ಜಾಗಿಂಗ್ ಮಾಡುವಾಗ ಜಾಬ್ರಾ ಜೊತೆಗಿರಲಿ

By Super
|
ಜಾಗಿಂಗ್ ಮಾಡುವಾಗ ಜಾಬ್ರಾ ಜೊತೆಗಿರಲಿ
ನೀವು ಜಾಗಿಂಗ್ ಅಥವಾ ಬೈಕಿಂಗ್ ಹೋಗುತ್ತಿದ್ದರೆ ನಿಮ್ಮ ಜೊತೆ ನಿಮಗಿಷ್ಟವಾದ ಸಂಗೀತವನ್ನೂ ಸುಲಭವಾಗಿ ಕೊಂಡೊಯ್ಯಬಹುದು. ಹೌದು. ಜಾಬ್ರಾ ಸ್ಪೋರ್ಟ್ ಇಯರ್ ಫೋನ್ ಎಂಬ ಬ್ಲೂಟೂಥ್ ಹೆಡ್ ಸೆಟ್ ವೈರ್ ಇಲ್ಲದೆಯೇ ಸಂಗೀತದ ರಸಾನುಭವ ಸವಿಯುವ ಅವಕಾಶ ನೀಡಲಿದೆ.

ಬ್ಲೂಟೂಥ್ ಸ್ಟಿರಿಯೋ ಹೆಡ್ ಸೆಟ್ ಗಳಲ್ಲಿ ಜಾಬ್ರಾ ಸ್ಪೋರ್ಟ್ ಬ್ಲೂಟೂಥ್ ಹೆಡ್ ಸೆಟ್ ನದು ಮೊದಲ ಸ್ಥಾನ. ಗಾಢ ಹಳದಿ ಬಣ್ಣದ ಕೇಬಲ್ ಮತ್ತು ಎರಡು ಇಯರ್ ಪೋನ್ ನಿಮ್ಮ ಕಣ್ಸೆಳೆಯುತ್ತವೆ. ಕಿವಿಗಳಿಗೆ ಸುಲಭವಾಗಿ ಹೊಂದಿಕೊಳ್ಳಲು 3 ಇಯರ್ ಜೆಲ್ ಗಳನ್ನು ಇದರೊಂದಿಗೆ ನೀಡಲಾಗಿದೆ.

ಅತ್ಯಾಧುನಿಕವಾದ ಆಡಿಯೊ ಡಿಸ್ಟ್ರಿಬ್ಯೂಷನ್ ಪ್ರೊಫೈಲ್ ಹೊಂದಿರುವುದು ಈ ಹೆಡ್ ಸೆಟ್ ವಿಶೇಷ. ಇದರ ಅಪ್ಲಿಕೇಶನ್ ಅನೇಕ ಸ್ಮಾರ್ಟ್ ಫೋನ್ ಹಾಗೂ ಬ್ಲೂಟೂಥ್ ಇರುವ ಎಂಪಿ3 ಪ್ಲೇಯರ್ ನಲ್ಲಿ ಲಭ್ಯವಿದೆ. ಜೊತೆಗೆ ಇದರಲ್ಲಿರುವ ವಾಯ್ಸ್ ಪ್ರಾಮ್ಟ್ ತಂತ್ರಜ್ಞಾನ, 'ಪ್ರಿ ಸೆಟ್ ಪಾಸ್ ಕೋಡ್' ಮೂಲಕ ನಿರ್ದೇಶನ ನೀಡುತ್ತದೆ.

ಅತ್ಯುನ್ನತ ಸಂಗೀತ ಗುಣಮಟ್ಟ ಹೊಂದಿರುವ ಹೆಡ್ ಸೆಟ್ ನಲ್ಲಿ ಬ್ಯಾಸ್ ಆಯ್ಕೆ ಇದ್ದು, ಗದ್ದಲವನ್ನು ತಡೆಯುವ ನಾಯ್ಸ್ ಕ್ಯಾನ್ಸಲೇಶನ್ ಸಾಮರ್ಥ್ಯವನ್ನೂ ಹೊಂದಿದೆ.

ಇದರಲ್ಲಿ ವಿಶೇಷವಾಗಿ ಅಳವಡಿಸಿರುವ ಜಾಬ್ರಾ ಎಂಡೊಮೊಂಡೊ ಸ್ಪೋರ್ಟ್ ಟ್ರ್ಯಾಕರ್, ನೀವು ಜಾಗಿಂಗ್, ಬೈಕಿಂಗ್ ಅಥವಾ ಜಿಮ್ ನಲ್ಲಿ ಕ್ರಮಿಸಿದ ಕಾಲವನ್ನು ಟ್ರ್ಯಾಕ್ ರೆಕಾರ್ಡ್ ಮಾಡುತ್ತದೆ. ಇಷ್ಟೆಲ್ಲಾ ಅವಕಾಶವನ್ನು ನೀಡಲಿರುವ ಈ ಹೆಡ್ ಸೆಟ್ ಬೆಲೆ ಭಾರತದಲ್ಲಿ 2,700 ರು ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X