ಸಂಗೀತ ಪ್ರಪಂಚಕ್ಕೆ ಇದೀಗ ಫಾಸ್ಟ್ ಟ್ರ್ಯಾಕ್ ಸಾಧನ

Posted By: Staff

ಸಂಗೀತ ಪ್ರಪಂಚಕ್ಕೆ ಇದೀಗ ಫಾಸ್ಟ್ ಟ್ರ್ಯಾಕ್ ಸಾಧನ
ಸಂಗೀತ ಉದ್ಯಮಕ್ಕೆ ಮತ್ತು ಸಂಗೀತ ಪ್ರಿಯ ವಿದ್ಯಾರ್ಥಿಗಳಿಗೆಂದು ಇದೀಗ ಅವಿದ್ ಕಂಪನಿ ಎರಡು ನೂತನ ಸಂಗೀತ ಸಾಧನಗಳನ್ನು ಪರಿಚಯಿಸಲಿರುವುದಾಗಿ ಘೋಷಿಸಿದೆ. ಫಾಸ್ಟ್ ಟ್ರ್ಯಾಕ್ C400 ಮತ್ತು ಫಾಸ್ಟ್ ಟ್ರ್ಯಾಕ್ C600 ಎಂಬ ಸಂಗೀತ ಸಾಧನಗಳು ಇದೀಗ ಸಂಗೀತ ಲೋಕಕ್ಕೆ ಹೆಜ್ಜೆಯಿಡಲಿವೆ.

ಪ್ರೊ ಟೂಲ್ಸ್ ಸಾಫ್ಟ್ ವೇರ್ ಹೊಂದಿರುವ ಈ ಸಾಧನಗಳು ಬಳಕೆದಾರರಿಗೆ ಅನುಕೂಲವಾಗುವಂತೆ ಅನೇಕ ಆಯ್ಕೆಯನ್ನು ಒಳಗೊಂಡಿದೆ. ಇದರಲ್ಲಿರುವ ಆಡಿಯೋ ಇಂಟರ್ ಫೇಸ್ ಸ್ಟುಡಿಯೋ ಮಟ್ಟದ ಸಂಗೀತ ಸಾಮರ್ಥ್ಯ ಹೊಂದಿದೆ. ಗ್ರಾಹಕರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಗುಣಮಟ್ಟವನ್ನು ಈ ಸಂಗೀತ ಸಾಧನಗಳು ನೀಡಲಿವೆ.

ನಿಮ್ಮ ಅಭಿರುಚಿಗೆ ತಕ್ಕಂತೆ ಶಬ್ದದ ಗುಣಮಟ್ಟವನ್ನೂ ನಿಯಂತ್ರಿಸಲು ಕಂಟ್ರೋಲ್ ಟೂಲ್ ಆಯ್ಕೆ ಸಹಾಯ ಮಾಡಲಿದೆ. ನೋಡಲು ಸಿಂಪಲ್ ಮತ್ತು ಸ್ಟೈಲಿಶ್ ಲುಕ್ ಹೊಂದಿರುವ ಫಾಸ್ಟ್ ಟ್ರ್ಯಾಕ್ ಗಳು ಮಲ್ಟಿ ಬಟನ್ ತಂತ್ರಜ್ಞಾನ ಹೊಂದಿದೆ.

ಫಾಸ್ಟ್ ಟ್ರ್ಯಾಕ್ C600 ನಲ್ಲಿರುವ ಒಂದು ವಿಶೇಷ ಅಂಶವೆಂದರೆ, ರಿ ಅಸೈನೆಬಲ್ ಟ್ರಾನ್ಸ್ ಪೋರ್ಟ್ ಕಂಟ್ರೋಲ್. 24-bit ನೊಂದಿಗೆ 96 KHz ಆಡಿಯೋ ಸಾಮರ್ಥ್ಯ ಹೊಂದಿರುವ ಈ ಸಾಧನಗಳು ನಿಮಗೆ ಅತ್ಯಧಿಕ ಸಂಗೀತ ಗುಣಮಟ್ಟ ನೀಡಿ ಸಂತೃಪ್ತಿಪಡಿಸಲಿವೆ.

ಇವೆರಡರಲ್ಲೂ ಮಾನಿಟರ್ ನಿರ್ವಹಣೆಯ ಸಿಸ್ಟಮ್ ಇದ್ದು, ಮ್ಯೂಸಿಕ್ ಮಿಕ್ಸರ್ ಸುಲಭವಾಗಿ ಮಾಡಬಹುದಾಗಿದೆ. ಆನ್ ಬೋರ್ಡ್ MX ಕೋರ್ DSP ತಂತ್ರಜ್ಞಾನವೂ ನೀಡಲಾಗಿದ್ದು, ರೆಕಾರ್ಡಿಂಗ್ ಉದ್ದೇಶಿತವಾಗಿ ಪರಿಚಯಿಸಲಾಗುತ್ತಿದೆ.

ಅವಿದ್ ಕಂಪನಿಯ ಈ ಫಾಸ್ಟ್ ಟ್ರ್ಯಾಕ್ C400 ಬೆಲೆ 8,000 ದಿಂದ 9,000 ರೂ ಇದ್ದರೆ, ಫಾಸ್ಟ್ ಟ್ರ್ಯಾಕ್ C600 ಬೆಲೆ 12, 500 ರಿಂದ 13, 500 ರವೆರೆಗೂ ಇರಬಹುದೆಂದು ಅಂದಾಜು ಮಾಡಲಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot