ಮ್ಯಾಕ್, ಆಪಲ್ ಐಪೋನ್ ಗೆ ಪ್ಲಾಂಟ್ರೊನಿಕ್ಸ್ ಹೆಡ್ ಸೆಟ್

Posted By: Staff

ಮ್ಯಾಕ್, ಆಪಲ್ ಐಪೋನ್ ಗೆ ಪ್ಲಾಂಟ್ರೊನಿಕ್ಸ್ ಹೆಡ್ ಸೆಟ್
ಆಡಿಯೋ ವಸ್ತುಗಳ ತಯಾರಿಯಲ್ಲಿ ಪ್ಲಾಂಟ್ರೊನಿಕ್ಸ್ ಗೆ ಐದು ದಶಕಗಷ್ಟು ಅನುಭವನ್ನು ಹೊಂದಿದೆ. ಈಗ ಮೊಬೈಲ್ , ಕಂಪ್ಯೂಟರ್, ಐಪೋನ್ ಹೀಗೆ ಎಲ್ಲದರಲ್ಲೂ ಸಂಗೀತ ಕೇಳಬಹುದಾಗದೆ. ಸಾಗರದಷ್ಟು ವಿಸ್ತರದ ಮ್ಯುಸಿಕ್ ಅನ್ನು ಒಂದು ಪುಟ್ಟ ಸಾಧನದಲ್ಲಿ ಇರುವಂತೆ ಹೊಸ ಹೊಸ ಆಡಿಯೋಗಳು ತಯಾರು ಆಗುತ್ತಿವೆ.

ಅದರಲ್ಲೂ ಮ್ಯಾಕ್ ಮತ್ತು ಆಪಲ್ ಸಂಗೀತ ಸಾಧನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನರಿತ ಪ್ಲಾಂಟ್ರೊನಿಕ್ಸ್ ತನ್ನ ಹೆಡ್ ಸೆಟ್ ಪ್ಲಾಂಟ್ರೊನಿಕ್ಸ್ ವಾಯಜರ್ ಪ್ರೋ UC ಯನ್ನು ಮ್ಯಾಕ್ ಮತ್ತು ಆಪಲ್ ಐಪೋನ್ ಗಳಿಗೆ ಹೊಂದುವಂತೆ ರೂಪಿಸಲಾಗಿದೆ.

ಈ ಅಡಿಯೋ Skype ಮತ್ತು ಮೈಕ್ರೋಸಾಫ್ಟ್ OCS ನೊಂದಿಗೆ ಪ್ಲಾಂಟ್ರೊನಿಕ್ಸ್ ಮಿನಿ USB ಅಡಾಪ್ಟರ್ ಬಳಸಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವುದು. 17.6 ಗ್ರಾಂ ತೂಕವಿರುವ ಈ ಸಾಧನವನ್ನು ಇದನ್ನು ಇದರ ಸ್ಪರ್ಧಿಗಳಿಗೆ ಹೋಲಿಸಿದರೆ ತುಂಬಾ ಹಗುರವಾಗಿದೆ.

ಈ ಹೆಡ್ ಸೆಟ್ ನಲ್ಲಿ ಕಾಲ್ ಕಂಟ್ರೋಲ್ ಬಟನ್ ಬಳಸಿ ಕಾಲ್ ಕಟ್ ಮಾಡಬಹುದುದಾಗಿದೆ. ಅಲ್ಲದೆ ವಾಯ್ಸ್ ಆಕ್ಟಿವೇಟಡ್ ಡಯಾಲಿಂಗ್ ತಂತ್ರಜ್ಞಾನವನ್ನು ಸಪೋರ್ಟ್ ಮಾಡುತ್ತದೆ.

ಇದರಲ್ಲಿ ಶಬ್ದ ಮತ್ತು ಪವರ್ ಅನ್ನು ನಿಯಂತ್ರಿಸುವ ಬಟನ್ ಇದೆ. ಇದರಲ್ಲಿ ಚಿಕ್ಕ ಶಬ್ದ ಕೂಡ ಚೆನ್ನಾಗಿ ಕೇಳಿಸುತ್ತದೆ.

ಮ್ಯಾಕ್ ಮತ್ತು ಐಪೋನ್ ಗಳಲ್ಲಿ ಬಳಸಬಹುದಾದ ಈ ಹೆಡ್ ಸೆಟ್ ಬೆಲೆ ರು. 8, 500 ಆಗಿದ್ದು ಬಳಕೆದಾರರ ಮೆಚ್ಚುಗೆ ಗಳಿಸುವಲ್ಲಿ ಯಾವುದೇ ಸಂಶಯವಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot