ಫಿಲಿಪ್ಸ್ ನಲ್ಲೀಗ ಹೊಸ ಸ್ಪೀಕರ್ ಡಕ್ ಸಿಸ್ಟಮ್

Posted By: Staff

ಫಿಲಿಪ್ಸ್ ನಲ್ಲೀಗ ಹೊಸ ಸ್ಪೀಕರ್ ಡಕ್ ಸಿಸ್ಟಮ್
ಸ್ವಲ್ಪ ದಿನಗಳ ಹಿಂದೆ IFA ಫಿಲಿಪ್ಸ್ ಅದರ ಹೊಸ ಸ್ಪೀಕರ್ ಡಕ್ ಸಿಸ್ಟಮ್ ಅನ್ನು ಮೈಕ್ರೋ USB ಸ್ಮಾರ್ಟ್ ಪೋನಿನೊಂದಿಗೆ ಬಳಸಬಹುದು ಎಂದು ಘೋಷಿಸಲಾಗಿತ್ತು. ಇದು ಆಂಡ್ರೋಯ್ಡ್ ಪ್ರಿಯರಲ್ಲಿ ಅಚ್ಚರಿಯನ್ನು ಉಂಟುಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಆಂಡ್ರೋಯ್ಡ್ ಬಳಕೆದಾರರು ಈಗ ಒಂದೇ ಸ್ಪೀಕರ್ ಡಕ್ ಬಳಸುತ್ತಿದ್ದು , ಫಿಲಿಪ್ಸ್ ಫಿಡೆಲಿಯೋ ಆಂಡ್ರೋಯ್ಡ್ ಆಡಿಯೋ ಡಕ್ ಸ್ಮಾರ್ಟ್ ಫೋನನ್ನು ಪ್ರತಿಧ್ವನಿಸುವಂತೆ ಮಾಡಿದೆ.

ಐಪಾಡ್ ಡಕ್ ಅನ್ನು ಫಿಡೆಲಿಯೋದೊಂದಿಗೆ ಹೋಲಿಸಿದಾಗ ಎರಡು ಪ್ರಮುಖ ಅಂಶಗಳು ಕಂಡುಬರುತ್ತವೆ.
1. ಮೈಕ್ರೋ USB ಕನೆಕ್ಟರ್ ಬದಲು ಆಪಲ್ 30 ಪಿನ್ ಕನೆಕ್ಟರ್ ಬಳಸಲಾಗಿದೆ.
2. ಇದರ ಹಿಂಭಾಗದಲ್ಲಿ ಸಹ ಬ್ಲೂಟೂತ್ ಸಂಪರ್ಕವಿದ್ದು ಇದು ಕೊಂಡುಯ್ಯುಲು ಸುಲಭವಾಗಿದೆ.

ಫಿಲಿಪ್ಸ್ ಸ್ಪೀಕರ್ ಡಕ್ ಅನ್ನು ಆಂಡ್ರೋಯ್ಡ್ ಸ್ಮಾರ್ಟ್ ಪೋನಿಗಾಗಿ ತಯಾರಿಸಲಾಗಿದೆ. ಇದರಲ್ಲಿರುವ ಬ್ಲೂಟೂತ್ ಕನೆಕ್ಷನ್ ಹಾಡನ್ನು ಆಂಡ್ರೋಯ್ಡ್ ಸ್ಮಾರ್ಟ್ ಪೋನಿಂದ ಸ್ಪೀಕರ್ ಗೆ ವರ್ಗಾವಣೆ ಮಾಡುವಂತಿದೆ. ಈ ರೀತಿ ಇರುವುದರಿಂದ ಶಬ್ದ ಉತ್ತಮ ಗುಣಮಟ್ಟದಲ್ಲಿ ಕೇಳಿಬರುವುದು.

ಫಿಲಿಪ್ಸ್ ಫಿಡೆಲಿಯೋ ಆಡಿಯೋ ಡಕ್ ನ ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು , ಫಿಲಿಪ್ಸ್ ಫಿಡೆಲಿಯೋ ಅಪ್ಲೀಕೇಶನ್ ಅನ್ನು ಉಪಯೋಗಿಸಬೇಕಾಗಿದೆ. ಅಪ್ಲೀಕೇಶನ್ ಅನ್ನು ಆಂಡ್ರೋಯ್ಡ್ ಮಾರ್ಕಟ್ ನಿಂದ ಡೌನ್ ಲೋಡ್ ಮಾಡಬಹುದಾಗಿದೆ.

ಬಳಕೆದಾರರಿಗೆಗೆ ಸುಲಭವಾಗುವಂತೆ ಸ್ಮಾರ್ಟ್ ಪೋನಿನಲ್ಲಿ QR ರೀಡರ್ ಅನ್ನು ಪರಿಚಯಿಸಲಾಗಿದೆ. ಒಂದು ವೇಳೆ QR ರೀಡರ್ ನಿಮ್ಮ ಸ್ಮಾರ್ಟ್ ಪೋನಿನಲ್ಲಿ ಇಲ್ಲವೆಂದಾದರೆ ಆಂಡ್ರೋಯ್ಡ್ ಮಾರ್ಕಟ್ ನಲ್ಲಿ ಅಪ್ಲೀಕೇಶನ್ ಅನ್ನು ಫಿಲಿಪ್ಸ್ ಫಿಡೆಲಿಯೋ ಹೆಸರಿನಡಿಯಲ್ಲಿ ಹುಡಕಬಹುದಾಗಿದೆ.

ಫಿಲಿಪ್ಸ್ ಫಿಡೆಲಿಯೋ ಆಡಿಯೋ ಡಕ್ ಮಾರುಕಟ್ಟೆಯಲ್ಲಿ 8,000 ರೂಪಾಯಿಗೆ ಶೀಘ್ರದಲ್ಲಿಯೆ ದೊರೆಯಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot