ಸಖತ್ ಸ್ಟೈಲಿಶ್ ಈ ಸಿರೀಸ್ 2 ಹೆಡ್ ಸೆಟ್

Posted By: Staff

ಸಖತ್ ಸ್ಟೈಲಿಶ್ ಈ ಸಿರೀಸ್ 2 ಹೆಡ್ ಸೆಟ್
ಬೋಸ್ ಬ್ಲೂಟೂಥ್ ಹೆಡ್ ಸೆಟ್ ಹೊರತಂದಿದ್ದ ಬೋಸ್ ಕಂಪನಿ ಇದೀಗ ಅದೇ ಮಾದರಿಯ ಮತ್ತೊಂದು ವಿನೂತನ ಸಿರೀಸ್ 2 ಹೆಡ್ ಸೆಟ್ ಬಿಡುಗಡೆ ಮಾಡಿದೆ.

48 ಓನ್ಸ್ ತೂಕವಿರುವ ಬೋಸ್ ಬ್ಲೂಟೂಥ್ ಸಿರೀಸ್ 2 ಹೆಡ್ ಸೆಟ್ ಶೈನಿಯಾಗಿರುವ ಕಪ್ಪು ಪ್ಲಾಸ್ಟಿಕ್ ನಿಂದ ತಯಾರಿಸಲಾಗಿದೆ. ಹೆಡ್ ಸೆಟ್ ನ ಎಲ್ಲಾ ಬದಿಗಳಲ್ಲಿಯೂ ಇರುವ ಗೆರೆ ರಾಯಲ್ ಲುಕ್ ನೀಡಲಿದೆ.

ಹೆಡ್ ಸೆಟ್ ಮೇಲೆ ಮಲ್ಟಿ ಫಂಕ್ಷನ್ ಕಾಲ್ ಬಟನ್, ವಾಲ್ಯೂಮ್ ಕಂಟ್ರೋಲ್ ಮತ್ತು ಕೆಳಗೆ ಸ್ಲೈಡಿಂಗ್ ಬಟನ್ ಕೂಡ ಇದೆ. ಹೆಡ್ ಸೆಟ್ ಹಿಂದೆ ಎಲ್ ಇಡಿ ಲೈಟ್ ಇದ್ದು, ಇದು ಬ್ಲೂಟೂಥ್ ಮತ್ತು ಬ್ಯಾಟರಿ ಸಂಕೇತಿಸುತ್ತದೆ. ಬ್ಯಾಟರಿ ತಿಳಿಯಲು ಹಸಿರು, ಹಳದಿ ಮತ್ತು ಕೆಂಪು ಬಣ್ಣದ ಲೈಟ್ ನೀಡಲಾಗಿದೆ.

ಈ ಹೆಡ್ ಸೆಟ್ ವಾಲ್ ಅಡಾಪ್ಟರ್ ಮತ್ತು USB ಚಾರ್ಜರ್ ಜೊತೆ ಬಂದಿದೆ. ಮೊದಲ ಆಯಾಮದ ಹೆಡ್ ಸೆಟ್ ಅನ್ನು ಬಲಕಿವಿಗೆ ಮಾತ್ರ ತಯಾರಿಸಲಾಗಿತ್ತು. ಆದರೆ ಈ ಸಿರೀಸ್ 2 ಹೆಡ್ ಸೆಟ್ ಬಲ ಮತ್ತು ಎಡ, ಎರಡೂ ಕಿವಿಗೂ ಹೊಂದಿಕೊಳ್ಳುವಂತೆ ಮಾಡಲಾಗಿದೆ.

ಬೋಸ್ IE2 ಇಯರ್ ಫೋನ್ ನಂತೆ ಸಿರೀಸ್ 2 ಕೂಡ ಸ್ಟೇ ಹಿಯರ್ ಟಿಪ್ಸ್ ಬಳಸಿಕೊಂಡಿದೆ. ನಿರಂತರವಾಗಿ ಹೆಡ್ ಸೆಟ್ ಹಾಕಿಕೊಳ್ಳುವವರಿಗೆ ಇದು ಸೂಕ್ತ. ಇದರಲ್ಲಿ ಆಟೊಮೆಟಿಕ್ ಪೇರಿಂಗ್ ಮೋಡ್ ಇದ್ದು, ಪೇರಿಂಗ್ ಗೆ ಬ್ಲೂಟೂಥ್ ಮೆನು ಸೆಟ್ಟಿಂಗ್ ಆಯ್ಕೆ ಇದೆ.

ಸಂಗೀತ ಗುಣಮಟ್ಟವೂ ಅತ್ಯುತ್ತಮವಾಗಿದ್ದು, ಇದರಲ್ಲಿನ ನಾಯ್ಸ್ ಕ್ಯಾನ್ಸಲೇಶನ್ ತಂತ್ರಜ್ಞಾನ ಜಾಬೋನ್ ಎರಾ ತಂತ್ರಜ್ಞಾನದಷ್ಟು ಇಲ್ಲದಿದ್ದರೂ ಕರೆಯಲ್ಲಿ ಅಡಚಣೆಯಾಗದಂತೆ ತಯಾರಿಸಲಾಗಿದೆ. ಈ ಹೆಡ್ ಸೆಟ್ ಗದ್ದಲದ ವಾತಾವರಣಕ್ಕೆ ಸ್ವಯಂಚಾಲಿತವಾಗಿ ಹೊಂದಿಕೊಳ್ಳುತ್ತದೆ ಎಂದು ತಯಾರಕರು ತಿಳಿಸಿದ್ದಾರೆ. ಇದರ ಬ್ಯಾಟರಿ 5 ಗಂಟೆ 46 ನಿಮಿಷ ಟಾಕ್ ಟೈಂ ಹೊಂದಿದೆ.

A2DP ಶಬ್ದದ ಗುಣಮಟ್ಟ ಹೊಂದಿರುವ ಈ ಸಿರೀಸ್ 2 ಭಾರತದಲ್ಲಿ 6,750 ರುಗೆ ದೊರೆಯಲಿರುವುದಾಗಿ ಅಂದಾಜಿಸಲಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot