ಟಚ್ ಅಂಡ್ ನ್ಯಾನೊ, ಯಾವುದಿಷ್ಟವೋ ಸೆಲೆಕ್ಟ್ ಮಾಡಿ

Posted By: Staff

ಟಚ್ ಅಂಡ್ ನ್ಯಾನೊ, ಯಾವುದಿಷ್ಟವೋ ಸೆಲೆಕ್ಟ್ ಮಾಡಿ
ಆಪಲ್ ಎಲ್ಲರಿಗೂ ಇಷ್ಟ. ಅದರಲ್ಲೂ ಆಪಲ್ ಐಪಾಡ್ ಅಂದ್ರೆ ಸಂಗೀತ ಪ್ರೇಮಿಗಳಿಗೆ ಅಚ್ಚುಮೆಚ್ಚು. ಆಪಲ್ ಉತ್ಪನ್ನ ಪ್ರೇಮಿಗಳಿಗೆ ಇದೀಗ ಸುಗ್ಗಿಯ ಸಮಯ. ಯಾಕೆಂದರೆ ಕಂಪನಿ ಈ ತಿಂಗಳಲ್ಲಿ ಎರಡು ಹೊಸ ಐಪಾಡ್ ಉತ್ಪನ್ನಗಳನ್ನು ಹೊರತರಲಿದೆ. ಡೋಂಟ್ ವರಿ. ಇದರ ದರನೂ ಜಾಸ್ತಿಯೇನಿಲ್ಲ!!

ಆಪಲ್ ಐಪಾಡ್ ನ್ಯಾನೊ ಮತ್ತು ಐಪಾಡ್ ಟಚ್ ಎಂಬ ಎರಡು ನೂತನ ಮಾದರಿಗಳನ್ನು ಹೊರತರುತ್ತಿರುವ ಕಂಪನಿ ಗ್ರಾಹಕರ ಅನುಕೂಲಕ್ಕೆಂದು ಅನೇಕ ನೂತನ ಸೌಲಭ್ಯವನ್ನು ನೀಡಲಿದೆ.

ಐಪಾಡ್ ಟಚ್ ಮಾದರಿಯಲ್ಲಿ ಇಂಟರ್ ನೆಟ್ ನಿಂದ ನೇರವಾಗಿ ಮೀಡಿಯಾ ಲೈಬ್ರರಿ ಡೌನ್ ಲೌಡ್ ಮಾಡಿಕೊಳ್ಳಬಹುದಾದ ಐಕ್ಲೌಡ್ ಸೌಲಭ್ಯದೊಂದಿಗೆ 8 ಜಿಬಿ, 32 ಜಿಬಿ ಮತ್ತು 64 ಜಿಬಿಯ ಮೂರು ಆವೃತ್ತಿಗಳಲ್ಲಿ ಲಭ್ಯವಿದೆ.

ಐಪಾಡ್ ನ್ಯಾನೊದಲ್ಲಿ ಕೂಡ ಮಲ್ಟಿ ಟಚ್ ಡಿಸ್ಪ್ಲೇ ಮತ್ತು ಫಿಟ್ ನೆಸ್ ಟ್ರ್ಯಾಕಿಂಗ್ ಅಪ್ಲಿಕೇಶನ್ ಈ ಬಾರಿ ಹೊಸತಾಗಿದೆ.

ಐಪಾಡ್ ನ್ಯಾನೊ ವಿಶೇಷತೆ:

* 3.6 ಇಂಚು ಉದ್ದ, 1.5 ಅಗಲ ಮತ್ತು 36.4 ಗ್ರಾಂ ತೂಕ
* 8 ಜಿಬಿಯಲ್ಲಿ 14,000 ಹಾಡು ಸಂಗ್ರಹಿಸುವ ಸಾಮರ್ಥ್ಯ
* 16 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ಬ್ಯಾಟರಿ
* ಸ್ಪೋಕೆನ್ ಮೆನು
* 2.2 ಇಂಚಿನ ಎಲ್ ಸಿಡಿ ಡಿಸ್ಪ್ಲೇ ಜೊತೆ 240 x 376 ಪಿಕ್ಸಲ್ ರೆಸೊಲ್ಯೂಷನ್
* ಹೈ ರೆಸೊಲ್ಯೂಷನ್ ಪಿಕ್ಚರ್ ನಿಖರತೆ

ಐಪಾಡ್ ಟಚ್ ವಿಶೇಷತೆ:
ಐಪಾಡ್ ನ್ಯಾನೊಗೆ ಹೋಲಿಸಿದರೆ ಐಪಾಡ್ ಟಚ್ ನಲ್ಲಿ ಇನ್ನೂ ಹೆಚ್ಚು ವಿಶೇಷತೆಯಿದೆ. ಕಪ್ಪು ಮತ್ತು ಬಿಳಿ, ಎರಡೂ ಬಣ್ಣಗಳಲ್ಲಿ ಐಪಾಡ್ ಲಭ್ಯವಿದ್ದು, ತುಂಬಾ ಸ್ಲಿಮ್ ಆಗಿದೆ. ಮೂರು ಆವೃತ್ತಿಗಳಲ್ಲಿ ಟಚ್ ಸಿಗಲಿದೆ.
* 4.4 ಇಂಚು ಎತ್ತರ, 2.32 ಇಂಚು ಅಗಲ, .28 ದಪ್ಪ ಮತ್ತು 101 ಗ್ರಾ ತೂಕ
* 3.5 ಇಂಚಿನ ಅಗಲ ಸ್ಕ್ರೀನ್ ಹೊಂದಿದ್ದು, 8, 32 ಮತ್ತು 64 ಜಿಬಿಗಳಲ್ಲಿ ಲಭ್ಯವಿದೆ.
* ಟಚ್ ಸ್ಕ್ರೀನ್ ಮತ್ತು ಮಲ್ಟಿ ಟಚ್ ಆಯ್ಕೆ
* VGA ಕ್ಯಾಮೆರಾದಲ್ಲಿ ಸೆಕೆಂಡ್ ಗೆ 30 ಫ್ರೇಂ ವಿಡಿಯೋ ರೆಕಾರ್ಡಿಂಗ್ ಸಾಧ್ಯವಿದೆ.
* 3.5 ಮಿ.ಮಿ. ಸ್ಟಿರಿಯೋ ಹೆಡ್ ಫೋನ್ ಮಿನಿ ಜಾಕ್
* 40 ಗಂಟೆ ಮ್ಯೂಸಿಕ್ ಪ್ಲೇಬ್ಯಾಕ್ ಬ್ಯಾಟರಿ, 7 ಗಂಟೆಗಳ ವಿಡಿಯೋ ಪ್ಲೇ ಬ್ಯಾಕ್
* ಬಹುಭಾಷೆ ಬೆಂಬಲಿತವಾಗಿದೆ

ಈ ಎರಡೂ ಐಪಾಡ್ ಗಳ ದರದ ವಿಷಯಕ್ಕೆ ಬಂದರೆ, ಐಪಾಡ್ ನ್ಯಾನೊ ಬೆಲೆ 10,000 ಮತ್ತು ಮೂರು ಆವೃತ್ತಿ ಹೊಂದಿರುವ ಐಪಾಡ್ ಟಚ್ 8ಜಿಬಿಗೆ 9,750, 32 ಜಿಬಿಗೆ 14,750 ಮತ್ತು 64 ಜಿಬಿ ಗೆ 19,650 ರೂ ಎಂದು ತಿಳಿದುಬಂದಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot