ಆಪಲ್ ಐಫೋನ್ 4ಎಸ್ ಗೆ ಬೋಸ್ OE2i ಹೆಡ್ ಫೋನ್

By Super
|
ಆಪಲ್ ಐಫೋನ್ 4ಎಸ್ ಗೆ ಬೋಸ್ OE2i ಹೆಡ್ ಫೋನ್
ಆಪಲ್ ಕಂಪನಿಯ ಐಫೋನ್ 4 ಎಸ್ ಮೊಬೈಲ್ ನೊಂದಿಗೆ ಬೋಸ್ ಕಂಪನಿ ಕೈಜೋಡಿಸಲಿದೆ. ಅಂದರೆ ಈ ಮೊಬೈಲ್ ಗೆ ಅತ್ಯುತ್ತಮ ಗುಣಮಟ್ಟದ ಹೆಡ್ ಫೋನ್ ನೀಡಲಿರುವ ಬೋಸ್ ಕಂಪನಿ ಬಿಳಿ ಬಣ್ಣದ ಅತ್ಯಾಕರ್ಷಕ OE2i ಹೆಡ್ ಫೋನ್ ಬಿಡುಗಡೆಗೊಳಿಸಿದೆ.

ಈ ಬಿಳಿ ಬಣ್ಣದ OE2i ಆಡಿಯೋ ಹೆಡ್ ಫೋನ್ ಈ ಜನರೇಶನ್ ಗೆ ಉತ್ತಮ ಆಯ್ಕೆಯಾಗಲಿದೆ. ಸ್ಲಿಮ್ ಮತ್ತು ಸ್ಲೀಕ್ ಆಗಿರುವ ಮನಮೋಹಕ ಹೆಡ್ ಫೋನ್ ಈಗ ಲಭ್ಯವಿರುವ ಅನೇಕ ಹೆಡ್ ಫೋನ್ ಗಳಿಗೆ ಹೋಲಿಸಿದರೆ ಎಲ್ಲಕ್ಕಿಂತ ಕಂಫರ್ಟೆಬಲ್ ಮತ್ತು ಸ್ಟೈಲಿಶ್ ಆಗಿದೆ.

ಆಪಲ್ ಐಫೋನ್ 4ಎಸ್ ಗೆ ತಯಾರಿಸಲಾಗಿರುವ ಈ OE2i ಹೆಡ್ ಫೋನ್ ಅತ್ಯಾಧುನಿಕ ಲಕ್ಷಣಗಳನ್ನು ಹೊಂದಿದೆ.

ಈ ಹೆಡ್ ಫೋನ್ ವಿಶೇಷತೆಗಳೇನು?
* ಟ್ರೈ-ಪೋರ್ಟ್ ತಂತ್ರಜ್ಞಾನ- ಇದು ಅತ್ಯುನ್ನತ ಶಬ್ದದ ಸ್ಪಷ್ಟತೆ ನೀಡುತ್ತದೆ.
* ಆಕೌಸ್ಟಿಕ್ ಈಕ್ವಿಲೈಸೇಶನ್
* ಇನ್ ಲೈನ್ ಮೂರು ಬಟನ್ ರಿಮೋಟ್ ನಿಂದ ಶಬ್ದ ಮತ್ತು ಟ್ರಾಕ್ ಆಯ್ಕೆ ಹಾಗೂ ನಿಯಂತ್ರಣಕ್ಕೆ ಸಹಕಾರಿ
* ಇನ್ ಲೈನ್ ಮೈಕ್ರೊಫೋನ್: ಹ್ಯಾಂಡ್ ಫ್ರೀ ಕಾಲಿಂಗ್ ಮತ್ತು ವಾಯ್ಸ್ ಅಪ್ಲಿಕೇಶನ್ ನಿಯಂತ್ರಿಸಲು ಸಹಕಾರಿ
* ಕಿವಿಗಳಿಗೆ ಮೃದುವಾದ ಇಯರ್ ಕಪ್
* ಹೆಡ್ ಫೋನ್ ಕೊಂಡೊಯ್ಯಲು ಫೋಲ್ಡ್ ಫ್ಲಾಟ್ ನೀಡಲಾಗಿದೆ
* ಮೂರು ಇಂಚು ವಿಸ್ತರಿಸಬಹುದಾದ ಹೆಡ್ ಬ್ಯಾಂಡ್
* ಬೇರ್ಪಡಿಸಬಹುದಾದ (ಡಿಟ್ಯಾಚೆಬಲ್) ಕೇಬಲ್
* ಹೆಡ್ ಫೋನ್ ಸುಲಭ ಸುರಕ್ಷತೆಗೆ ತೆಳುವಾದ ಕೇಸ್ ನೀಡಲಾಗುತ್ತೆ.
* ಹೋಲೊಗ್ರಾಮ್ ಲೇಬಲ್ (ಸುಲಭ ಗುರುತಿಗೆ)

ಆಪಲ್ ಐಫೋನ್ 4 ಎಸ್ ನ ಈ ಬಿಳಿ ಬಣ್ಣದ ಆಕರ್ಷಕ ಬೋಸ್ OE2i ಬೆಲೆ 6, 500 ಎಂದು ಅಂದಾಜಿಸಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X