Subscribe to Gizbot

ಬರುತ್ತಿದೆ ಸ್ಯಾಮ್ ಸಂಗ್ HM 7000 ಹೆಡ್ ಸೆಟ್

Posted By: Super

ಬರುತ್ತಿದೆ ಸ್ಯಾಮ್ ಸಂಗ್ HM 7000 ಹೆಡ್ ಸೆಟ್
ಕೆಲಸದಲ್ಲಿ ನಿರತರಾಗಿದ್ದಾಗ ಕರೆಗಳನ್ನು ಸ್ವೀಕರಿಸಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ, ಅಂತಹವರಿಗೆಂದೇ ಅತ್ಯಾಧುನಿಕ ಮತ್ತು ವಿನೂತನ ಶೈಲಿಯ ಬ್ಲೂಟೂಥ್ ಹೆಡ್ ಸೆಟ್ ನೀಡುತ್ತಿದೆ ಸ್ಯಾಮ್ ಸಂಗ್ ಕಂಪನಿ. ಸ್ಯಾಮ್ ಸಂಗ್ ಎಚ್ ಎಂ 7000 ಎಂಬ ನೂತನ ಹೆಡ್ ಸೆಟ್ ಇನ್ನೇನು ಕಾಲಿಡಲು ಸಜ್ಜಾಗಿದೆ.

ಇಷ್ಟವಾಗುವಂತಹ ಅನೇಕ ಆಯ್ಕೆಗಳನ್ನು ಒಳಗೊಂಡಿರುವ ಈ ಹೆಡ್ ಸೆಟ್ ನಲ್ಲಿ, ಚಾಲನೆ ಮಾಡುತ್ತಿದ್ದಾಗಲೂ ಅತ್ಯಂತ ನಿಖರ ಶಬ್ದ ನೀಡುವಂತಹ ಐಸೊಲ್ಯಾಟ್ ತಂತ್ರಜ್ಞಾನ ಅಳವಡಿಸಲಾಗಿದೆ. ವಾತಾವರಣಕ್ಕೆ ತಕ್ಕಂತೆ ಬದಲಾವಣೆಯಾಗಿ ಹೊಂದಾಣಿಕೆ ಮಾಡಿಕೊಂಡು ಬಳಕೆದಾರರಿಗೆ ನಿಖರ ಶಬ್ದ ಒದಗಿಸುತ್ತದೆ.

ಕಿವಿಯ ಮೇಲೆ ಸುಲಭವಾಗಿ, ಯಾವುದೇ ಗೋಜಿಲ್ಲದೆ ಇಟ್ಟುಕೊಳ್ಳಬಹುದಾದ ಈ ಹೆಡ್ ಸೆಟ್ ತುಂಬಾ ಕಡಿಮೆ ತೂಕವಿದ್ದು, ದೂರಪ್ರಯಾಣ ಮಾಡುವಾಗ ಹಾಕಿಕೊಂಡಿದ್ದರೂ ಆರಾಮವೆನಿಸುತ್ತದೆ. ಇದರಲ್ಲಿ ನೀಡಲಾಗಿರುವ ಇಯರ್ ಬಡ್ ಮೃದುವಾಗಿರುವುದರಿಂದ ಇದರ ಬಳಕೆ ಸುಖಕರವೆನಿಸಲಿದೆ. ಇದರಲ್ಲಿರುವ ವಾಯ್ಸ್ ರೆಕಾರ್ಡಿಂಗ್, ನಾಯ್ಸ್ ಕ್ಯಾನ್ಸಲೇಶನ್ ಮತ್ತು ಉತ್ತಮ ಸ್ಪಷ್ಟತೆಯನ್ನೂ ಕೂಡ ತಳ್ಳಿಹಾಕುವಂತಿಲ್ಲ.

ಹೆಡ್ ಸೆಟ್ ಜೊತೆ ಟ್ರಾವೆಲಿಂಗ್ ಮತ್ತು ಚಾರ್ಜಿಂಗ್ ಕೇಸ್ ನೀಡಲಾಗಿದ್ದು, ಇದನ್ನು ನಿಮ್ಮ ಪಾಕೆಟ್ ನಲ್ಲೂ ಕೊಂಡೊಯ್ಯಬಹುದು. ಅತ್ಯತ್ತಮ ಬ್ಯಾಟರಿ ಬ್ಯಾಕಪ್ ನೀಡುವ ಈ ಹೆಡ್ ಸೆಟ್ ಬೆಲೆ 4900 ರು ಎಂದು ಕಂಪನಿ ತಿಳಿಸಿದೆ. ಭಾರತದಲ್ಲಿ ಈ ಸಾಧನ ಎಂದಿನಿಂದ ದೊರೆಯಲಿದೆ ಎಂಬ ಮಾಹಿತಿ ಅಧೀಕೃತವಾಗಿ ಇನ್ನೂ ಪ್ರಕಟಗೊಳ್ಳಬೇಕಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot