ಮೊಟೊರೊಲಾ ನೀಡಲಿದೆ ಸಿಲ್ವರ್ ಅಂಡ್ ಫ್ಲಿಪ್ ಹೆಡ್ ಸೆಟ್

Posted By: Staff

ಮೊಟೊರೊಲಾ ನೀಡಲಿದೆ ಸಿಲ್ವರ್ ಅಂಡ್ ಫ್ಲಿಪ್ ಹೆಡ್ ಸೆಟ್
ಮೊಬೈಲ್, ಟ್ಯಾಬ್ಲೆಟ್ ಮತ್ತು ಸಂಗೀತ ಸಾಧನಗಳ ತಯಾರಿಕೆಯಲ್ಲಿ ಮುಂದಿರುವ ಮೊಟೊರೊಲಾ ಕಂಪನಿ ಎರಡು ವೈರ್ ಲೆಸ್ ಬ್ಲೂಟೂಥ್ ಹೆಡ್ ಸೆಟ್ ಗಳ ಬಿಡುಗಡೆಗೆ ಸಜ್ಜಾಗಿದೆ. ಮೊಟೊರೊಲಾ ಎಲೈಟ್ ಸಿಲ್ವರ್ ಮತ್ತು ಮೊಟೊರೊಲಾ ಎಲೈಟ್ ಫ್ಲಿಪ್ ಎಂಬ ಎರಡು ಹೆಡ್ ಸೆಟ್ ಗಳು ಅಕ್ಟೋಬರ್ 24 ಕ್ಕೆ ಲಭ್ಯವಾಗಲಿವೆ.

ಮೊಟೊರೊಲಾ ಸಿಲ್ವರ್ ಮತ್ತು ಮೊಟೊರೊಲಾ ಫ್ಲಿಪ್ ಎರಡರಲ್ಲೂ ಎನ್ ಎಫ್ ಸಿ (Near Field Communication) ತಂತ್ರಜ್ಞಾನ ಅಳವಡಿಸಿರುವುದು ವಿಶೇಷವಾಗಿದೆ. ಇದರೊಂದಿಗೆ HD ಆಡಿಯೋ ಪ್ಲಸ್ ತಂತ್ರಜ್ಞಾನ ಹೆಚ್ಚು ಶಬ್ದ, ಸಂಗೀತ ಸ್ಪಷ್ಟತೆಯನ್ನು ನಿಮಗೆ ನೀಡಲಿದೆ.

ಎರಡೂ ಹೆಡ್ ಸೆಟ್ ಗಳಲ್ಲಿ 300 ಫೀಟ್ ವೂಫಿಂಗ್ ಇದ್ದು, ರೋಮಿಂಗ್ ರೇಂಜ್ ವಿಸ್ತರಣೆಯಾಗಲಿದೆ. ಬ್ಲೂಟೂಥ್ ಅಳವಡಿಕೆ ಎರಡರಲ್ಲೂ ಇದೆ.

ಸಿಲ್ವರ್ ಮತ್ತು ಫ್ಲಿಪ್ ಗಳಲ್ಲಿ ಇಂಟೆಗ್ರೇಟೆಡ್ ಮೈಮೊಟೊಸ್ಪೀಕ್ ಇದ್ದು, ಸಂದೇಶಗಳನ್ನು ಕೇಳಿಸಿಕೊಳ್ಳಲು ಸಹಾಯಕವಾಗುತ್ತದೆ ಮತ್ತು ಇದಕ್ಕೆ ಉತ್ತರ ನೀಡಲುನೀವು ಸ್ಪೀಚ್ ತಂತ್ರಜ್ಞಾನವನ್ನೂ ಬಳಸಿಕೊಳ್ಳಬಹುದು. ಇದರಿಂದ ಫೋನ್ ಟಚ್ ಮಾಡದೆಯೇ ಸಂದೇಶ ಕಳುಹಿಸುವ ಸೌಕರ್ಯ ನಿಮ್ಮದಾಗುತ್ತದೆ.

ಫ್ಲಿಪ್ ನಲ್ಲಿನ ವಿಶೇಷ ಅಂಶವೆಂದರೆ, True Comfort ತಂತ್ರಜ್ಞಾನ ಬಳಸಿರುವುದು. ಇದನ್ನು ಮೂರು ತರಹದಲ್ಲಿ ಹಾಕಿಕೊಳ್ಳಬಹುದು. ಜೊತೆಗೆ ಇದರಲ್ಲಿರುವ ಯುನಿಕ್ ರಾಪಿಡ್ ಕನೆಕ್ಟ್ ತಂತ್ರಜ್ಞಾನದಿಂದ ಸುಲಭವಾಗಿ ಫ್ಲಿಪ್ ಮಾಡಿ ಮಾತಾಡಲೂಬಹುದು.

ಫ್ಲಿಪ್ ನ ಬ್ಯಾಟರಿ 6 ಗಂಟೆ ಟಾಕ್ ಟೈಂ ಮತ್ತು ಸ್ಟಾಂಡ್ ಬೈ ಟೈಂ ವೂಫಿಂಗ್ 12 ದಿನ ಇರುವುದಾದರೆ, ಸಿಲ್ವರ್ ನಲ್ಲಿ 15 ಗಂಟೆ ಟಾಕ್ ಟೈಂ ಇದೆ. ಸಿಲ್ವರ್ ಹೆಡ್ ಸೆಟ್ ಜೊತೆ ಪುಟ್ಟದಾದ ಚಾರ್ಜಿಂಗ್ ಕೇಸ್ ನೀಡಲಾಗಿದೆ. ಔನ್ಸ್ ಗಿಂತ ಕಡಿಮೆ ತೂಕ ಹೊಂದಿರುವ ಎರಡೂ ಬ್ಲೂಟೂಥ್ ಹೆಡ್ ಸೆಟ್ ಬೆಲೆಯೂ ಕೈಗೆಟುಕುವಂತಿದೆ.

ಮೊಟೊರೊಲಾ ಎಲೈಟ್ ಸಿಲ್ವರ್ ಬೆಲೆ ಸುಮಾರು 5, 900 ರು ಆಗಿದ್ದರೆ ಮೊಟೊರೊಲಾ ಫ್ಲಿಪ್ ಬೆಲೆ ಸುಮಾರು 4000 ರು ಎಂದು ತಿಳಿದುಬಂದಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot