ಬೋಸ್ ಹೊಸ ಸೌಂಡ್ ಬಾರ್ ಸಿಸ್ಟಮ್ ಚೆನ್ನಾಗಿದೆ

Posted By: Staff

ಬೋಸ್ ಹೊಸ ಸೌಂಡ್ ಬಾರ್ ಸಿಸ್ಟಮ್ ಚೆನ್ನಾಗಿದೆ
ಬೋಸ್, ಗ್ಯಾಜೆಟ್ಸ್ ಮಾರುಕಟ್ಟೆಯಲ್ಲಿ ಸಂಗೀತ ಸಾಧನಗಳ ಬಿಡುಗಡೆಯ ಮೂಲಕ ಸಾಕಷ್ಟು ಸುದ್ದಿ ಮಾಡಿರುವ ಕಂಪನಿ. ಇದೀಗ ಹೊಸ ಸಾಧನ ಸೌಂಡ್ ಬಾರ್ ಸಿಸ್ಟಮ್ ಗಳ ಬಿಡುಗಡೆಗೆ ಈ ಕಂಪೆನಿ ಮುಂದಾಗಿದೆ. ಬಿಡುಗಡೆಗೆ ಕಾದಿರುವ ಎರಡು ಸಿಸ್ಟಮ್ ಗಳು- ಬೋಸ್ ಲೈಫ್ ಸ್ಟೈಲ್ 135 ಮತ್ತು ಬೋಸ್ ಸಿನಿಮೇಟ್ 1 SR ಸೌಂಡ್ ಬಾರ್ ಸಿಸ್ಟಮ್.

ಈ ಎರಡೂ ಸಿಸ್ಟಮ್ ಗಳು ಅತ್ಯಾಧುನಿಕವಾಗಿವೆ. ಇದರ ಆಡಿಯೋ ಕ್ವಾಲಿಟಿ ಮತ್ತು ಬಾಸ್ ಪರಿಣಾಮ ಗಮನಾರ್ಹವಾಗಿದೆ. ಈ ಸಾಧನಗಳು ಸುಪ್ರಿಮ್ ಎಂದೇ ಹೆಸರಾಗಿವೆ. ಈ ಸಿಸ್ಟಮ್ ಗಳ ವಿನ್ಯಾಸಗಳು ಸಾಕಷ್ಟು ವಿಶಿಷ್ಟವಾಗಿದ್ದು ಕೂಲ್ ಕೂಲ್ ಎನಿಸುತ್ತವೆ. ಇದು 4 HDMI ಇನ್ ಪುಟ್ ಗಳನ್ನು ನೀಡಬಲ್ಲದು. ಇದರಲ್ಲಿ ಡ್ಯುಯಲ್ FM ಮತ್ತು AM ರೇಡಿಯೋ ಟ್ಯೂನರ್ ಮತ್ತು ಐಪೋಡ್ ಡಾಕ್ ಇರುವುದು ಇನ್ನಷ್ಟು ಮನಸೆಳೆಯಲು ಕಾರಣವಾಗಿದೆ.

ಕೇವಲ ಒಂದೇ ಕೇಬಲ್ ಮೂಲಕ ಸೆಟ್ ಅಪ್ ಆಗಬಲ್ಲ ಸಿನಿಮೇಟ್ ಅತ್ಯಾಕರ್ಷಕವಾಗಿದೆ. ಲೈಫ್ ಸ್ಟೈಲ್ ನಲ್ಲಿ ಉತ್ತಮ ರಿಮೋಟ್ ಕಂಟ್ರೋಲ್ ಸೌಲಭ್ಯವಿದೆ. ಇದರಲ್ಲಿರುವ ಉತ್ಕೃಷ್ಟ ಫೇಸ್ ಗೈಡ್ ಅಸಾಮಾನ್ಯ ಸೌಂಡ್ ರೇಡಿಯೇಟರ್ ಈ ಸಾಧನದ ಅತ್ಯಂತ ಪ್ರಮುಖ ವಿಶೇಷತೆಯಾಗಿದೆ. ಟ್ರೂಫೇಸ್ ಡಿಜಿಟಲ್ ಸಿಗ್ನಲ್ ಪ್ರೊಸೆಸಿಂಗ್ ಸಾಮರ್ಥ್ಯವು ಇದರಲ್ಲಿರುವ ಇನ್ನೊಂದು ಹಾರ್ಡ್ ವೇರ್ ಪ್ಲಸ್ ಆಗಿದೆ.

ಈ ಎಲ್ಲಾ ತಂತ್ರಜ್ಞಾನವೂ ಇದರ 6.1x 93.5 x 12.4cm ಅಳತೆಯ ವಿಸ್ತಾರವಾದ ಬಾರ್ ಆಕಾರದಲ್ಲಿ ಅಡಕವಾಗಿದೆ. ಈ ಹೊಸ ಸಾಧನಗಳ ಬೆಲೆಗಳು ಈ ರೀತಿ ಇವೆ. ಬೋಸ್ ಲೈಫ್ ಸ್ಟೈಲ್ ಬೆಲೆ ಸುಮಾರು ರು. 1,20,000 ಹಾಗೂ ಸಿನಿಮೇಟ್ ಬೆಲೆ ರು. 75,000. ಕಾಸಿಗೆ ತಕ್ಕ ಕಜ್ಜಾಯ ಇಲ್ಲಿದೆ, ಆಯ್ಕೆ ನಿಮ್ಮದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot