ಹೊಸ ಮ್ಯಾಜಿಕೋ ಸ್ಪೀಕರ್ ನಲ್ಲಿದೆ ಸೂಪರ್ ಮ್ಯಾಜಿಕ್!

By Super
|
ಹೊಸ ಮ್ಯಾಜಿಕೋ ಸ್ಪೀಕರ್ ನಲ್ಲಿದೆ ಸೂಪರ್ ಮ್ಯಾಜಿಕ್!
ಗ್ಯಾಜೆಟ್ಸ್ ಮಾರುಕಟ್ಟೆಯಲ್ಲೀಗ ಕೇವಲ ಮೊಬೈಲ್ ಸಾಮ್ರಾಜ್ಯ ಮಾತ್ರವಲ್ಲ, ಟ್ಯಾಬ್ಲೆಟ್ ಮತ್ತು ಮ್ಯೂಸಿಕ್ ಸಿಸ್ಟಮ್ ಗಳ ಭರಾಟೆಯೂ ಜೋರಾಗಿಯೇ ಇದೆ. ಸಾಕಷ್ಟು ಹೊಸ ಸಂಗೀತ ಸಾಧನಗಳು ಈಗಾಗಲೇ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿವೆ. ಇದೀಗ ಹೊಸ ಸಂಗೀತ ಸಾಧನವೊಂದು ಭರ್ಜರಿಯಾಗಿ ಪಾದಾರ್ಪಣೆ ಮಾಡಲು ಸಿದ್ಧವಾಗಿದೆ. ಇದು ಮ್ಯಾಜಿಕೋ ಕಂಪೆನಿಯ ಹೊಸ Q1.

ಈ ಹೊಸ ಸಂಗೀತ ಸಾಧನದ ಬಗ್ಗೆ 2010 ರಿಂದಲೂ ಮಾರುಕಟ್ಟೆಯಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆದರೆ ಮಾರುಕಟ್ಟೆ ಪ್ರವೇಶ ಮಾತ್ರ ವಿಳಂಬವಾಗಿತ್ತು. ಇದೀಗ ಬಿಡುಗಡೆಗೆ ಸಿದ್ಧವಾಗಿರುವ ಈ ಸ್ಪೀಕರ್ ಸಾಕಸ್ಟು ಆಧುನಿಕ ಹಾಗೂ ಆಕರ್ಷಕವಾಗಿದೆ.

ಇದರ ಪ್ರಮುಖ ಆಕರ್ಷಣೆ ಎಂದರೆ ಬಾಸ್ ಹೊಸ ತಂತ್ರಜ್ಞಾನ 34Hz ಅನ್ನು ಪ್ರಪ್ರಥಮವಾಗಿ ಈ ಸ್ಪೀಕರ್ ಮೂಲಕ ಮಾರುಕಟ್ಟೆಗೆ ಹಾಗೂ ಗ್ರಾಹಕರಿಗೆ ಪರಿಚಯಿಸುತ್ತಿರುವುದು. ಇದೊಂದೇ ವಿಶೇಷತೆ ಸಾಕು, ಈ ಸ್ಪೀಕರ್ ಬಿಸಿ ಕೇಕ್ ನಂತೆ ಮಾರಾಟವಾಗಲು. ಏಕೆಂದರೆ ಈ ತಂತ್ರಜ್ಞಾನದಿಂದ ಸಾಕಷ್ಟು ಉನ್ನತ ಗುಣಮಟ್ಟದ ಸಂಗೀತ ಬಳಕೆದಾರರ ಕಿವಿ ತಲುಪಲಿದೆ. ಈ ಸ್ಪೀಕರ್ ಮೂಲಕ ಕಿವಿ ಹೊಕ್ಕು ಮಧುರ ಸಂಗೀತ ಸ್ವರ್ಗಾನಂದ ನೀಡಲಿದೆ.

ಈ ಹೊಸ ಸಾಧನದ ತೂಕ ಕೇವಲ 62 ಪೌಂಡ್ಸ್, ಎತ್ತರ 14.1 ಇಂಚುಗಳು. ಇದರಲ್ಲಿರುವ ಇನ್ನೊಂದು ವಿಶೇಷತೆ ಎಂದರೆ ಇದು 3D ಪರಿಣಾಮ ಹೊಂದಿದೆ. ಈ 3D ವಿಶಿಷ್ಠತೆಗೆ ಸಾಥ್ ನೀಡುವುದು ಇದರಲ್ಲಿರುವ 7 ಇಂಚ್ ವೂಫರ್. ಈ ಹೊಸ ಸ್ಪೀಕರ್ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ರು. 9,80,000. ಬೆಲೆ ಸಾಕಷ್ಟು ದುಬಾರಿ ಎನಿಸಿದರೂ ಬೆಲೆಗೆ ತಕ್ಕ ವಿಶೇಷತೆ, ಗುಣಮಟ್ಟ ಇದರಲ್ಲಿರುವುದರಿಂದ ಕಾಸಿಗೆ ತಕ್ಕ ಕಜ್ಜಾಯ ಎನ್ನಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X