ಬ್ಲೂಟೂಥ್ ನಿಂದ ಸಂಗೀತ ಕೇಳುವುದು ಈಗ ಇನ್ನೂ ಚೆಂದ

Posted By: Staff

ಬ್ಲೂಟೂಥ್ ನಿಂದ ಸಂಗೀತ ಕೇಳುವುದು ಈಗ ಇನ್ನೂ ಚೆಂದ
ಸಂಗೀತವನ್ನು ಒಬ್ಬೊಬ್ಬರು ಒಂದೊಂದು ರೀತಿ ಸವಿಯುತ್ತಾರೆ. ಕೆಲವರಿಗೆ ಹೆಡ್ ಸೆಟ್ ಇಷ್ಟವಾದರೆ ಕೆಲವರು ಸ್ಪೀಕರ್ ಇಷ್ಟ ಪಡುತ್ತಾರೆ. ಆದರೆ ಬ್ಲೂಟೂಥ್ ಸ್ಪೀಕರ್ ನಿಂದ ಸಂಗೀತ ಕೇಳುವುದು ಒಂಥರ ವಿಶೇಷ ಅನುಭವ.

ಸೌಂಡ್ ಮ್ಯಾಟರ್ಸ್ ಎಂಬ ಕಂಪನಿ ನೂತನ FoxLV2 ಪ್ಲಾಟಿನಮ್ ಬ್ಲೂಟೂಥ್ ಸ್ಪೀಕರ್ ಹೊರತಂದಿದೆ. ಸಂಗೀತದ ಉತ್ಕ್ರಷ್ಟ ಗುಣಮಟ್ಟ ಹೊಂದಿರುವ ಈ ಸ್ಪೀಕರ್ ನಲ್ಲಿ 20 ಗಂಟೆ ನಿರಂತರವಾಗಿ ಸಂಗೀತ ಕೇಳಬಹುದು. ಹೊಸ ಆಡಿಯೋಫೈಲ್ ಕೇಬಲಿಂಗ್ ತಂತ್ರಜ್ಞಾನವಿರುವ ಈ ಸ್ಪೀಕರ್ ನಲ್ಲಿ ಬ್ಲೂಟೂಥ್ ನಿಂದ ಸಿಗ್ನಲ್ ಗಳನ್ನೂ ಪಡೆಯಬಹುದು.

ಇದರಲ್ಲಿ ವಾತಾವರಣದ ಶಬ್ಧ ಮಾಲಿನ್ಯ ನಿಗ್ರಹದ ಸೌಲಭ್ಯವೂ ಕೂಡ ಇದೆ. ಮೈಕ್ರೋಫೋನನ್ನು ಬ್ಲೂಟೂಥ್ ನಲ್ಲಿ ಹಾರ್ಡ್ ವೇರ್ ನಂತೆ ಬಳಸಲಾಗಿದ್ದು, ಇದನ್ನು ಕರೆ ಮಾಡಲೂ ಉಪಯೋಗಿಸಬಹುದು. 9.5 ಔನ್ಸ್ ಇರುವ ಈ ಬ್ಲೂಟೂಥ್ ಸ್ಪೀಕರ್ ಬ್ಲೂ ಟೂಥ್ ಮತ್ತು ಬ್ಲೂಟೂಥ್ ಅಲ್ಲದ ಆವೃತ್ತಿ ಹೊಂದಿದೆ. ಇದರಲ್ಲಿ CSR apt-X ತಂತ್ರಜ್ಞಾನವೂ ಲಭ್ಯವಿದೆ.

ಮೊದಲು ಕೇವಲ ಕಪ್ಪು ಬಣ್ಣದಲ್ಲಿದ್ದ ಸ್ಪೀಕರ್ ಗೆ ಈಗ ಪ್ಲಾಟಿನಮ್ ಲುಕ್ ನೀಡಲಾಗಿದೆ. ನವೆಂಬರ್ ನಂತರ ಭಾರತದಲ್ಲಿ ಸೌಂಡ್ ಮ್ಯಾಟರ್ಸ್ ನ ಬ್ಲೂಟೂಥ್ ಮತ್ತು ಬ್ಲೂಟೂಥ್ ಇಲ್ಲದ ಎರಡು ಆವೃತ್ತಿಗಳೂ ಲಭ್ಯವಿದ್ದು, ಬ್ಲೂಟೂಥ್ 11,250 ರೂ ಮತ್ತು ನಾನ್ ಬ್ಲೂಟೂಥ್ 8,300 ರೂ ಇರಬಹುದೆಂದು ನಿರೀಕ್ಷಿಸಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot