ಈ ಸಂಗೀತದ ಆಭರಣ ಯಾವಾಗ ಹಾಕಿಕೊಳ್ತೀರಾ?

By Super
|
ಈ ಸಂಗೀತದ ಆಭರಣ ಯಾವಾಗ ಹಾಕಿಕೊಳ್ತೀರಾ?
ಅತ್ಯಾಕರ್ಷಕ ಮತ್ತು ಅತ್ಯಾಧುನಿಕ ಸಂಗೀತ ಸಾಧನಗಳನ್ನು ಪರಿಚಯಿಸುವಲ್ಲಿ ಮುಂದಿರುವ ಜಾಬ್ರಾ ಕಂಪನಿ ಇತ್ತೀಚೆಗಷ್ಟೆ ಜಾಬ್ರಾ ಸ್ಟ್ರೀಟ್ 2 ಎಂಬ ಸಂಗೀತ ಸಾಧನವನ್ನು ಬಿಡುಗಡೆಗೊಳಿಸಿದೆ. ಆಭರಣದಂತೆ ತೊಟ್ಟುಕೊಳ್ಳಬಹುದಾದ ಈ ಸಾಧನ ನಿಜಕ್ಕು ನಿಮ್ಮ ಮನಗೆಲ್ಲಲಿದೆ.

ಉತ್ತಮ ಗುಣಮಟ್ಟದ ಇಯರ್ ಫೋನ್ ಹೊಂದಿರುವ ಈ ಸಾಧನದಲ್ಲಿ ಗದ್ದಲ ತಡೆಯುವ ಇಯರ್ ಬಡ್ಸ್ ಇದ್ದು, ಸಂಗೀತದಲ್ಲಿ ಸ್ಪಷ್ಟತೆ ನೀಡಲಿದೆ. ಇದರೊಂದಿಗೆ ಮೆಟಲ್ ಚೈನ್ ನೀಡಲಾಗಿದ್ದು, ಬೇಕೆಂದಾಗ ಬಳಸಬಹುದು. ಜಾಬ್ರಾದಲ್ಲಿ ಇನ್ನೂ ಕೆಲವು ವಿಶೇಷತೆಗಳಿವೆ. ಅದೇನೆಂದು ಇಲ್ಲಿ ತಿಳಿಯಿರಿ.

ಜಾಬ್ರಾ ಸ್ಟ್ರೀಟ್ 2 ವಿಶೇಷತೆ:
* 30 ಗ್ರಾಂ ತೂಕ
* ಬ್ಲೂಟೂಥ್ 3.0 ನೊಂದಿಗೆ EDR ಬೆಂಬಲಿತ ಹೆಡ್ ಸೆಟ್
* 10 ಮೀಟರ್ ವರೆಗೂ ಕಾರ್ಯ ನಿರ್ವಹಣೆ
* AM3D 2.0 ಸರೌಂಡ್ ಸೌಂಡ್ ಮತ್ತು ಪವರ್ ಬ್ಯಾಸ್
* ಎರಡು ಸಾಧನಗಳನ್ನು ಒಂದೇ ಬಾರಿ ಸಂಪರ್ಕಿಸುವ ತಂತ್ರಜ್ಞಾನ
* ಮಳೆಯಲ್ಲಿ ಸುರಕ್ಷತೆ ನೀಡಲು ಸ್ಪ್ಲಾಶ್ ಪ್ರೂಫ್
* 3.5 ಎಂಎಂ ಆಡಿಯೋ ಜ್ಯಾಕ್
* ರಿಮೂವೆಬಲ್ ಕ್ಲೋದಿಂಗ್ ಕ್ಲಿಪ್
* ಆಟೊ ಪೇರಿಂಗ್ ಸಹಾಯದಿಂದ ಸ್ಮಾರ್ಟ್ ಫೋನ್, ಇನ್ನಿತರ ಬ್ಲೂಟೂಥ್ ಸಾಧನಗಳೊಂದಿಗೆ ಸಂಪರ್ಕ ನೀಡಬಹುದು
* ಡಿಜಿಟಲ್ ಸೌಂಡ್ ಪ್ರೊಸೆಸಿಂಗ್
* ರಿಮೋಟ್ ಕಂಟ್ರೋಲ್

ತುಂಬಾ ಉನ್ನತ ಬ್ಯಾಟರಿ ಹೊಂದಿರುವ ಈ ಸಾಧನ 8 ಗಂಟೆ ಟಾಕ್ ಟೈಂ ಮತ್ತು ವೂಪಿಂಗ್ 9.5 ದಿನ ಸ್ಟಾಂಡ್ ಬೈ ಟೈಂ ನೀಡುತ್ತದೆ. ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಲಭ್ಯವಿರುವ ಈ ಸಾಧನದ ಬೆಲೆ 3,800 ರು ಆಗಿದೆ. ಒಂದು ವರ್ಷದ ವಾರೆಂಟಿಯೂ ಇದರೊಂದಿಗೆ ನೀಡಲಾಗುತ್ತೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X