ಯಾವುದರಲ್ಲೂ ಕಮ್ಮಿಯಿಲ್ಲ ಈ ಯಮಹಾ ಸ್ಪೀಕರ್ !

By Super
|
ಯಾವುದರಲ್ಲೂ ಕಮ್ಮಿಯಿಲ್ಲ ಈ ಯಮಹಾ ಸ್ಪೀಕರ್ !
ಯಮಹಾ ಎಲೆಕ್ಟ್ರಾನಿಕ್ ವಸ್ತಗಳಲ್ಲಿ ಆಗಿರಬಹುದು, ಆಟೋಮೊಬೈಲ್ಸ್ ನಲ್ಲಿ ಆಗಿರಬಹುದು ತನ್ನದೆಯಾದ ಛಾಪನ್ನು ಒತ್ತಿದೆ. ದಶಕಗಳ ಅನುಭವವಿರುವ ಯಮಹಾ ಇದೀಗ ಸೂಪರ್ ಸೀನಿಯರ್ ಗುಣಮಟ್ಟದ ಯಮಹಾ PDX-60BL ಸ್ಪೀಕರ್ ಸಿಸ್ಟಮ್ ಅನ್ನು ಬಿಡುಗಡೆ ಮಾಡಿದೆ.

ಐಪೋನ್, ಐಪೋಡ್ ಯಾವುದೆ ಕಂಪನಿದಾಗಿರಲಿ ಅವುಗಳ ಶಬ್ದದ ಗುಣಮಟ್ಟಕ್ಕೆ ಸರಿಸಮವಾಗಿರುವಂತೆ ಈ ಸ್ಪೀಕರ್ ಅನ್ನು ತಯಾರಿಸಲಾಗಿದೆ. ಇದರ ಅತಿ ಮುಖ್ಯವಾದ ಲಕ್ಷಣವೆಂದರೆ ವೈರ್ ಲೆಸ್ ಆಗಿ ಐಪೋನ್, ಐಪೋಡ್ ಜೋಡಣೆ ಇಲ್ಲದೆ ಚಾರ್ಜ್ ಮಾಡಬಹುದಾಗಿದೆ.

ಇದರಲ್ಲಿ ರಿಮೋಟ್ ಕಂಟ್ರೋಲ್ ಸೌಲಭ್ಯ ಕೂಡ ಇದೆ. ಯಮಹಾ PDX-60BL ಸ್ಪೀಕರ್ ನಲ್ಲಿ ಶಬ್ದದ ಅಳತೆ 60Hz ಯಿಂದ 20 KHzವರೆಗೆ ಏರಿಳಿತ ಮಾಡಬಹುದಾಗಿದೆ.ಈ ಸ್ಪೀಕರ್ ತೂಕ 3.7 lbs ಇದ್ದು, ಇದರಲ್ಲಿ ಅಡಾಪ್ಟರ್ ಪವರ್ ಕೋರ್ಡ್ ನೊಂದಿಗೆ ಜೋಡಣೆಯಾಗಿದೆ.

ಈ ಸ್ಪೀಕರ್ ಅನ್ನು ಟೇಬಲ್ ನಲ್ಲಿ ಸರಿಯಾಗಿ ಕೂರುವಂತೆ ತಯಾರಿಸಲಾಗಿದೆ. ಕಪ್ಪು, ನೀಲಿ, ಬೂದಿ ಈ ಬಣ್ಣಗಳಲ್ಲಿ ಯಾವ ಬಣ್ಣ ಇಷ್ಟವೋ ಆ ಬಣ್ಣದ ಸ್ಪೀಕರ್ ಅನ್ನು ಕೊಂಡುಕೊಳ್ಳಬಹುದಾಗಿದೆ.

ಸ್ಪೀಕರ್ ಹಿಂದೆ AC ಅಡಾಪ್ಟರ್ ಗೆ ಸೋಕೆಟ್ ಇದೆ. ಇದರಲ್ಲಿ ಆಟೋಪವರ್ ಆನ್ ಮತ್ತು ಆಫ್ ಸೌಲಭ್ಯ ಕೂಡ ಇದೆ. ಶಬ್ದವನ್ನು ಹೆಚ್ಚಿಸಲು ಮತ್ತು ಕಡಿಮೆ ಮಾಡಲು ಮಾತ್ರ ಮ್ಯಾನ್ಯುಲ್ ಬಟನ್ ಇಡಲಾಗಿದೆ.

ಈ ಸ್ಪೀಕರ್ ಬೆಲೆ ರು. 12, 000 ಆಗಿದೆ, ಆದರೆ ಈ ಸ್ಪೀಕರ್ ನ ಗುಣನಟ್ಟ ನೋಡುವಾಗ ಈ ಬೆಲೆ ಹೆಚ್ಚೆಂದು ಅನಿಸುವುದಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X