನ್ ಸಂಗೀತ ಸಾಧನವನ್ನು ಪರಿಚಯಿಸಿರುವ ಲೋವೆ.

ಬರಲಿರುವ ಸಾಧನದ ಹೆಸರು ಏರ್ ಸ್ಪೀಕರ್. ಇದು ಐಫೊನ್, ಐಪೋಡ್ಸ್ ಮತ್ತು ಐಪ್ಯಾಡ್ ಮುಂತಾದ ಆಪಲ್ ಕಂಪೆನಿಯ ಉತ್ಪನ್ನಗಳಿಗೆ ಮೀಸಲಾಗಿದೆ.

ಈ ಹೊಸ ಸಾಧನ ಆಪಲ್ ಏರ್ ಪ್ಲೇ ಯನಿಟ್ iOS ಡಿವೈಸ್ ನಿಂದ ಸ್ಪೀಕರಿಗೆ ಸಂಪರ್ಕ ಕಲ್ಪಿಸುವಂತದ್ದು. ಇದು 2 ಸಬ್ ವೂಫರ್ ಗಳಿಗೆ ಸಂಪರ್ಕ ಹೊಂದಿದ್ದು ಇದರಿಂದ ತುಂಬಾ ಆಳವಾದ ಬಾಸ್ ಆಧಾರಿತ ಸಂಗೀತ ಹೊಸಬರಲಿದೆ. ಇದರೊಂದಿಗೆ 2 ಟ್ವೀಟರ್ಸ್ ಹಾಗೂ 2 ಮಿಡ್ ರೇಂಜ್ ಸ್ಪೀಕರ್ ಸೆಟ್ ಕೂಡ ಇದೆ.

ಮಲ್ಟಿ ರೂಮ್ ಆಡಿಯೋ ಸೌಲಭ್ಯಕ್ಕಾಗಿ ನೀವಿ ಐಫೋನಿನೊಂದಿಗೆ ಇದನ್ನು ಬೆಸೆದಾಗ ಇದು ಒಟ್ಟೂ 80 ವಾಟ್ಸ್ ಗಳನ್ನು ಮಾತ್ರ ಬಳಕೆ ಮಾಡುತ್ತದೆ. ಈ ಡಿವೈಸಿನಲ್ಲಿರುವ LAN, WLAN ಗಳ ಮೂಲಕ ಟ್ರಾನ್ಸ್ ಮಿಶನ್ ಕಾರ್ಯ ನಡೆಸುತ್ತದೆ ಈ ಏರ್ ಪ್ಲೇ ಸ್ಪೀಕರ್. ಇದರಲ್ಲಿ USB ಪೋರ್ಟ್ ಕೂಡ ಲಭ್ಯ.

ಈ ಹೊಸ ಸ್ಪೀಕರ್ ಬೆಲೆ ರು. 53,572. ಇದು, ಇದೇ ಪೀಚರ್ಸ್ ಹೊಂದಿರುವ ಇತರ ಸ್ಪೀಕರುಗಳಿಗಿಂತ ತುಸು ಹೆಚ್ಚೇ ಆಗಿದೆ. ಆದರೆ ಗುಣಮಟ್ಟದ ದೃಷ್ಟಿಯಿಂದ ಬೆಲೆ ಹೆಚ್ಚು ಎನಿಸಲಾರದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot