Subscribe to Gizbot

ಸೈಬರ್ ಸ್ನಿಪಾ ಸೋನಾರ್ -ಮಿನಿ ಸ್ಪೀಕರ್

Posted By: Staff

ಸೈಬರ್ ಸ್ನಿಪಾ ಸೋನಾರ್ -ಮಿನಿ ಸ್ಪೀಕರ್
ತಾಂತ್ರಿಕ ವಸ್ತುಗಳನ್ನು ಬಳಸುವಾಗ ಆಕಾರದಲ್ಲಿ ಓಮನಾಗಿರಬೇಕು ಕಾರ್ಯದಲ್ಲಿ ತ್ರಿವಿಕ್ರಮನಾಗಿರಬೇಕು ಎಂದು ಜನರು ಬಯುಸುವುದು ಸಹಜ. ಜನರ ಮನಸ್ಥಿತಿಯನ್ನು ಅರಿತ ಕಂಪನಿಗಳು ಚಿಕ್ಕ ವಸ್ತವಿನಲ್ಲಿ ಅಧಿಕ ಸಾಮರ್ಥ್ಯ ಹೊಂದಿರುವಂತಹ ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಮಾರುಕಟ್ಟೆಗೆ ತರುತ್ತಿದ್ದಾರೆ.

ಸೋನಾರ್ ಬ್ರಾಂಡ್ ಕೂಡ ಅಂತಹ ಚಿಕ್ಕದಾದ ಒಳ್ಳೆಯ ಗುಣಮಟ್ಟದ ಸೈಬರ್ ಸ್ನಿಪಾ ಸೋನಾರ್ ಎಂಬ ಚಿಕ್ಕ ಸ್ಪೀಕರ್ ಬಿಡುಗಡೆ ಮಾಡಿದೆ. ಈ ಸ್ಪೀಕರ್ ಅನ್ನು ಸ್ಮಾರ್ಟ್ ಪೋನ್ ಮತ್ತು ಟ್ಯಾಬ್ಲೆಟ್ ಪಿ ಸಿ ನಲ್ಲಿ ಬಳಸಬಹುದಾಗಿದೆ. ಇದರಲ್ಲಿರುವ ಶಬ್ದದ ಗುಣಮಟ್ವನ್ನು ಅಲ್ಲಗೆಳೆಯುವಂತೆ ಇಲ್ಲ.

ಇದರಲ್ಲಿ ಆನ್ ಮತ್ತು ಆಫ್ ಬಟನ್ ಹಾಗೂ ಶಬ್ದವನ್ನು ನಿಯಂತ್ರಿಸುವ ಬಟನ್ ಬಳಸಲಾಗಿದೆ. ಅಲ್ಲದೆ USB ಆಡಿಯೋ ಇನ್ ಪುಟ್ ಮತ್ತು ಔಟ್ ಪುಟ್ ಪ್ಲಗ್ ಹಾಗೂ 3.5 ಆಡಿಯೋ ಇನ್ ಪುಟ್ ಮತ್ತು ಔಟ್ ಪುಟ್ ಪೋರ್ಟ್ ಲಭ್ಯವಿದೆ. ಈ ಪ್ಲಗ್ ಬಳಸಿ ಸ್ಮಾರ್ಟ್ ಪೋನ್ ಮತ್ತು ಟ್ಯಾಬ್ಲೆಟ್ ಗೆ ಸುಲಭವಾಗಿ ಜೋಡಿಸಬಹುದಾಗಿದೆ.

ಸೈಬರ್ ಸ್ನಿಪಾ ಸೋನಾರ್ USB ಕೇಬಲ್ ಬಳಸಿ ಚಾರ್ಜ್ ಮಾಡಿದರೆ 2 ಗಂಟೆಗಳಲ್ಲಿ ಚಾರ್ಜ್ ಮಾಡಬಹುದಾಗಿದೆ. ಇದರಲ್ಲಿ ಲಿಥಿಯಮ್ ಐಯಾನ್ ರೀಚಾರ್ಜ್ ಬಳಸಲಾಗಿದೆ. 4 ಗಂಟೆಗಳ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

ಇದರ ಕಾರ್ಯ ವೈಖರಿ ನೋಡಿ ಇದರ ಪ್ರತಿಸ್ಪರ್ಧಿ ಕಂಪನಿಗಳು ಸಹ ಪ್ರಶಣಸುವಣತೆ ಇದೆ ಈ ಮಿನಿ ಸ್ಪೀಕರ್.ಇದರ ತೂಕ 3.4 ಔನ್ಸ್ ಮತ್ತು ಚಾರ್ಜ್ ವೈರ್ ನ ಉದ್ದ 18 ಇಂಚು ಮತ್ತು ವ್ಯಾಟೇಜ್ 3W ಹೊಂದಿದೆ.

ಹಗುರವಾದ, ಚಿಕ್ಕ ಈ ಸೋನಾರ್ ಸ್ಪೀಕರ್ ಬೆಲೆ ಕೂಡ ರೂಪಾಯಿ 1, 200 ಇದ್ದು ಸಂಗೀತ ಪ್ರಿಯರಿಗೆ ಹಾಯಾನಿಸುವಂತಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot