ನೋಕಿಯಾ ಹೊರತಂದಿದೆ ಎಸೆನ್ಸ್ ಹೆಡ್ ಸೆಟ್

Posted By: Staff

ನೋಕಿಯಾ ಹೊರತಂದಿದೆ ಎಸೆನ್ಸ್ ಹೆಡ್ ಸೆಟ್
ಎರಡು ತಿಂಗಳಿನಿಂದ ಸುದ್ದಿಯಲ್ಲಿದ್ದ ನೋಕಿಯಾ ಎಸೆನ್ಸ್ ಬ್ಲೂಟೂಥ್ ಹೆಡ್ ಸೆಟ್ ಅನ್ನು ಹೊರತರಲು ನೋಕಿಯಾ ನಿರ್ಧರಿಸಿದೆ.

ಸಂಗೀತವನ್ನು ಯಾವುದೇ ಗೊಂದಲ, ಗದ್ದಲವಿಲ್ಲದೆ ಮನಸ್ಸಾರೆ ಅನುಭವಿಸಲು ನೀವು ಬಯಸುವುದಾದರೆ ಎಸೆನ್ಸ್ ಹೆಡ್ ಸೆಟ್ ನಿಮಗೆ ಸೂಕ್ತ. ಬ್ಲೂಟೂಥ್ ಹೊಂದಿರುವ ಯಾವ ಹ್ಯಾಂಡ್ ಸೆಟ್ ಗಾದರೂ ಹೊಂದಿಕೊಳ್ಳುವ ಈ ಎಸೆನ್ಸ್ ಹೆಡ್ ಸೆಟ್ ಪ್ರಯಾಣಕ್ಕೂ ಕಂಫರ್ಟೆಬಲ್.

ಎಸೆನ್ಸ್ ಹೆಡ್ ಸೆಟ್ ವಿಶೇಷತೆ:
* 58.9 ಎಂಎಂ x 31.6 ಎಂಎಂ x 15.7 ಎಂಎಂ ಡೈಮೆಂಶನ್
* 32 ಗ್ರಾಂ ತೂಕ
* ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್
* ನಾಲ್ಕು ರೀತಿಯ ಸಂಗೀತದ ಪ್ರೊಫೈಲ್ (tuned music profile)
* ಗುಣಮಟ್ಟದ ಆಡಿಯೋ ಕೋಡ್
* ವೈರ್ ಲೆಸ್ ಇಂಟ್ಯೂಟಿವ್ ಮ್ಯುಸಿಕ್ ಮತ್ತು ಕಾಲ್ ಕಂಟ್ರೋಲ್
* 10ಎಂ ಬ್ಲೂಟೂಥ್ ಆಪರೇಟಿಂಗ್ ರೇಂಜ್
* ಆಪರೇಟಿಂಗ್ ಕೀ, ಮಲ್ಟಿಫಂಕ್ಷನ್ ಕೀ, ವಾಲ್ಯೂಮ್ ಕಂಟ್ರೋಲ್ ಕೀ* ಬ್ಯಾಸ್, ಟ್ರೆಬಲ್ ನಿಯಂತ್ರಣ
* ಲಿಯಾನ್ ಪಾಲಿಮರ್ ಬ್ಯಾಟರಿ, 8 ಗಂಟೆ ಪವರ್, 240 ಗಂಟೆ ಸ್ಟಾಂಡ್ ಬೈ ಟೈಂ

ಇಷ್ಟೆಲ್ಲಾ ಸಂಗೀತದ ಅವಕಾಶಗಳನ್ನು ಹೊಂದಿರುವ ಈ ಎಸೆನ್ಸ್ ಹೆಡ್ ಸೆಟ್ ನಿಮಗೆ ಒಳ್ಳೆ ಆಯ್ಕೆ ಎನಿಸಲಿದೆ. ಆದರೆ ಈ ಹೆಡ್ ಸೆಟ್ ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot