ಜೀನಿಯಸ್ ಸ್ಪೀಕರ್ ನೀಡಲಿದೆ ಸಂಗೀತದ ರಸದೌತಣ

Posted By: Staff

ಜೀನಿಯಸ್ ಸ್ಪೀಕರ್ ನೀಡಲಿದೆ ಸಂಗೀತದ ರಸದೌತಣ
ಇನ್ ಸ್ಪಾನ್ ಇಂಫೋಟೆಕ್, ಜಗತ್ತಿನ ದೊಡ್ಡ ಐಟಿ ಡಿಸ್ಟ್ರಿಬ್ಯೂಷನ್ ಕಂಪೆನಿ ಹೊಸ USB ಸ್ಪೀಕರ್ ಬಿಡುಗಡೆಗೆ ಸಜ್ಜಾಗಿದೆ. ಈ ಹೊಸ ಸ್ಪೀಕರ್ ಹೆಸರು ಜೀನಿಯಸ್ SP-U150 ಸ್ಪೀಕರ್.

ಹೆಸರಿಗೆ ತಕ್ಕಂತೆ ಈ ಹೊಸ ಸ್ಪೀಕರ್ USB ಪೋರ್ಟ್ ನಿಂದ ಕಾರ್ಯ ನಿರ್ವಹಿಸುತ್ತದೆ. ನೋಟ್ ಬುಕ್ಸ್, ಪಿಸಿಗಳಿಗೆ ಇದು ಸಂಪರ್ಕ ಹೊಂದುವ ಸಾಮರ್ಥ್ಯ ಪಡೆದಿದೆ. ಇದು ಕೇವಲ 4 ವ್ಯಾಟ್ ಔಟ್ ಪುಟ್ ಸಾಮರ್ಥ್ಯ ಹೊಂದಿದ್ದರೂ ಇದರಲ್ಲಿರುವ 52 MM ಸ್ಪೀಕರಿನಿಂದ ಬ್ಯಾಲೆನ್ಸ್ ಆಗಿರುವ ಆಡಿಯೋ ಮತ್ತು ಸ್ಪಷ್ಟತೆ ಲಭ್ಯವಿದೆ.

ಇದರಲ್ಲಿರುವ 3.5 mm ಆಡಿಯೋ ಪ್ಲಗ್ ಮತ್ತು USB ಪ್ಲಗ್ ಗಳನ್ನು ಕಂಪ್ಯೂಟರ್ ಅಥವಾ ನೋಟ್ ಬುಕ್ ಗಳಿಗೆ ಹಾಕಿ ಆನ್ ಮಾಡಿದರಾಯಿತು. ಒಳ್ಳೆ ಗುಣಮಟ್ಟದ ಸಂಗೀತ ನಿಮ್ಮ ಕಿವಿ ತಲುಪುತ್ತದೆ.

ಇದರ ಎದುರಿನಲ್ಲಿರುವ ಪನೆಲ್ ನಲ್ಲಿ ಎಕ್ಸ್ ಟ್ರಾ ಸ್ಪೀಕರ್ ಗಳಿವೆ. ಅದರ ಮೂಲಕ CD/MP3 ಹಾಗೂ ಮೊಬೈಲ್ ಗಳಿಗೆ ಸಂಪರ್ಕ ಕಲ್ಪಿಸಿಯೂ ಸಂಗೀತ ಆಸ್ವಾದಿಸಬಹುದು. ಈ ಸ್ಪೀಕರಿನಲ್ಲಿ ಹೆಡ್ ಫೊನ್ ಜ್ಯಾಕ್ ಕೂಡ ಲಭ್ಯವಿದೆ. ಆಕರ್ಷಕ ಬಣ್ಣ, ವಿನ್ಯಾಸದ ಜೊತೆಗೆ ಕಪ್ಪು ಬಣ್ಣದ ಫಿನಿಶಿಂಗ್ ಕೂಡ ಇದರಲ್ಲಿದೆ.

ಇದರಲ್ಲಿರುವ 180/20/ KHz ಫ್ರೀಕ್ವೆನ್ಸಿಯಿಂದ ನಿಮಗೆ ಅಸಾಧರಣ ಗುಣಮಟ್ಟ ಲಭ್ಯವಿದೆ. ಈ ಸ್ಪೀಕರ್ ಹೊಂದಿರುವ 85 dB, ಸಿಗ್ನಲ್ ಟು ನಾಯಿಸ್ ರೇಶೀಯೋ ನೀವು ಕಡಿಮೆ ವಾಲ್ಯೂಮಿನಲ್ಲಿ ಸಂಗೀತವನ್ನು ಆಸ್ವಾದಿಸಲೂ ಸಹಕಾರಿಯಾಗಿದೆ.

ಈ ಹೊಸ ಸ್ಪೀಕರ್ ಸಾಕಷ್ಟು ಆಪರೇಟಿಂಗ್ ಸಿಸ್ಟಮ್ ಗಳ ಜೊತೆ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಅವು-ಮೈಕ್ರೋಸಾಫ್ಟ್ ವಿಂಡೋಸ್, ವಿಂಡೋಸ್ ವಿಸ್ಟಾ, ವಿಂಡೋಸ್ XP, ಮ್ಯಾಕ್ 10.0 ಮತ್ತು ಹೆಚ್ಚಿನ ಆವೃತ್ತಿಯ ಮಾದರಿ, ಮುಂತಾದವುಗಳು.

1 ವರ್ಷದ ವಾರಂಟಿ ಹೊಂದಿರುವ ಈ ಸ್ಪೀಕರ್ ಗಳ ಬೆಲೆ ಕೇವಲ ರು. 750. ಇಷ್ಟು ಕಡಿಮೆ ಬೆಲೆಗೆ ಹೋಲಿಸಿದರೆ ಸ್ಪೀಕರ್ ಚೆನ್ನಾಗಿಯೇ ಇದೆ. ನೋಡಿ, ನಿಮಗೂ ಇಷ್ಟವಾಗಬಹುದು, ಖರೀದಿಸಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot