ಐಪೋಡ್ ಹೊಸ ಮ್ಯೂಸಿಕ್ ಪ್ಲೇಯರ್ ಸೂಪರ್!

Posted By: Staff

ಐಪೋಡ್ ಹೊಸ ಮ್ಯೂಸಿಕ್ ಪ್ಲೇಯರ್ ಸೂಪರ್!
ಹರ್ಮಾನ್ ಕಾರ್ಡೋನ್ ಕಂಪನಿ ಹೊಸ ಐಪೋಡ್ ಸಿಸ್ಟಮ್ ಬಿಡುಗಡೆ ಮಾಡಿದೆ. ಇದು AC/DC ಐಪೋಡ್ ಮತ್ತು ಐಫೊನ್ ನಲ್ಲಿ ಡಾಕಿಂಗ್ ಸ್ಪೀಕರ್ ಸಿಸ್ಟಮ್ ಮೂಲಕ ಕಾರ್ಯ ನಿರ್ಬಹಿಸಲಿದೆ. ಇದರಲ್ಲಿ ಸಾಕಷ್ಟು ಹೆಚ್ಚಿನ ಆಡಿಯೋ ತಂತ್ರಜ್ಞಾನ ಹಾಗೂ ಸಂಬಂಧಿತ ಭಾಗಗಳು ಲಭ್ಯವಿದೆ. ಆಂತರಿಕ CD ಪ್ಲೇಯರ್, ಸಬ್ ವೂಫರ್ ಯುನಿಟ್, ಸ್ಟಾಂಡರ್ಡ್ ಗುಣಮಟ್ಟ ಹಾಗೂ ಬಾಸ್ ತಂತ್ರಜ್ಞಾನ ಇದರಲ್ಲಿದೆ.

ಈ ಹೊಸ ಸಾಧನದಲ್ಲಿ RDS ತಂತ್ರಜ್ಞಾನ ಒಳಗೊಂಡಿರುವ FM ಟ್ಯೂನರ್, ಸ್ಟೇಶನ್ ಸ್ಟೋರೇಜ್ ಸೌಲಭ್ಯ ಲಭ್ಯವಿದೆ. 7.3 ಇಂಚುಗಳ ಪಾಲಿಶ್ಡ್ ಚೇಸಿಸ್ ಇರುವ ಇದು ಕರ್ವ್ ಗಳನ್ನೂ ಹೊಂದಿರುವುದರಿಂದ ಅತ್ಯಾಕರ್ಷಕವಾಗಿ ಕಾಣುತ್ತದೆ. ಇದರಲ್ಲಿ 65Hz ಮತ್ತು 20 KHz ಫ್ರೀಕ್ವೆನ್ಸೀಸ್ ಲಭ್ಯವಿದೆ. 75dB ಸಿಗ್ನಲ್ ರೇಶಿಯೋ, 3S ಕ್ವಾಲಿಟಿ ಆಡಿಯೋ ಮತ್ತು ವೀಡಿಯೋ ಇದರಲ್ಲಿದೆ. ಮಾರುಕಟ್ಟೆಯಲ್ಲಿ ಈಗ ಸಾಕಷ್ಟು ಬೇಡಿಕೆಯಲ್ಲಿರುವ MP3/WMA- CD ಪ್ಲೇಬ್ಯಾಕ್, iOS ಕಾಂಪಿಟೆಬಲ್ ಆಪ್ಶನ್ ಇದರಲ್ಲಿದೆ.

IR ರಿಮೋಟ್ ಕಂಟ್ರೋಲ್, ಅಲಾರ್ಮ್ ಮತ್ತು ಸ್ಲೀಪರ್ ಟೈಮರ್ ಕೂಡ ಇದರಲ್ಲಿದೆ. ಇದು 3 ಲೈನ್ ಡಾಕ್ ಮ್ಯಾಟ್ರಿಕ್ಸ್ ಹೊಂದಿದ್ದು ಟ್ರಾಕ್ ಟಿಲ್ಟ್ ಮತ್ತು ಉಳಿದ ಆರ್ಟಿಸ್ಟ್ ಮಾಹಿತಿಗಳನ್ನು ಡಿಸ್ ಪ್ಲೇ ಮಾಡಲಿದೆ. ಈ ಹೊಸ ಸಾಧನದ ಬೆಲೆ ರು. 34,000 ಇದ್ದು ಬೆಲೆಗೆ ತಕ್ಕ ವಿಶೇಷತೆಗಳು ಇದರಲ್ಲಿವೆ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot