ಹೊಸ ಸನ್ಸಾ ಸೂಪರ್ ಸಂಗೀತ ಸಾಧನ ಇಲ್ಲಿದೆ

Posted By: Staff

ಹೊಸ ಸನ್ಸಾ ಸೂಪರ್ ಸಂಗೀತ ಸಾಧನ ಇಲ್ಲಿದೆ
ಮಾರುಕಟ್ಟೆಯಲ್ಲೀಗ ಸಂಗೀತ ಸಾಧನಗಳದ್ದೇ ಸದ್ದು! ಅಂದರೆ ಮನೆ-ಮನಗಳಲ್ಲಿ ಸಂಗೀತ ಸಾಗರ ಹರಿಯುತ್ತಿದೆ ಎನ್ನಬಹುದು. ಕಾರಣ ಗ್ಯಾಜೆಟ್ಸ್ ಲೋಕದಲ್ಲಿ ಬರುತ್ತಿರುವ ಹೇರಳವಾದ ಮ್ಯೂಸಿಕ್ ಸಿಸ್ಟಮ್ ಗಳು ಬಹಳಷ್ಟು ವೇಗವಾಗಿ ಮಾರಾಟ ಕೂಡ ಕಾಣುತ್ತಿವೆ. ಹೊಸ ಸಾಧನಗಳ ಪಟ್ಟಿಗೆ ಹೊಸ ಸೇರ್ಪಡೆ ಹೊಸ ಸಾನ್ ಡಿಸ್ಕ್ ಗ್ಯಾಜೆಟ್ಸ್ ಕಂಪೆನಿಯ ಹೊಸ ಸನ್ಸಾ ಸಾನ್ ಡಿಸ್ಕ್ MP3 ಪ್ಲೇಯರ್.

ಇದು 1.1 ಇಂಚ್ ಎಲ್ ಸಿ ಡಿ ಸ್ಕ್ರೀನ್ ಹೊಂದಿದ್ದು ಆಲ್ಬಮ್ ಆರ್ಟ್ ಡಿಸ್ ಪ್ಲೇ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಆಂತರಿಕ, 4 GB ಮತ್ತು 8 GB ಸಾಮರ್ಥ್ಯದ 2 ಪ್ರತ್ಯೇಕ ಫ್ಲೇಯರ್ ಸಾಧನಗಳಿವೆ. ಜೊತೆಗೆ ಮೈಕ್ರೋ SDHC ಕಾರ್ಡ್ ಮೂಲಕ 32 GB ಗೆ ವಿಸ್ತರಿಸಬಲ್ಲ ಮೆಮೊರಿ ಕೂಡ ಇದೆ. FM ರೇಡಿಯೋ ಕೂಡ ಹೊಂದಿರುವ ಇದು ವೈಸ್ ರೆಕಾರ್ಡಿಂಗ್, ಪ್ಲೇಬ್ಯಾಕ್, ಇನ್ ಬಿಲ್ಟ್ ಮೈಕ್ರೋ ಫೋನ್ ಗಳನ್ನು ಹೊಂದಿದೆ. 15 ತಾಸುಗಳ ಬ್ಯಾಟರಿ ಬ್ಯಾಕಪ್ ಇದರಲ್ಲಿದೆ.

ಫೇಸ್ ಬುಕ್ ಅಥವಾ ಟ್ವಿಟ್ಟರ್ ಗಲ ಫೈಲುಗಳನ್ನು ಶೇರ್ ಮಾಡಲು ದಿಜಿತ್ ಅಪ್ಲಿಕೇಶನ್ನನ್ನು ಆನ್ ಲೈನ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಲಭ್ಯವಿರುವ ಫೀಚರ್ಸ್ ಗಳಿಗೆ ಹೋಲಿಸಿದರೆ ಬೆಲೆ ಸಾಕಷ್ಟು ಕಡಿಮೆ ಎಂದೇ ಹೇಳಬೇಕು. 4GB ಪ್ಲೇಯರ್ ಬೆಲೆ ರು. 2,500 ಮತ್ತು 8GB ಬೆಲೆ ರು. 3,500. ಈ ಬೆಲೆಯಲ್ಲಿ ಇಷ್ಟು ಒಳ್ಳೆಯ ಮ್ಯೂಸಿಕ್ ಪ್ಲೇಯರ್ ಸಿಗಲಿದೆ, ನಿಮಗೂ ಬೇಕು ತಾನೇ!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot