ನಿಮಗೆ ಬೇಕೆ ಚಿಕ್ಕದಾದ ಪೌಲೋ ಆಲ್ಟೋ ಸ್ಪೀಕರ್

Posted By: Staff

ನಿಮಗೆ ಬೇಕೆ ಚಿಕ್ಕದಾದ ಪೌಲೋ ಆಲ್ಟೋ ಸ್ಪೀಕರ್
ಸ್ಪೀಕರ್ ಚಿಕ್ಕದಾಗಿ ಕಾರ್ಯದಲ್ಲಿ ಅಚ್ಚುಗಟ್ಟಾಗಿರಬೇಕು ಎಂದು ಬಯಸುವರೆಗೆ ಪೌಲೋ ಆಲ್ಟೋ ಮ್ಯುಸಿಕ್ ಸ್ಪೀಕರ್ ಬೆಸ್ಟ್ ಆಯ್ಕೆಯಾಗಿದೆ.

ಇದು ಡಸ್ಕ್ ಟಾಪ್ ಸ್ಪೀಕರ್ ಆಗಿದ್ದು ನಿಮ್ಮ ಕಂಪ್ಯೂಟರ್ ಸೋಕಟ್ ನಲ್ಲಿ USB ಕೇಬಲ್ ನಿಂದ ಜೋಡಿಸಿದರೆ ಅಷ್ಟೆ ಸಾಕು ಅದಕ್ಕಾಗಿ ಪ್ರತ್ಯೇಕ ಸಾಫ್ಟ್ ವೇರ್ ಆಗಲಿ ಅಥವಾ ನಿಮ್ಮ ಕಂಪ್ಯೂಟರ್ ನಲ್ಲಿ ಯಾವುದೇ ಮಾರ್ಪಾಡಾಗಲಿ ಮಾಡದೆ ಸ್ಪೀಕರ್ ಸೌಲಭ್ಯವನ್ನು ಹೊಂದಬಹುದಾಗಿದೆ.

ಪೌಲೋ ಆಲ್ಟೋ ಮ್ಯುಸಿಕ್ ಸ್ಪೀಕರ್ ತೀರ ಚಿಕ್ಕದಾದ ಕಂಪ್ಯೂಟರ್ ಗೆ ಹೇಳಿ ಮಾಡಿಸಿದ್ದಾಗಿದೆ. ಒಂದು ವೇಳೆ ಕಂಪ್ಯೂಟೆರ್ ಡೆಸ್ಕ್ ನಲ್ಲಿ ಸಾಕಷ್ಟು ಸ್ಥಳಾವಕಾಶವಿಲ್ಲದಿದ್ದರೂ ಈ ಸ್ಪೀಕರ್ ಅನ್ನು ಜೋಡಿಸಬಹುದಾಗಿದೆ. ನೀವು ಈ ಸ್ಪೀಕರ್ ಪ್ಲಗ್ ಮಾಡಲು ಪ್ರತ್ಯೇಕ ಸೋಕೆಟ್ ಹುಡಕ ಬೇಕಾಗಿಲ್ಲ.

ಈ ಸ್ಪೀಕರ್ ಅನ್ನು ಕೇಬಲ್ ಬಳಸಿ ನಿಮ್ಮ ಸಿಸ್ಟಮ್ ಅಥವಾ ಲ್ಯಾಪ್ ಟಾಪ್ USB ಪೋರ್ಟ್ ಗೆ ಜೋಡಿಸಬಹುದಾಗಿದೆ. USB ಜೋಡನೆಯ ಹೊರತಾಗಿಯು ಇದು ಶಬ್ದದಲ್ಲಿ ಒಳ್ಳೆಯ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಇದನ್ನು ಸ್ಟಾಂಡ್ ಅಲೋನ್ ಮೀಡಿಯಾ ಪ್ಲೇಯರ್ ಗೆ ಜೋಡಣೆ ಮಾಡಲು ಸಾಧ್ಯವಿಲ್ಲ.

ಪೌಲೋ ಆಲ್ಟೋ ಮ್ಯುಸಿಕ್ ಸ್ಪೀಕರ್ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಶಬ್ದದಲ್ಲಿಲ್ಲ. ಇದರಲ್ಲಿ ಪ್ರತ್ಯಕವಾಗಿ ಸಂಗೀತ ಉಪಕರಣಗಳ ಶಬ್ದವನ್ನು ಗುರುತಿಸಬಹುದಾಗಿದೆ. ಇದರಲ್ಲೂ ಸಣ್ಣಪುಟ್ಟ ದೋಷಗಳಿವೆ.

ಈ ಸ್ಪೀಕರ್ ನೋಡಲು ಆಕರ್ಷವಾಗಿದ್ದು, ಶಬ್ದದಲ್ಲಿ ಉತ್ತಮವಾಗಿದ್ದು ಇದರ ಕೈಗೆಟುಕುವ ಬೆಲೆಯಿಂದಾಗಿ ಇದು ಸಂಗೀತ ಪ್ರಿಯರನ್ನು ಆಕರ್ಷಿಸುತ್ತದೆ. ಅದು 5 ವ್ಯಾಟ್ ವಿದ್ಯುತ್ ಮಾತ್ರ ಬಳಕೆ ಮಾಡುತ್ತದೆ. ಇದರಲ್ಲಿ USB ಯನ್ನು ಮರುಜೋಡನೆ ಮಾಡಬಹುದಾಗಿದೆ.

ಚಿಕ್ಕದಾದ ಈ ಸ್ಪೀಕರ್ ಭಾರತದ ಮಾರುಕಟ್ಟೆಯಲ್ಲಿ ರೂಪಾಯಿ 3557ಕ್ಕೆ ಲಭ್ಯವಾಗುವುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot