ಆಪಲ್ ಐಪೋಡ್ ಕಣ್ಮರೆಯಾಗಲಿದೆಯೆ?

By Super
|
ಆಪಲ್ ಐಪೋಡ್ ಕಣ್ಮರೆಯಾಗಲಿದೆಯೆ?
ಇನ್ನು ಮುಂದೆ ಆಪಲ್ ಐಪಾಡ್ ಸಫಲ್ , ಆಪಲ್ ಐಪಾಡ್ ಕ್ಲಾಸಿಕ್ ಕಣ್ಮರೆಯಾಗುವ ಸಾಧ್ಯತೆಯಿದೆ ಎಂಬ ಸುದ್ದಿ ಸಂಗೀತ ಪ್ರಿಯರಿಗೆ ಅಪ್ರಿಯತೆಯನ್ನು ಉಂಟುಮಾಡಿದೆ.

ಆಪಲ್ ಕಂಪನಿಯ ಈ ಎರಡು ವಸ್ತುಗಳನ್ನು ತೆಗೆದುಹಾಕುವ ಬಗ್ಗೆ ಅಕ್ಟೋಬರ್ 4 ರಂದು ಸಭೆ ಸೇರಿದ ಬಳಿಕ ನಿರ್ಧರಿಸಲಾಗುವುದು ಎಂಬ ವದಂತಿ ಹಬ್ಬಿದೆ. ಈ ಎರಡು ಉತ್ಫನ್ನಗಳು ಸಂಗೀತ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು.

ಆಪಲ್ ಐಪಾಡ್ ಸಫಲ್ ಇಷ್ಟವಾಗಲು ಕಾರಣ:

1.4 ಇಂಚು ಎತ್ತರ,1.24 ಅಗಲವಿರುವ ಈ ಐಪಾಡ್ 12.5ಗ್ರಾಂ ತೂಕವನ್ನು ಹೊಂದಿದೆ. ಇದರಲ್ಲಿ ಶಬ್ದದ ತರಂಗಾಂತರಗಳು 20Hz -20,000Hz ಇದ್ದು ಶಬ್ದದಲ್ಲಿ ಸ್ಪಷ್ಟತೆ ಇದೆ. ಇದರಲ್ಲಿ 2 GB ಪ್ಲಾಶ್ ಡ್ರೈವ್ ಸಾಮರ್ಥ್ಯ ಹೊಂದಿದೆ.USB ಪ್ಲಾಶ್ ಡ್ರೈವ್ ಮುಖಾಂತರ ಬಳಕೆದಾರರು ಮಾಹಿತಿಗಳನ್ನು ಪಡೆಯುವುದು,ಹಾಗೂ ಮಾಹಿತಿಯನ್ನು ರವಾನಿಸಬಹುದು. ಇದರ ಬ್ಯಾಟರಿ ಸಾಮರ್ಥ್ಯ 15 ಗಂಟೆ ಹೊಂದಿದ್ದು ಅತಿ ಕಡಿಮೆ ಸಮಯದಲ್ಲಿ ಚಾರ್ಜ್ ಮಾಡಬಹುದು.

ಆಪಲ್ ಐಪಾಡ್ ಕ್ಲಾಸಿಕ್ ಇಷ್ಟವಾಗಲು ಕಾರಣ

ಇದರಲ್ಲಿ LCD ಡಿಸ್ ಪ್ಲೇ, ಬ್ಯಾಕ್ ಲೈಟ್ ಸೌಲಭ್ಯವಿದೆ. ಇದರ ಸ್ಕ್ರೀನ್ 240 ಪಿಕ್ಷಲ್ ಹೊಂದಿದೆ.ಇದು 40,000 ಹಾಡನ್ನು ಹಾಗೂ 25,000 ಪೋಟೋಗಳನ್ನು ಸಂಗ್ರಿಹಿಸಿಕೊಟ್ಟು ಕೊಳ್ಳುವ ಸಾಮರ್ಥ್ಯ ಹೊಂದಿದೆ. ಹಾರ್ಡ್ ಡ್ರೈವ್ ಸಪೋರ್ಟ್ 160GB ಹೊಂದಿದೆ.

ಇದು ಬೆಲೆಯಲ್ಲಿ ಸಹ ಜನಸಾಮಾನ್ಯರಿಗೆ ಎಟುಕುವಂತಿದ್ದು ಆಪಲ್ ಐಪಾಡ್ ಸಫಲ್ ರೂಪಾಯಿ 3,200, ಆಪಲ್ ಐಪಾಡ್ ಕ್ಲಾಸಿಕ್ ಗೆ 12,500 ಆಗಿದೆ.

ಈ ಎರಡು ಐಪೋಡ್ ಗಳು ಸಂಗೀತ ಪ್ರಿಯರಲ್ಲಿ ಒಂದು ಹೊಸ ಲೋಕವನ್ನೆ ಸೃಷ್ಠಿಸಿತು. ಈ ಎರಡೂ ಐಪೋಡ್ ಗಳಿಗೆ ಭಾರತದಲ್ಲಿ ಒಳ್ಳೆಯ ಬೇಡಿಕೆಯಿದ್ದು, ಈ ಮಾಡಲ್ ಗಳಿಗೆ ಬದಲಾಗಿ ಬರುವ ಐಪೋಡ್ ಗುಣಮಟ್ಟದಲ್ಲಿ ಈ ಎರಡು ಮಾಡಲ್ ಗಳಿಗಿಂತ ಹೇಗೆ ಭಿನ್ನವಾಗಿರಬಹುದು ಎಂಬ ಕುತೂಹಲವನ್ನು ಕೆರಳಿಸಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X