ನೋಕಿಯಾ ಹೆಡ್ ಸೆಟ್ ಗೆ ನೋಕಿಯಾನೆ ಸಾಟಿ !

By Super
|
ನೋಕಿಯಾ ಹೆಡ್ ಸೆಟ್ ಗೆ ನೋಕಿಯಾನೆ ಸಾಟಿ !
ನೋಕಿಯಾ ಮೊಬೈಲ್ ಅಷ್ಟೆ ಅಲ್ಲ ಸಂಗಿತ ಸಾಧನಗಳನ್ನು ಉತ್ಕೃಷ್ಟ ಗುಣಮಟ್ಟದಲ್ಲಿ ತಯಾರಿಸುವುದರಿಂದ ಗ್ರಾಹಕರ ನೋಟ ಅದರತ್ತ ಹೆಚ್ಚಾಗುತ್ತಿದೆ.

ನೋಕಿಯದ 2012ರಲ್ಲಿ ಬಿಡುಗಡೆಯಾದ BH-806 ಬ್ಲೂಟೂತ್ ಹೆಡ್ ಸೆಟ್ ಗೆ ದೊರಕಿದ ' ರೆಡ್ ಡಾಟ್ ಡಿಸೈನ್ ಅವಾರ್ಡ್ ' CES ಡಿಸೈನ್ ಮತ್ತು ಎಂಜಿನಿಯರ್ ಇನ್ನೋವೇಶನ್ ಅವಾರ್ಡ್'ಗಳು ಇದರ ಅತ್ಯಂತ ಉತ್ತಮ ಗುಣಮಟ್ಟವನ್ನು ಹೇಳುವ ಸಾಕ್ಷಿಗಳಾಗಿವೆ.

BH-806 ಬ್ಲೂಟೂತ್ ಹೆಡ್ ಸೆಟ್ ಅನ್ನು ನೋಕಿಯಾ J ಎಂದು ಕರೆಯಲಾಗಿದ್ದು ವಿನ್ಯಾಸ, ಗುಣಲಕ್ಷಣ, ಸುರಕ್ಷೆ, ಹಾಗೂ ಬಳಕೆದಾರ ಇದರಿಂದ ಯಾವುದೇ ಕಿರಿಕಿರಿ ಅನುಭವಿಸದಂತೆ ರೂಪಿಸಲಾಗಿದೆ.

ನೋಕಿಯಾ J ಯನ್ನು ಸ್ಟೈನ್ ಲೆಸ್ ಸ್ಟೀಲ್ ನಿಂದ ಮಾಡಲಾಗಿದ್ದು, ನಿಕ್ಕಲ್ ಪ್ಲೇಟಿಂಗ್ ನಿಂದ ಕೆಲವರಿಗೆ ಅಲರ್ಜಿ ಉಂಟಾಗುವುದರಿಂದ ಇದರಲ್ಲಿ ನಿಕ್ಕಲ್ ಪ್ಲೇಟಿಂಗ್ ಅನ್ನು ಬಳಸಲಾಗಿಲ್ಲ .

ಈ ಹೆಡ್ ಸೆಟ್ ತೂಕ 8ಗ್ರಾಂ ಇದ್ದು ಕಿವಿಯಲ್ಲಿ ಇದನ್ನು ಹಾಕಿದ್ದೇವೆ ಎಂದು ಅನಿಸದ ಮಟ್ಟಿಗೆ ಹಗುರವಾಗಿದೆ. ಇದನ್ನು ಬಳಸಿ ಮೊಬೈಲ್ ಪೋನ್ ಬಳಕೆದಾರರು ಕಾಲ್ ಮಾಡುವುದು, ಮೆನುವಿನಲ್ಲಿ ಹಾಡು, ಕಾಲ್ ಹೀಗೆ ಆಯ್ಕೆಯನ್ನು ಸುಲಭವಾಗಿ ಮಾಡಬಹುದು.

ಈ ಹೆಡ್ ಸೆಟ್ ಬಳಸುವಾಗ ಈ ಕೆಳಗಿನ ಅಂಶಗಳನ್ನು ಗಮನಿಸಬೇಕು:

1. ಹೆಡ್ ಸೆಟ್ ಅನ್ನು ಮೊಬೈಲ್ ನ ಬ್ಲೂಟೂತ್ ಸಂಪರ್ಕವನ್ನು ಆನ್ ಮಾಡುವ ಮೊದಲು ಹೆಡ್ ಸೆಟ್ ಆಫ್ ಮಾಡಬೇಕು.

2. ಇದಕ್ಕಾಗಿ ಕಿವಿಯ ಬಳಿಯ ಮಲ್ಟಿ ಫಂಕ್ಷನ್ ಬಟನ್ ಅನ್ನು ಪ್ರೆಸ್ ಮಾಡಿದಾಗ ನೀವು ಸೆಲೆಕ್ಟ್ ಮಾಡಿದ ಭಾಷೆ ಕೇಳಿಬರುವುದು, ನಂತರ 2-3 ಆದ ಮೇಲೆ ನಂತರ ಹೆಡ್ ಸೆಟ್ ಅನ್ನು ಬ್ಲೂಟೂತ್ ಸಂಪರ್ಕದ ಲಿಸ್ಟನಲ್ಲಿ ನೋಡಿದಾಗ ಇದರ ಬಗ್ಗೆ ಸಂಕೇತ ನೀಡುವುದು.

ಹೆಡ್ ಸೆಟ್ ಬಟನ್ ಒಮ್ಮೆ ಪ್ರೆಸ್ ಮಾಡಿದರೆ ಕರೆ ಸ್ವೀಕೃತ, 2 ಸಲ ಪ್ರೆಸ್ ಮಾಡಿದರೆ ಕರೆ ತಿರಸ್ಕೃತ, ಬಟನ್ ಒಮ್ಮೆ ಪ್ರೆಸ್ ಮಾಡಿದರೆ ನಂಬರ್ ಅನ್ನು ಮತ್ತೆ ಕರೆ ಮಾಡಬಹುದು, ಬಟನ್ ಅನ್ನು 2 ಸೆಕೆಂಡ್ ಪ್ರೆಸ್ ಮಾಡಿ ಮಲ್ಟಿ ಫಂಕ್ಷನ್ ಆಯ್ಕೆ ಮಾಡಬಹುದಾಗಿದೆ.

ಉತ್ತಮ ಕಾರ್ಯ ನಿರ್ವಹಿಸುವ ಈ ಗುಣಮಟ್ಟದ ಬೆಲೆ ರು. 7,100 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X