3ಡಿ ಅನನ್ಯ ಅನುಭವಕ್ಕಾಗಿ ಸೋನಿ ಹೆಡ್ ಸೆಟ್

Posted By: Staff

3ಡಿ ಅನನ್ಯ ಅನುಭವಕ್ಕಾಗಿ ಸೋನಿ ಹೆಡ್ ಸೆಟ್
ಸೋನಿ ವಸ್ತುಗಳ ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲ. ಇತ್ತೀಚಿಗೆ ಈ ಸೋನಿ ಸಂಗೀತ ಪ್ರಿಯರಿಗಾಗಿ 3D ಹೆಡ್ ಸೆಟ್ ಅನ್ನು ತಂದಿದೆ. ಇದನ್ನು ಬಳಸಿ 3D ಸಿನಿಮಾ ಮತ್ತು ಗೇಮ್ ನ ಅನುಭವ ಪಡೆಯಬಹುದಾಗಿದೆ.

ಸೋನಿ 3D ಹೆಡ್ ಸೆಟ್ ಅನ್ನು HMZ-T1 ಪರ್ಸನಲ್ 3D ವ್ಯೂವರ್ ಎಂದು ಕರೆಯಲಾಗಿದೆ. ಸೋನಿ ಹೆಡ್ ಸೆಟ್ ನಲ್ಲಿ 0.7 ಇಂಚು, 1280x720 ಪಿಕ್ಸಲ್ OLED ಪೇನಲ್ ಅನ್ನು ಪ್ರತಿಯೊಂದು ಕಿವಿಗೆ ಹೊಂದಿದೆ.

ಸೋನಿ ತಂದಿರುವ OLED ಸ್ಕ್ರೀನ್ ದೃಶ್ಯದಲ್ಲಿ ಉತ್ತಮ ಗುಣ ಮಟ್ಟವನ್ನು ಹೊಂದಿದ್ದು 3D ಅನುಭವವನ್ನು ನೀಡುತ್ತದೆ. ಇದನ್ನು ಬಳಸಿ ಸಿನಿಮಾ ಅಥವಾ ಗೇಮ್ ನಲ್ಲಿ ಬಳಸಿದಾಗ ಅದು ಬಳಕೆದಾರರನ್ನು ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತದೆ.

ಸಿನಿಮಾದಲ್ಲಿ ಗುಂಡಿನ ಶಬ್ದ ಮತ್ತು ಹೆಜ್ಜೆಯ ಶಬ್ದ ನಮ್ಮ ಸಮೀಪವೆ ಕೇಳಿದಂತೆ ಭಾಸವಾಗುತ್ತದೆ. ಇದನ್ನು HDMI ಕೇಬಲ್ ಬಳಸಿ 3D ಸಿನಿಮಾ ಅಥವಾ ಗೇಮ್ ನ ಅನುಭವ ಪಡೆಯಬಹುದಾಗಿದೆ.

ಬಳಕೆದಾರರಿಗೆ ಸಂಪೂರ್ಣ ಮನರಂಜನೆ ನೀಡುವ ಈ ಹೆಡ್ ಸೆಟ್ ನ ಬೆಲೆ ರು. 38,000 ಆಗಿದ್ದು ಸಾಮನ್ಯ ಜನರಿಗೆ ಇದರ ಕೊಂಡು 3Dಯ ಅನುಭವ ಪಡೆಯುವುದು ಸ್ವಲ್ಪ ಕಷ್ಟವಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot