ಹೈಬ್ರಿಡ್ ಹೆಡ್ ಫೋನ್ ನಿಮ್ಮ ಹ್ಯಾಂಡ್ ನಲ್ಲಿರಲಿ

Posted By: Staff

ಹೈಬ್ರಿಡ್ ಹೆಡ್ ಫೋನ್ ನಿಮ್ಮ ಹ್ಯಾಂಡ್ ನಲ್ಲಿರಲಿ
ಝಂಬ್ರಿಡ್ ಕಂಪನಿ ಸಂಗೀತಕ್ಕೆ ಹೊಸ ಆಯಾಮ ನೀಡಲಿದೆ. ಹೊಸ ತರಹದ ಝಂಬ್ರಿಡ್ X2 ಹೈಬ್ರಿಡ್ ಹೆಡ್ ಫೋನ್ ಈ ವಾರದ ಅಂತ್ಯಕ್ಕೆ ಬಿಡುಗಡೆಯಾಗಲಿದೆ. ಒಂದೇ ಸಾಧನದಲ್ಲಿ ತಾವೂ ಸಂಗೀತ ಕೇಳುತ್ತಾ ಇನ್ನೊಬ್ಬರಿಗೂ ಸಂಗೀತ ಕೇಳಿಸುವ ವಿಶೇಷ ಅನುಭವ ನಿಮ್ಮದಾಗಬಹುದಾಗಿದೆ.

ಇದು ಹೇಗೆ ಸಾಧ್ಯ ಎಂದು ಆಶ್ಚರ್ಯವಾಗಬಹುದು. X2 ಹೈಬ್ರಿಡ್ ಹೆಡ್ ಫೋನ್ ನಿಂದ ಇದು ಸಾಧ್ಯ ಎನ್ನುತ್ತಿದೆ ಝಂಬ್ರಿಡ್ ಕಂಪನಿ. ಹೆಡ್ ಫೋನಿನ ಎಡ ಮತ್ತು ಬಲಗಡೆಯ ಮೇಲುಭಾಗದಲ್ಲಿ ಸ್ಪೀಕರ್ ಗಳನ್ನು ಅಳವಡಿಸಲಾಗಿದ್ದು, ಸಂಗೀತವನ್ನು ತಾವೂ ಕೇಳುತ್ತ, ಹೊರಗಿನ ಸ್ಪೀಕರ್ ನಿಂದ ಇನ್ನೊಬ್ಬರಿಗೂ ಸಂಗೀತ ಕೇಳುವಂತೆ ಮಾಡಬಹುದಾಗಿದೆ.

ಹೆಡ್ ಫೋನ್ ಮತ್ತು ಸ್ಪೀಕರ್ ಎರಡಕ್ಕೂ ಬಟನ್ ಆಯ್ಕೆ ಇದರಲ್ಲಿದೆ. ಹೊರಗಿನ ಸ್ಪೀಕರ್ ನಿಂದ ಹೆಡ್ ಫೋನ್ ನಲ್ಲಿ ಕೇಳುವವರಿಗೆ ಅಡಚಣೆಯಾಗಬಾರದೆಂದು ಮಲ್ಟಿ ಕುಶನ್ ಸೌಲಭ್ಯ ನೀಡಲಾಗಿದೆ. ಇದರಿಂದ ಯಾವುದೇ ಅಡಚಣೆಯಿಲ್ಲದೆ ಸಂಗೀತವನ್ನು ಮನಸೋ ಇಚ್ಛೆ ಕೇಳಬಹುದಾಗಿದೆ.

ಒಳಗೆ, ಹೊರಗೆ, ಎರಡೂ ಸ್ಪೀಕರ್ ಇರುವುದರಿಂದ ಈ ಹೆಡ್ ಫೋನ್ ಭಾರವಿರಬಹುದೆಂದು ನಿಮಗನ್ನಿಸಬಹುದು. ಆದರೆ ಇದು ತುಂಬಾ ಲೈಟ್. ಹೊರಗಿನ ಸ್ಪೀಕರ್ ಗೆ ಬ್ಯಾಟರಿ ಇದ್ದು, ಇದನ್ನು ಬಳಕೆ ಮಾಡಿದರೆ ಮಾತ್ರ 1 ಗಂಟೆ ಚಾರ್ಜ್ ಮಾಡಬೇಕಾಗುತ್ತದೆ. ಹೀಗೆ ಮಾಡಿದರೆ 4 ಗಂಟೆ ಸತತವಾಗಿ ಹಾಡು ಕೇಳಿಸಬಹುದು.

ಕೆಂಪು, ಕಪ್ಪು, ಬಿಳಿ ಹೀಗೆ ಮೂರು ಆಕರ್ಷಕ ಬಣ್ಣಗಳಲ್ಲಿರುವ ಹೆಡ್ ಫೋನ್ ಸಖತ್ ಸ್ಪೋರ್ಟಿವ್ ಲುಕ್ ಹೊಂದಿದೆ. ಇದರ ಬೆಲೆ 8,000 ರು ಎಂದು ಕಂಪನಿ ತಿಳಿಸಿದೆ. ಸುಖಾನುಭವ ನಿಮ್ಮದಾಗುತ್ತದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot