ಐಪೋನಿನಲ್ಲಿ ಇದೀಗ ಹೊಸ ಫ್ಲೂಯನ್ಸ್ ಸ್ಪೀಕರ್

By Super
|
ಐಪೋನಿನಲ್ಲಿ ಇದೀಗ ಹೊಸ ಫ್ಲೂಯನ್ಸ್ ಸ್ಪೀಕರ್
ಫ್ಲೂಯನ್ಸ್ ಬ್ರಾಂಡ್ ಸ್ಪೀಕರ್ ತನ್ನ ಉತ್ತಮ ಗುಣ ಮಟ್ಟದಿಂದಾಗಿ ಮಾರುಕಟ್ಟೆಯಲ್ಲಿ ಒಳ್ಳೆಯ ಚಾಲ್ತಿಯಲ್ಲಿದೆ. ಈ ಬ್ರಾಂಡ್ ನಲ್ಲಿ ನೆಲದಲ್ಲಿ ನಿಲ್ಲಿಸುವ ಸ್ಪೀಕರ್ ನಿಂದ ಹಿಡಿದು, ಬುಕ್ ಸ್ಪೀಕರ್, ಸ್ಯಾಟಲೈಟ್ ಆಧಾರಿತ ಸ್ಪೀಕರ್ ನವರೆಗೆ ತನ್ನ ಉತ್ಪನ್ನಗಳನ್ನು ತಯಾರಿಸಿದೆ.

ಇತ್ತೀಚಿಗೆ ಫ್ಲೂಯನ್ಸ್ ಬ್ರಾಂಡ್ ಫ್ಲೂಯನ್ಸ್ FiSDK500 ಯನ್ನು ಬಿಡುಗಡೆಗೊಳಿಸಿದ್ದು, ಅದು ಐಪೋನ್ ಮತ್ತು ಐಪ್ಯಾಡ್ ನಲ್ಲಿ ಉತ್ತಮ ಗುಣ ಮಟ್ಟವನ್ನು ಹೊಂದಿದೆ. ಈ ಫ್ಲೂಯನ್ಸ್ ಸ್ಪೀಕರ್ ಕೇಳುಗರಿಗೆ ಹೋಂ ಥಿಯೇಟರಿನ ಅನುಭವವನ್ನು ನೀಡುತ್ತದೆ.

ಫ್ಲೂಯನ್ಸ್ FiSDK500ಯನ್ನು ಆಡಿಯೋ ಗ್ರೇಡ್ ಹುಡ್ ನಿಂದ ತಯಾರಿಸಲಾಗಿದ್ದು, ನೋಡುವಾಗಲೇ ಅದರ ವೃತಿ ಕೌಶಲ್ಯದಿಂದಾಗಿ ಗ್ರಾಹಕರನ್ನು ಸೆಳೆಯುತ್ತದೆ.

ಇದು ಪೂರ್ಣ ಪ್ರಮಾಣದ ಹೂಫರ್ಸ್ ಮತ್ತು ಅಲ್ಟ್ರಾ ಐ ಎಂಡ್ ಟ್ವೀಟರ್ಸ್ ಸೌಲಭ್ಯವನ್ನು ಹೊಂದಿದೆ. ಅದರ ಶಬ್ದದ ಸಾಮರ್ಥ್ಯವು 40dBರಷ್ಟು ಹೊಂದಿದೆ. ಇದರ ತೂಕವು 6.1 ಕಿ.ಗ್ರಾಂ ಇದ್ದು ಇದರ ಸ್ಪರ್ಧಿಗಳಿಗೆ ಹೋಲಿಸಿದಾಗ ಕಡಿಮೆ ತೂಕವನ್ನು ಹೊಂದಿದೆ.

ಫ್ಲೂಯನ್ಸ್ FiSDK500 ಇಂಟಿಗ್ರೇಟೆಡ್ ಆಂಪ್ಲಿಫೈಯರ್ ಹೊಂದಿದೆ.ಫ್ಲೂಯನ್ಸ್ FiSDK500 ಲೈಫ್ ಟೈಮ್ ವಾರಂಟಿಯನ್ನು ಹೊಂದಿದೆ, ಟಾಲ್ ಫ್ರೀ ಕಸ್ಟಮರ್ ಸರ್ವೀಸ್ ಸೌಲಭ್ಯ ಕೂಡ ಹೊಂದಿದೆ.

ಒಂದು ವೇಳೆ ಇದು ಗ್ರಾಹಕನಿಗೆ ಇಷ್ಟವಾಗದಿದ್ದರೆ 30 ದಿನಗಳಲ್ಲಿ ಹಿಂತಿರುಗಿಸಿ ಹಣ ಹಿಂತಿರುಗಿ ಪಡೆಯಬಹುದಾಗಿದೆ. ಫ್ಲೂಯನ್ಸ್ FiSDK500 ಬಳಕೆದಾರರ ಮೆಚ್ಚುಗೆಯನ್ನುಗಳಿಸುತ್ತದೆ ಎಂಬ ದೃಢ ವಿಶ್ವಾಸವನ್ನು ಹೊಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X