ಸಖತ್ ಸೌಂಡ್ ಮಾಡಲಿದೆ ಆರ್ಬಿಟ್ ಸ್ಟಿರಿಯೋ ಸಿಸ್ಟಮ್

By Super
|
ಸಖತ್ ಸೌಂಡ್ ಮಾಡಲಿದೆ ಆರ್ಬಿಟ್ ಸ್ಟಿರಿಯೋ ಸಿಸ್ಟಮ್
ನೀವು ಒಳ್ಳೆ ಗುಣಮಟ್ಟದ ಸೌಂಡ್ ಸಿಸ್ಟಮ್ ಬಯಸುತ್ತಿದ್ದರೆ ನಿಮಗೆ ಆರ್ಬಿಟ್ ಸೌಂಡ್ T12v3 ಸ್ಟಿರಿಯೋ ಸಿಸ್ಟಮ್ ಸೂಕ್ತ ಆಯ್ಕೆ. ಸಂಗೀತ ಪ್ರಿಯರ ನಿರೀಕ್ಷೆಯನ್ನು ನಿಜ ಮಾಡವಲ್ಲಿ ಆರ್ಬಿಟ್ ಸೌಂಡ್ ಈ ಮೂಲಕ ಯಶಸ್ವಿಯಾಗಿದೆ.

ತುಂಬಾ ಸ್ಟಷ್ಟತೆ ಹೊಂದಿರುವ ಸಂಗೀತ ನೀಡುವ ಈ ಆರ್ಬಿಟ್ ಸೌಂಡ್ T12v3 ಸ್ಟಿರಿಯೋ ಸಿಸ್ಟಮ್ 100 ಮಿಮಿ ಉದ್ದ ಮತ್ತು 605 ಮಿಮಿ ಅಗಲವಿದೆ. ಈ ಸ್ಟಿರಿಯೋ ಸಿಸ್ಟಮ್ ನ 8 ಕೆಜಿ ತೂಕ ಕೊಂಡೊಯ್ಯಲು ಸ್ವಲ್ಪ ಭಾರವೆನಿಸಿದರೂ ಇದರ ಗುಣಮಟ್ಟದ ಮುಂದೆ ಅದು ನಗಣ್ಯವೆನಿಸಲಿದೆ.

ಇಷ್ಟೇ ಅಲ್ಲ, ಇದರಲ್ಲಿ ಐಪಾಡ್ ಡಾಕ್ ಸೌಲಭ್ಯವೂ ಇದೆ. ಇದರಿಂದ ಐಪಾಡ್ ಕನೆಕ್ಟ್ ಮಾಡಿ ನಿಮ್ಮಮೆಚ್ಚಿನ ಹಾಡುಗಳನ್ನು ಕೇಳಬಹುದಾಗಿದೆ. ಈ ಸ್ಟೀಕರ್ ಔಟ್ ಲುಕ್ ನಲ್ಲೂ ಕೂಡ ಕಡಿಮೆ ಇಲ್ಲ. ನೋಡಲು ಆಕರ್ಷಿತವಾಗಿರುವ ಈ ಸ್ಪೀಕರ್ ಗೆ ಯಾವುದೇ ಡ್ಯಾಮೇಜ್ ಆಗದಂತೆ ತಡೆಯಲು ಮೆಟಲ್ ಗ್ರಿಲ್ ಕೂಡ ಅಳವಡಿಸಲಾಗಿದೆ.

ಸಂಗೀತ ಸಾಧನಕ್ಕೆ ಅತಿ ಅವಶ್ಯಕವಾದ ಸಬ್ ವೂಫರ್ ಸಿಸ್ಟಮ್ ಕೂಡ ಇದ್ದು, ಸ್ಟಿರಿಯೋ ಸೂಕ್ತ ನಿಯಂತ್ರಣಕ್ಕೆ ರಿಮೋಟ್ ಕಂಟ್ರೋಲ್ ಸಹಾಯವಾಗಲಿದೆ. ಎಲ್ಲ ಡಿಜಿಟಲ್ ಸಾಧನಗಳಿಗೂ ಹೊಂದಿಕೆಯಾಗಲಿರುವ ಈ ಸ್ಟಿರಿಯೋ ಸಿಸ್ಟಮ್ 3.5 ಮಿಮಿ ಜಾಕ್ ಬೆಂಬಲಿತವಾಗಿದೆ.

ಇದರಲ್ಲಿರುವ ಅತಿ ಗುಣಮಟ್ಟದ 5.1 ಸರೌಂಡ್ ಸೌಂಡ್ ಸಿಸ್ಟಮ್ ನಿಂದ ಸಖತ್ ಸಂಗೀತವನ್ನು ಅನುಭವಿಸಬಹುದು. 100 ವ್ಯಾಟ್ ಆಂಪ್ಲಿಫೈಯರ್ ಹೈಡೆಫಿನಿಶನ್ ಸೌಂಡ್ ನ ಈ ಸಿಸ್ಟಮ್ ನಲ್ಲಿ ಆಪ್ಟಿಕಲ್ ಮತ್ತು RCA ಫೋನ್ ಗಳ ಇನ್ ಪುಟ್ ಪಡೆಯಬಹುದಾದ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ವೈರ್ ಲೆಸ್ ಆಯ್ಕೆಯೂ ಲಭ್ಯವಿದ್ದು. ಇದರ ದರ 19,500 ರೂ ಎಂದು ಕಂಪನಿ ತಿಳಿಸಿದೆ. ಮನೆಗೆ ಮಾತ್ರವಲ್ಲ, ಪಾರ್ಟಿಗಳಲ್ಲೂ ಈ ಸ್ಪೀಕರ್ ಉಪಯೋಗವನ್ನು ಸಂಪೂರ್ಣವಾಗಿ ಪಡೆಯಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X