ಏರ್ ಡಕ್ ಮಾಡುವುದು ಮನೆಯೆಲ್ಲಾ ಸಂಗೀತಮಯ

Posted By: Staff

ಏರ್ ಡಕ್ ಮಾಡುವುದು ಮನೆಯೆಲ್ಲಾ ಸಂಗೀತಮಯ
ಸಂಗೀತ ಪ್ರಿಯರಿಗಾಗಿ ಅನೇಕ ಮ್ಯೂಸಿಕ್ ಕಂಪನಿಗಳು ತಾನು ಮುಂದು ಇಲ್ಲ ನಾ ಮುಂದು ಎಂಬಂತೆ ಸ್ಪರ್ಧಾತ್ಮಕವಾಗಿ ತನ್ನ ಸಾಧನಗಳನ್ನು ಬಿಡುಗಡೆ ಮಾಡುತ್ತಿವೆ ಅದರಲ್ಲೂ ಆಡಿಸ್ಸಿ ಕೂಡ ಸೇರಿದೆ. ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೊಸ ಏರ್ ಪ್ಲೇ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ.

ಈ ಹೊಸ ಏರ್ ಪ್ಲೇ ಸ್ಪೀಕರ್ ಹೆಸರು ಲೋವರ್ ಈಸ್ಟ್ ಸೈಡ್ ಆಡಿಯೋ ಡಕ್ ಏರ್ ,ಇದರ ಪ್ರಮುಖ ವಿಶೇಷವೆಂದರೆ ಇದನ್ನು ಬಳಸಿ ಮನೆಯ ಯಾವ ಕಡೆ ಹೋದರು ಸಂಗಿತವನ್ನು ಕೇಳಬಹುದಾಗಿದೆ. ಇದನ್ನು ಬಳಸಿ ವೈರ್ ಲೆಸ್ ಆಗಿ ಐಪೋನ್ , ಐಪ್ಯಾಡ್, ಐಪೋಡ್, ಕಂಪ್ಯೂಟರ್ ನಿಂದ ಮನೆಯಲ್ಲಿ ಹಾಡು ಕೇಳಬಹುದಾಗಿದೆ.

ವೈರ್ ಲೆಸ್ ಏರ್ ಸ್ಪೀಕರ್ ಬಳಸಿ ಉತ್ತಮ ಗುಣ ಮಟ್ಟದ ಹಾಡುಗಳನ್ನು ಕೇಳಬಹುದಾಗಿದೆ, ಇದನ್ನು ಗ್ರಾಹಕನ ಬೇಡಿಕೆಗಳನ್ನು ಪೂರೈಸುವಂತೆ ರೂಪಿಸಲಾಗಿದೆ.

ಏರ್ ಸ್ಪೀಕರ್ ನಲ್ಲಿ 2ನೇ ರೇಂಜಿನಲ್ಲಿರುವ ಇದು ಈ ಕಂಪನಿಗೆ ಉತ್ತಮ ಮಾರುಕಟ್ಟೆಯನ್ನು ನೀಡಲಿದೆ ಎಂಬ ನಿರೀಕ್ಷೆಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

ಇದು ಸಂಗೀತ ಪ್ರಿಯರ ಮನಗೆದ್ದರೆ ಅತೀ ಬೇಗನೆ ಮ್ಯೂಸಿಕ್ ಸಾಧನಗಳಲ್ಲಿ ಲೀಡರ್ ಸ್ಥಾನವನ್ನು ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಇದೇ ನವಂಬರ್ ನಲ್ಲಿ ತನ್ನ ಮ್ಯಾಸಿಕ್ ಮಾರುಕಟ್ಟೆಯಲ್ಲಿ ಪ್ರಯಾಣವನ್ನು ಮಾಡಲಿರುವ ಇದು ಮೊದಲು ಯು.ಎಸ್ ನಲ್ಲಿ ಬಿಡುಗಡೆಯಾಗಲಿದೆ.

ಮನೆಯನ್ನು ಸಂಗೀತಮಯ ಮಾಡ ಹೊರಟಿರುವ ಈ ಸಾಧನದ ಬೆಲೆ ರು. 19,500 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot