ಕಲರ್ ಕಲರ್ ರೇಡಿಯೋದಲ್ಲಿ ನಿಮಗ್ಯಾವುದಿಷ್ಟ?

Posted By: Staff

Tivoli PAL+ portable radio

ಸಂಗೀತದ ಸುರಿಮಳೆ ಸುರಿಸುವ ರೇಡಿಯೋ ಪೋರ್ಟೆಬಲ್ ಆಗಿದ್ದರೆ ಇನ್ನೂ ಚೆಂದ. ಎಲ್ಲಾ ಕಡೆಗೂ ಕೊಂಡೊಯ್ದು ಸಂಗೀತದ ರಸಾನುಭವವನ್ನು ಎಲ್ಲೆಡೆಯೂ ಸವಿಯಲು ಅನುವಾಗುತ್ತದೆ. ಅಂತಹದ್ದೊಂದು ಅವಕಾಶ ಒದಗಿಸಿಕೊಡಲು ಮುಂದಾಗಿದೆ ಟಿವೋಲಿ ಆಡಿಯೋ.

ಟಿವೋಲಿ ಆಡಿಯೋ ಇತ್ತೀಚೆಗಷ್ಟೆ ಟಿವೋಲಿ PAL+ ಪೋರ್ಟೆಬಲ್ ರೇಡಿಯೋ ಬಿಡುಗಡೆಗೊಳಿಸಿದೆ. ಈ ಹಿಂದೆಯೇ PAL (Portable Audio Laboratory) ರೇಡಿಯೋ ತೆರೆಕಂಡಿದೆ. ಆದರೆ ಈ ನೂತನ ರೇಡಿಯೋ DAB+ ಮತ್ತು DMB, FM RDS ಒಳಗೊಂಡ ಮುಂದುವರೆದ ಆಯಾಮವಾಗಿದೆ.

ಪಾಲ್ ಪ್ಲಸ್ ರೇಡಿಯೋ ವಿಶೇಷ:
* ನಿಕ್ಕಲ್ ಮೆಟಲ್ ಹೈಡ್ರೇಡ್ ಬ್ಯಾಟರಿ
* 3 1/2 ಗಂಟೆ ಬ್ಯಾಟರಿ ಚಾರ್ಜ್ ಮಾಡಿದರೆ ಸುಮಾರು 10 ಗಂಟೆ ಸಂಗೀತ ಕೇಳಬಹುದು
* ಇಂಟೆಗ್ರೇಟೆಡ್ ಸ್ಮಾರ್ಟ್ ಚಾರ್ಜರ್ ನೀಡಲಾಗಿದೆ.
* ಕೆಂಪು, ಬಿಳಿ, ಹಳದಿ, ತಿಳಿ ನೀಲಿ ಮತ್ತು ಕಪ್ಪು ಬಣ್ಣಗಳ ಐದು ಫಿನಿಶಿಂಗ್
* ಡ್ಯೂಯಲ್ ಅಲಾರ್ಮ್
* ಮಾಹಿತಿ ಸುಲಭ ವೀಕ್ಷಣೆಗೆ ದೊಡ್ಡ ಡಿಸ್ಪ್ಲೆ ಮತ್ತು ಬ್ಯಾಕ್ ಲೈಟ್
* ರಿಮೋಟ್ ಕಂಟ್ರೋಲ್, ರಿಮೋಟ್ ಇಲ್ಲದಿದ್ದ ಪಕ್ಷದಲ್ಲಿ ಸಾಧನದ ಮೇಲೆ ಕಂಟ್ರೋಲರ್ ಇದೆ
* ರೇಡಿಯೋ ಹಿಂದೆ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅಥವಾ ಆಪಲ್ ಐಫೋನ್ ಸಂಪರ್ಕಕ್ಕೆ 3.5 ಎಂಎಂ ಆಕ್ಸ್ ಇನ್ ಪುಟ್ ಅಳವಡಿಸಲಾಗಿದೆ.

ಪಾಲ್ ಪ್ಲಸ್ ಜೊತೆ ಸ್ಟಿರಿಯೋ ಹೆಡ್ ಫೋನ್ ನೀಡಲಾಗಿದ್ದು, ಇದರಲ್ಲಿರುವ 6.5 ಸಿಎಂ ಮ್ಯಾಗ್ನೆಟಿಕ್ ಶೀಲ್ಡ್ ನಿಂದ ಉತ್ತಮ ಗುಣಮಟ್ಟದ ಸಂಗೀತ ಸಾಧ್ಯವಿದೆ. ಎಲ್ಲಾ ಕಡೆಗೂ ಸುಲಭವಾಗಿ ಕೊಂಡೊಯ್ಯಬಹುದಾದ ಈ ಪಾಲ್ ಪ್ಲಸ್ ಬೆಲೆ ಸುಮಾರು 19,196 ಎಂದು ಕಂಪನಿ ತಿಳಿಸಿದೆ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot