ಐಫೋನ್ ಗೆ ಸಾಥಿಯಾಗಲಿದೆ ಗ್ರಿಫಿನ್ ಸ್ಪೀಕರ್

Posted By: Staff

ಐಫೋನ್ ಗೆ ಸಾಥಿಯಾಗಲಿದೆ ಗ್ರಿಫಿನ್ ಸ್ಪೀಕರ್
ಆಪಲ್ ನಿಂದ ಆವಿಷ್ಕಾರಗೊಂಡಿರುವ ಐಫೋನ್ ಗೆ ಸಾಥಿಯಾಗಲು ಹೊರಟಿದೆ ಗ್ರಿಫಿನ್ ಕಂಪನಿ. ಗ್ರಿಫಿನ್ ಟ್ರಾವೆಲ್ ಸ್ಪೀಕರ್ ಬಿಡುಗಡೆಗೊಳಿಸಿರುವ ಕಂಪನಿ ಈ ಸ್ಪೀಕರ್ ನಿಮ್ಮ ಸಂಗೀತದ ನಿರೀಕ್ಷೆಯನ್ನು ಪೂರ್ಣಗೊಳಿಸಲಿರುವುದಾಗಿ ತಿಳಿಸಿದೆ.


ಐಫೋನ್ ಅಥವಾ ಐಪಾಡ್ ಗೆ ಇಯರ್ ಫೋನ್ ನೀಡಿದ್ದರೂ ಸಂಗೀತವನ್ನು ಮನಸ್ಸೋ ಇಚ್ಛೆ ಅನುಭವಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಂಗೀತವನ್ನು ಹೆಚ್ಚು ಪ್ರೀತಿಸುವವರಿಗೆ ಗ್ರಿಫಿನ್ ಪರಿಚಯಿಸಿರುವ ಈ ಸ್ಪೀಕರ್ ಉತ್ತಮ ಆಯ್ಕೆಯಾಗಲಿದೆ.

ಐಫೋನ್ ಗೆ ನೀಡಲಾಗಿರುವ ಈ ಗ್ರಿಫಿನ್ ಟ್ರಾವೆಲ್ ಸ್ಪೀಕರ್ ಐಫೋನ್ ಅಥವಾ ಐಪಾಡ್ ಟಚ್ ಬೆಂಬಲಿತವಾಗಿಯೇ ಇರುವುದರಿಂದ ತುಂಬಾ ಅನುಕೂಲವೆನಿಸಲಿದೆ. ನಿಮ್ಮ ಐಫೋನ್ ಗೆ ಈ ಟ್ರಾವೆಲ್ ಸ್ಪೀಕರ್ ಅಳವಡಿಸಿದರೆ ಸಾಕು, ಉತ್ತಮ ಗುಣಮಟ್ಟದ ಸಂಗೀತ ನಿಮ್ಮ ಕಿವಿಯಲ್ಲಿ ಗುಯ್ ಗುಟ್ಟುತ್ತಿರುತ್ತದೆ.

ಎರಡು ಇಂಚು ಇರುವ ಈ ಸ್ಪೀಕರ್ ನಲ್ಲಿ ಮಿನಿ USB ಪೋರ್ಟ್ ಕೂಡ ಲಭ್ಯವಿದೆ. ಗ್ರಿಫಿನ್ ಸ್ಟಿರಿಯೋ ಸ್ಪೀಕರ್, ಲ್ಯಾಪ್ ಟಾಪ್, ಕಂಪ್ಯೂಟರ್ ನೀಡಬಹುದಾದ ಸಂಗೀತ ಗುಣಮಟ್ಟವನ್ನು ಹೊಂದಿದೆ.

ಸ್ಪೀಕರ್ ನಲ್ಲಿ ಸಂಗೀತಕ್ಕೆಂದು ಅನೇಕ ಆಯ್ಕೆಗಳಿದ್ದು, ಬಾಸ್ ಆಯ್ಕೆ ಇನ್ನಷ್ಟು ಸಹಾಯವಾಗಲಿದೆ. ವಾಲ್ಯೂಮ್ ನಿಯಂತ್ರಣಕ್ಕೆಂದು ಸ್ಪೀಕರ್ ಬಲಗಡೆ ಬಟನ್ ಗಳೂ ಲಭ್ಯವಿದೆ. ಉತ್ತಮ ಶಬ್ದ ಸ್ಪಷ್ಟತೆ ನೀಡುವ ಈ ಸ್ಪೀಕರ್ ಬೆಲೆ 1,500 ರುಗೆ ದೊರೆಯುವ ಅಂದಾಜಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot