ಹೋಂ ಥಿಯೇಟರಿನ ಅನುಭವಕ್ಕಾಗಿ ಟ್ಯಾಬ್ಲೆಟ್ ಸ್ಪೀಕರ್

Posted By: Staff

ಹೋಂ ಥಿಯೇಟರಿನ ಅನುಭವಕ್ಕಾಗಿ ಟ್ಯಾಬ್ಲೆಟ್ ಸ್ಪೀಕರ್
ನಿಮಗೆ ನಿಮ್ಮ ಟ್ಯಾಬ್ಲೆಟ್ ನಲ್ಲಿಯೆ ಹೋಂ ಥಿಯೇಟರಿನ ಅನುಭವ ಬೇಕೆಂದು ಅನುಸುತ್ತಿದೆಯೆ ಇನ್ನೇಕೆ ತಡ ನಿಮಗಾಗಿ ಲಾಜಿಟೆಕ್ ತನ್ನ ಹೊಸ ಟ್ಯಾಬ್ಲೆಟ್ ಸ್ಪೀಕರ್ ಅನ್ನು ಸಂಗೀತ ಪ್ರಿಯರಿಗೆ ಮತ್ತಷ್ಟು ಖುಷಿ ಕೊಡುವುದಾಕ್ಕಾಗಿ ತಯಾರಿಸಿದೆ.

ಇದರಲ್ಲಿ 3.5mm ಆಡಿಯೋ ಕನೆಕ್ಟರ್ ಸ್ಪೀಕರ್ ಅನ್ನು ಟ್ಯಾಬ್ಲೆಟ್ ಗೆ ಸುಲಭವಾಗಿ ಜೋಡಿಸಬಹುದಾಗಿದೆ . ಇದನ್ನು USB ಪೋರ್ಟ್ ಬಳಸಿ ಚಾರ್ಜ್ ಮಾಡುವುದರಿಂದ ಐಪಾಡ್ ಅನ್ನು ಲ್ಯಾಪ್ ಟಾಪ್ ಗೆ ಕನೆಕ್ಟ್ ಮಾಡಿದ್ದಾಗ ಚಾರ್ಜ್ ಮಾಡಲು ಸಾಧ್ಯವಿಲ್ಲ.

ಇದರಲ್ಲಿರುವ ಸ್ಪ್ರಿಂಗ್ ಲೋಡೆಡ್ ಕ್ಲಿಪ್ ಅನ್ನು ಟ್ಯಾಬ್ಲೆಟ್ ನ ಹಿಂಭಾಗದ ಮೇಲ್ಭಾಗಕ್ಕೆ ಜೋಡಿಸಿದರೆ ಉತ್ತಮ ಗುಣ ಅದರಿಂದ ಉಂಟಾಗುವ ಶಬ್ದ ಉತ್ತಮ ಗುಣ ಮಟ್ಟದಾಗಿರುತ್ತದೆ. ಇದರಿಂದಾಗಿ ಕೆಲಸ ಮಾಡುತ್ತಿರುವಾಗ ಕೂಡ ಸ್ಪೀಕರ್ ಬಳಸಿ ಮನರಂಜನೆ ಪಡೆಯಬಹುದಾಗಿದೆ.

ಈ ಟ್ಯಾಬ್ಲೆಟ್ ಸ್ಪೀಕರ್ ಅನ್ನು ಜೊಡಿಸುವಾಗ ಸ್ಪೀಕರ್ ನ್ಲಲಿರುವ ಆನ್ ಮತ್ತು ಆಫ್ ಬಟನ್ ಮೇಲ್ಭಾಗಕ್ಕೆ ಇರುವಂತೆ ಜೋಡಿಸಬೇಕು, ಅಲ್ಲದಿದ್ದರೆ ಬಟನ್ ಟೇಬಲ್ ಗೆ ತಾಗಿ ಆಫ್ ಆಗಬಹುದು.

ಇದರ ಬೆಲೆ ರು. 2,437 ಮಾತ್ರ ಆಗಿದ್ದು ಇದನ್ನು ಬಳಸಿ ನಿಮ್ಮ ಟ್ಯಾಬ್ಲೆಟ್ ನಿಂದ ಹೋಂ ಥಿಯೇಟರಿನ ಅನುಭವನ್ನು ಪಡೆಯಬಹುದಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot