ಮಿನಿ ಸ್ಪೀಕರ್ ಮಾಡುತ್ತಿದೆ ಸಕತ್ ಸೌಂಡ್

By Super
|
ಮಿನಿ ಸ್ಪೀಕರ್ ಮಾಡುತ್ತಿದೆ ಸಕತ್ ಸೌಂಡ್
ತಾಂತ್ರಿಕ ವಸ್ತಗಳು ನೋಡುವಾಗ ಚಿಕ್ಕದಾಗಿ ಕಾರ್ಯದಲ್ಲಿ ಚೊಕ್ಕವಾಗಿ ಇದ್ದರೆ ಗ್ರಾಹಕನನ್ನು ತನ್ನತ್ತ ತಟ್ಟನೆ ಸೆಳೆಯುತ್ತದೆ. ಮಾರುಕಟ್ಟೆಗೆ ಇತ್ತೀಚಿಕೆಗೆ ಬಂದಿರುವ X-ಮಿನಿ II ಕೂಡ ಅದೆ ರೀತಿ ಇದ್ದು ಈ ಮಿನಿ ಸ್ಪೀಕರ್ ಮಾರುಕಟ್ಟೆಯಲ್ಲಿ ಜೋರಾಗಿ ಶಬ್ದ ಮಾಡುತ್ತಿದೆ.

X-ಮಿನಿ II ಗೆ ಚಾರ್ಜ್ ಮಾಡಲು ತೆಗೆದುಕೊಳ್ಳುವ ಕಾಲಾವಧಿ 2 ಗಂಟೆ ಆಗಿದ್ದು ಅದರಲ್ಲಿಯೆ ಪವರ್ ಆಫ್ ಮತ್ತು ಆನ್ ಬಟನ್ ಇದೆ. ಇದು ಕಾರ್ಯ ನಿರ್ವಹಿಸುವಾಗ ಇದರಲ್ಲಿರುವ ಇಂಡಿಕೇಟರ್ ನಿಂದ ಬೆಳಕು ಬರುತ್ತಿರುತ್ತದೆ.ಇದರ ಬ್ಯಾಟರಿಯ ಆಯುಷ್ಯ 340mAh ಇದ್ದು ಇತರ ಸ್ಪೀಕರ್ ಗಳಿಗೆ ಹೋಲಿಸಿದಾಗ ಇದು ಅಧಿಕ ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ಚಿಕ್ಕ USB ಕೇಬಲ್ ಅನ್ನು ಸ್ಪೀಕರ್ ಅನ್ನು ರೀಚಾರ್ಜ್ ಮಾಡಲು ಬಳಸ ಬಹುದಾಗಿದೆ.ಇದರಲ್ಲಿ ಶಬ್ದವನ್ನು ಕಡಿಮೆ ಕಂಪನದಲ್ಲಿ ಹೊರಡಿಸುವಾಗೆ ತಯಾರಿಸಿರುವುದರಿಂದ ಬಳಕೆದಾರರಿಗೆ ಅನುಕೂಲವಾಗಿದೆ. ಇದರಲ್ಲಿ ಬೇಸ್ ಅನ್ನು ವಿಸ್ತರಿಸಬಹುದಾಗಿದೆ.

ಇದರ ತೂಕ 83 ಗ್ರಾಂ ಆಗಿದ್ದು 100Hz ನಿಂದ 20 KHzರವರೆಗೆ ಕಂಪನಾಂಕವನ್ನು ಉಂಟು ಮಾಡಬಹುದಾಗಿದೆ.ಈ ಮಿನಿ ಸ್ಪೀಕರ್ ಪವರ್ ಮತ್ತು ಆಡಿಯೋ ಇನ್ ಪುಟ್ ಗಳನ್ನು USB ಸೋಕೆಟ್ ನಿಂದ ತೆಗೆದುಕೊಳ್ಳುತ್ತದೆ.ಇದರಲ್ಲಿ 3.5 mm ಹೆಡ್ ಫೋನ್ ಜಾಕ್ ಇದೆ.

ಈ ಚಿಕ್ಕ ಸ್ಪೀಕರ್ ಬೆಲೆ ಕೂಡ ಅಷ್ಟೆ ಚಿಕ್ಕದಾಗಿ ಅಂದರೆ ರು.1, 700ಗೆ ದೊರೆಯುವುದರಿಂದ ಸಂಗೀತ ಪ್ರಿಯರು ಇದರತ್ತ ಕಣ್ಣಾಯಿಸುತ್ತಿದ್ದಾರೆ .

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X