ಸಂಗೀತದ ದಿವ್ಯಾನುಭವಕ್ಕೆ ಮರ್ಕ್ಯುರಿ ಸೌಂಡ್ ಸಿಸ್ಟಮ್

Posted By: Staff

ಸಂಗೀತದ ದಿವ್ಯಾನುಭವಕ್ಕೆ ಮರ್ಕ್ಯುರಿ ಸೌಂಡ್ ಸಿಸ್ಟಮ್
ಈಗೀಗ ಮೊಬೈಲ್ ಮಾರುಕಟ್ಟೆಯ ಜೊತೆಜೊತೆಗೆ ಬೆಳೆಯುತ್ತಿದೆ ಕಂಪ್ಯೂಟರ್ ಲ್ಯಾಪ್ ಟಾಪ್ ಮತ್ತು ಸೌಂಡ್ ಸಿಸ್ಟಮ್ಸ್. ಅದರಲ್ಲೂ ಟ್ಯಾಬ್ಲೆಟ್ ಗಳು, ನೋಟ್ ಬುಕ್ ಗಳೂ ಕೂಡ ಗ್ಯಾಜೆಟ್ಸ್ ಗಳನ್ನು ಸೇರಿಕೊಂಡು ಅವೂ ಕೂಡ ಸ್ಪರ್ಧೆಯಲ್ಲಿ ಸಾಕಷ್ಟು ಪೈಪೋಟಿ ನೀಡುತ್ತಿವೆ. ಈಗ ನಾವು ಗ್ಯಾಜೆಟ್ಸ್ ಗಳಲ್ಲೊಂದಾದ ಹೋಮ್ ಥಿಯೇಟರ್ ಬಗ್ಗೆ ತಿಳಿಯೋಣ...

ಸಾಕಷ್ಟು ಪ್ರಸಿದ್ಧವಾದ ಕಂಪೆನಿ ಮರ್ಕ್ಯುರಿ ಕೋಬಿಯನ್, ಹೋಮ್ ಥಿಯೇಟರ್ ಸ್ಪೀಕರ್ ಸಿಸ್ಟಮ್ ಬಿಡುಗಡೆಗೆ ಮುಂದಾಗಿದೆ. ಅದೂ ಸಾಮಾನ್ಯವಾದುದಲ್ಲ. ಇನ್ನೂ ಯಾರೂ ಬಿಡುಗಡೆ ಮಾಡಿರದಂಥ, ಸದ್ಯಕ್ಕೆ ಯಾರೂ ಬಿಡುಗಡೆ ಮಾಡಲಾರದಂಥ ಸೌಂಡ್ ಸಿಸ್ಟಮ್ ಬಿಡುಗಡೆಯನ್ನು ಘೋಷಿಸಿದೆ.

ಈಗಾಗಲೇ ಬಿಡುಗಡೆಯಾಗಿರುವ ಮರ್ಕ್ಯುರಿ HT 7800 ಜೊತೆಗೆ SW2600, SW2850U, and SW5200U ಈ ಮೂರು ಹೊಸದಾಗಿ ಬಿಡುಗಡೆಯಾಗಲಿರುವ ಪಟ್ಟಿಗೆ ಸೇರಿದೆ. ಇವನ್ನು ಸಬ್ ವೂಫರ್ ಎಂದು ಕರೆಯಲಾಗಿದೆ.

ಇದರಲ್ಲಿ ಇನ್ ಬಿಲ್ಟ್ SD ಕಾರ್ಡ್, USB, 2.5 ಇಂಚ್ ಸೆಟಲೈಟ್, 4 ಇಂಚುಗಳ ಮ್ಯಾಗ್ನೆಟಿಕಲಿ ಸಬ್ ವೂಫರ್ಸ್, SW ಸರೀಸ್ ಗೆ ವುಡನ್ ಬಾಡಿ, ಸ್ಪೀಕರ್ ಜೊತೆ FM ರೇಡಿಯೋ ಕೂಡ ಇದೆ.

ಈ ಎಲ್ಲ ಸ್ಪೀಕರ್ ಗಳ ಬೆಲೆ ರು. 1,299 ರಿಂದ ರು. 3,599 ರವರೆಗೆ ಇದೆ. ಈ ಸ್ಪೀಕರ್ಸ್ ಗಳನ್ನು ಬಳಸಿ ನೀವು ಸಂಗೀತ ಆಲಿಸಿದರೆ ಸ್ವರ್ಗ ಸಮಾನ ಸಂತೋಷ ನಿಮ್ಮದಾಗುವುದರಲ್ಲಿ ಸಂದೇಹವೇ ಇಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot