ಹೊಸ ಆಡಿಬಲ್ ರಶ್ ಸ್ಟೀರಿಯೋ ಸಖತ್ ಹಾಟ್ !

Posted By: Staff

ಹೊಸ ಆಡಿಬಲ್ ರಶ್ ಸ್ಟೀರಿಯೋ ಸಖತ್ ಹಾಟ್ !
ಈಗ ಗ್ಯಾಜೆಟ್ಸ್ ಲೋಕದಲ್ಲಿ ಸಂಗೀತ ಸಾಧನಗಳದ್ದೇ ಸದ್ದು-ಸುದ್ದಿ. ಹೊಸ ಹೊಸ ಮ್ಯೂಸಿಕ್ ಸಿಸ್ಟಮ್ ಗಳು, ಗ್ಯಾಜೆಟ್ಸ್ ಗಳಿಗೆ ಹಾಗೂ ಕಾರುಗಳಿಗೆ ಎಕ್ಸೆಸರಿಗಳಾಗಿ ಬಳಕೆ ಆಗುತ್ತಿವೆ. ಇವು ಗ್ರಾಹಕರಿಂದ, ಬಳಕೆದಾರರಿಂದ ಸಾಕಷ್ಟು ಹೊಗಳಿಕೆಗೆ ಪಾತ್ರವಾಗಿವೆ. ಸ್ಮಾರ್ಟ್ ಫೊನ್ ಗಳಿಗಾಗಿ ಈಗ ಮಾರುಕಟ್ಟೆಗೆ ಬರುತ್ತಿದೆ ಹೊಸ ಆಡಿಬಲ್ ರಶ್ ಸಂಪೂರ್ಣ ಪ್ಯಾಕೇಜ್ ಸ್ಟೀರಿಯೋ ಬೈಸಿಕಲ್ ಮ್ಯೂಸಿಕ್ ಡಾಕ್.

ಸ್ಮಾರ್ಟ್ ಫೊನುಗಳಿಗೆ ಹೊಸ ಸ್ಟೀರಿಯೋ ಒದಗಿಸುತ್ತಿರುವ ಆಡಿಬಲ್ ರಶ್ ಒಂದು ಸ್ಪೀಕರ್ ಹಾಗೂ USB ಚಾರ್ಜರ್ ಮೂಲಕ ಇದರ ಕಾರ್ಯ ನಿರ್ವಹಿಸುತ್ತದೆ. ಬೈಸಿಕಲ್ ಗಳಿಗೆ ಅತ್ಯಂತ ಪರಿಣಾಮಕಾರಿಯಾಗಿರುವ ಸ್ಟೀರಿಯೋ ಡಾಕ್ ಹಾಗೂ ಜಾಗಿಂಗ್ ಸ್ಟ್ರೋಲರ್ಸ್ ಮುಂತಾದವುಗಳು ಸಾಕಷ್ಟು ಉನ್ನತ, ಶ್ರೇಷ್ಠ ಸಂಗೀತವನ್ನು ಸವಿಯಲು ನೆರವಾಗಲಿದೆ.

ಬೈಕ್ ಚಾಲನೆಯಲ್ಲಿ ಇರುವಾಗ ಕಿವಿಗೆ ಈಯರ್ ಫೋನ್ಸ್ ಗಳನ್ನು ಹಾಕಿಕೊಂಡು ಈ ಸಂಗೀತವನ್ನು ಕೇಳುತ್ತಿದ್ದರೆ ಯಾರಿಗೇ ಆದರೂ ಸ್ವರ್ಗದಲ್ಲಿ ಇರುವಂತೆ ಭಾಸವಾದರೆ ಅಚ್ಚರಿಯಿಲ್ಲ. ಈ ಡಾಕ್- MP3, ಫೊನ್ಸ್ ಹಾಗೂ ಹೈ ಎಂಡ್ ಆಡಿಯೋ ಪ್ಲೇಯರ್ಸ್ ಗಳಾದ ಐಫೋನ್, ಐಪೋಡ್ಸ್ ಹಾಗೂ ಇತರ ಆಂಡ್ರಾಯ್ಡ್ ಫೊನುಗಳಿಗೆ ಸಂಪರ್ಕ ಕಲ್ಪಿಸಿ ಸುಲಲಿತವಾದ ಸಂಗೀತಸುಧೆ ಸವಿಯಲು ಸಹಕರಿಸಲಿದೆ.

ಈ ಹೊಸ ಸಂಗೀತ ಸಾಧನದಿಂದ ಬೈಕಿನಲ್ಲಿ ಜಾಲಿ ರೈಡ್ ಮಾಡುವಾಗ ಸುಪರ್ ಸಂಗೀತದ ಕೊರತೆ ನೀಗಲಿರುವುದು ಗ್ಯಾರಂಟಿ. ಇದೀಗ ಆಡಿಬಲ್ ರಶ್ ನಿಂದ ಮಲ್ಟಿಪರ್ಪಸ್ ಮ್ಯೂಸಿಕ್ ಗೇರ್ ಕೂಡ ಆನ್ ಲೈನಿನಲ್ಲಿ ಲಭ್ಯವಿದೆ. ಇದು ಸಾಕಷ್ಟು ಕಡಿಮೆ ಬೆಲೆ ಹೊಂದಿದೆ ಎಂಬ ಸುದ್ದಿ ಮೊಬೈಲ್ ಮಾರುಕಟ್ಟೆಯಿಂದ ಬಂದಿದೆ.

ಆದರೆ ಬೆಲೆ ಎಷ್ಟು ಎಂಬುದು ಸದ್ಯಕ್ಕೆ ರಹಸ್ಯ. ಬಿಡುಗಡೆಯ ದಿನಾಂಕವೂ ಸದ್ಯಕ್ಕೆ ನಿಗದಿಯಾಗಿಲ್ಲ. ಮಾಹಿತಿ ಸಿಕ್ಕ ತಕ್ಷಣ ನಿಮ್ಮ ಮುಂದಿಡುತ್ತೇವೆ, ನೋಡಲು ಮರೆಯದಿರಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot