ಕ್ರಿಯೇಟಿವ್ ನಿಂದ ಬರುತಿದೆ ಮಲ್ಟಿಮೀಡಿಯಾ ಪ್ಲೇಯರ್

Posted By: Staff

ಕ್ರಿಯೇಟಿವ್ ನಿಂದ ಬರುತಿದೆ ಮಲ್ಟಿಮೀಡಿಯಾ ಪ್ಲೇಯರ್
ಉತ್ತಮ ಗುಣಮಟ್ಟ ಮತ್ತು ದೀರ್ಘಕಾಲ ಬಾಳಿಕೆಯ ಉತ್ಪನ್ನಗಳನ್ನು ನೀಡುವಲ್ಲಿ ಹೆಸರುವಾಸಿಯಾಗಿರುವ ಕ್ರಿಯೇಟಿವ್ ಇದೀಗ ಕ್ರಿಯೇಟಿವ್ ಝೆನ್ Fi3 ಮಲ್ಟಿ ಮೀಡಿಯಾ ಪ್ಲೇಯರ್ ಬಿಡುಗಡೆಗೊಳಿಸುತ್ತಿದೆ. ನಿಮ್ಮ ಅಂಗೈ ಗಾತ್ರದ ಈ ಮೀಡಿಯಾ ಪ್ಲೇಯರ್ ನಿಮ್ಮ ಮನ ಗೆಲ್ಲುವುದರಲ್ಲಿ ಸಂಶಯವೇ ಇಲ್ಲ.

ಒಳ್ಳೆ ಲುಕ್ ಮತ್ತು ಚಿಕ್ಕ ಗಾತ್ರದಲ್ಲಿರುವ ಪ್ಲೇಯರ್ ಬ್ಲಾಕ್ ಕಲರ್ ಫಿನಿಶಿಂಗ್ ಹೊಂದಿರುವುದು ಹೆಚ್ಚು ಆಕರ್ಷಿತವಾಗಿದೆ. ಇದರಲ್ಲಿರುವ ಇನ್ನೊಂದು ಆಶ್ಚರ್ಯಕರ ಅಂಶವೆಂದರೆ ಇದರಲ್ಲಿರುವ ಬ್ಲೂಟೂಥ್ ಆಯ್ಕೆ.

ಮೀಡಿಯಾ ಪ್ಲೇಯರ್ ನಲ್ಲಿ apt-x ಕೋಡೆಕ್ ಇರುವುದರಿಂದ ಹೆಚ್ಚು ಆಡಿಯೋ ಸಾಮರ್ಥ್ಯವನ್ನು ನೀವು ನಿರೀಕ್ಷಿಸಬಹುದು. 2 ಇಂಚಿನ ಸ್ಕ್ರೀನ್ ಡಿಸ್ಪ್ಲೇ ಹೊಂದಿರುವ ಮೀಡಿಯಾ ಪ್ಲೇಯರ್ 65*45.5*12.5 ಸುತ್ತಳತೆ ಹೊಂದಿದೆ. ಈ ಮಲ್ಟಿ ಮೀಡಿಯಾ ಪ್ಲೇಯರ್ ಗೆ 32 ಜಿಬಿ ಮೈಕ್ರೊ SD ಕಾರ್ಡ್ ಇದ್ದು, ಹೆಚ್ಚು ಹಾಡು ಮತ್ತು ವಿಡಿಯೋಗಳನ್ನು ಶೇಖರಿಸಲು ಸಾಧ್ಯವಿದೆ.

ಇದು FLAC ಫೈಲ್ಸ್ ಬೆಂಬಲಿತವಾಗಿದ್ದು, ಇದರಲ್ಲಿನ X-Fi ಕ್ರಿಸ್ಟಲೈಸರ್ ಉತ್ತಮ ಗುಣಮಟ್ಟದ ಸಂಗೀತವನ್ನು ಅನುಭವಿಸಲು ಅವಕಾಶ ನೀಡುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ 8 ಜಿಬಿ ಮತ್ತು 16 ಜಿಬಿಯ ಆಯ್ಕೆ ಇದರಲ್ಲಿದೆ. WMA, MP3 ಆಡಿಯೋ ಫೈಲ್ಸ್ ಗಳನ್ನಲ್ಲದೆ MPEG4-SP, AVI ಮತ್ತು WMV9 ವಿಡಿಯೋ ಫೈಲ್ಸ್ ಗಳನ್ನೂ ಸಹ ಈ ಮೀಡಿಯಾ ಪ್ಲೇಯರ್ ಬೆಂಬಲಿಸುತ್ತದೆ.

ಇದರಲ್ಲಿ ವಾಯ್ಸ್ ರೆಕಾರ್ಡಿಂಗ್ ಆಯ್ಕೆ ಇದ್ದು, ಗುಣಮಟ್ಟದ ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಆಡಿಯೋ ಮೋಡ್ ನಲ್ಲಿ 20 ಗಂಟೆ ಮತ್ತು ವಿಡಿಯೋ ಮೋಡ್ ನಲ್ಲಿ 5 ಗಂಟೆ ಬ್ಯಾಟರಿ ಬ್ಯಾಕಪ್ ಹೊಂದಿದೆ ನೀಡುತ್ತದೆ. 8ಜಿಬಿಗೆ 4,000 ರು ಮತ್ತು 16 ಜಿಬಿಗೆ 6000ರು ಎಂದು ಕಂಪನಿ ತಿಳಿಸಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot