ಐಗೊ ನೀಡುತ್ತಿದೆ ಸರಣಿ ಸಿಟಿ ಹೆಡ್ ಫೋನ್

Posted By: Staff

ಐಗೊ ನೀಡುತ್ತಿದೆ ಸರಣಿ ಸಿಟಿ ಹೆಡ್ ಫೋನ್
ಸಂಗೀತ ಸಾಧನಗಳ ತಯಾರಿಕೆಯಲ್ಲಿ ಮುಂದಿರುವ ಐಗೊ ಕಂಪನಿ ಆಕರ್ಷಕ ಹೆಡ್ ಫೋನ್ ಗಳನ್ನು ಬಿಡುಗಡೆಗೊಳಿಸಿದೆ. ಸ್ಕೈಪ್ ಅಡಾಪ್ಟರ್ ಮತ್ತು ಮೈಕ್ರೊಫೋನ್ ಹೊಂದಿರುವ ಈ ಸಂಗೀತ ಸಾಧನಗಳಲ್ಲಿ ನಿಮ್ಮ ಇಚ್ಛೆಗನುಸಾರವಾಗಿ ಆಯ್ಕೆಗಳೂ ಲಭ್ಯವಿದೆ.

ಐಗೊ ಮಿಯಾಮಿ ಮಿಡ್ ಸೈಝ್ ಸ್ಟಿರಿಯೋ ವರ್ಶನ್, ಐಗೊ ಡಿಟ್ರಾಯ್ಟ್ ಇನ್ ಇಯರ್ ಬಡ್ ಮಾಡಲ್, ಐಗೊ ಸಿಟಿ ಓವರ್ ಇಯರ್ ಹೆಡ್ ಪೋನ್, ಐಗೊ ಮೆಂಫಿಸ್ ಓವೆರ್ ಇಯರ್ ಸ್ಟಿರಿಯೋ ಮತ್ತು ನಾಯ್ಸ್ ಕ್ಯಾನ್ಸಲಿಂಗ್ ಹೆಡ್ ಸೆಟ್, ಈ ಅನೇಕ ಮಾದರಿಯ ಹೆಡ್ ಫೋನ್ ಗಳನ್ನು ಐಗೊ ಬಿಡುಗಡೆಗೊಳಿಸಿದೆ.

ಇವುಗಳಲ್ಲಿ ಐಗೊ ಸಿಟಿ ಹೆಡ್ ಫೋನ್ ರೆಟ್ರೊ ಲುಕ್ ಹೊಂದಿದ್ದು, ಬಿಳಿ ಮತ್ತು ಕೆಂಪು, ಬೂದು ಮತ್ತು ಚಿನ್ನದ ಬಣ್ಣದ ಮಿಶ್ರಣದ ಆಕರ್ಷಕ ಬಣ್ಣದಲ್ಲಿ ಲಭ್ಯವಿದೆ. ಕಿವಿಗಳಿಗೆ ಅತಿ ಸುಲಭವಾಗಿ ಹೊಂದಿಕೊಳ್ಳುವಂತಿರುವ ಕಪ್ ಗಳನ್ನು ಹೊಂದಿರುವ ಹೆಡ್ ಫೋನ್ ನಲ್ಲಿ ಡಿಟಾಚೆಬಲ್ ಲೀಡ್ಸ್ ನೀಡಲಾಗಿದೆ.

ಸ್ಕೈಪ್ ಕರೆಗಳ ಸಂಪರ್ಕಕ್ಕೆ ಇದರಲ್ಲಿ ಐಗೊ ಅಡಾಪ್ಟರ್ ಗಳನ್ನು ನೀಡಲಾಗಿದೆ. ನೀವು ವಿಮಾನದಲ್ಲಿದ್ದಾಗಲೂ ಇದರ ಬಳಕೆಗೆ ಅಡಾಪ್ಟರ್ ನೀಡಲಾಗಿದೆ.
ದುಬಾರಿ ಎನಿಸಿದ ನಾಯ್ಸ್ ಕ್ಯಾನ್ಸಲೇಶನ್ ತಂತ್ರಜ್ಞಾನ ಹೊಂದಿರುವ ಹೆಡ್ ಫೋನ್ ಇದಾಗಿದೆ. ಆದರೆ ಇದರಲ್ಲಿ ತಕ್ಷಣವೇ ಟ್ರ್ಯಾಕ್ ಮತ್ತು ವಾಲ್ಯೂಮ್ ನಿಯಂತ್ರಣಕ್ಕೆ ಆಯ್ಕೆಯಿಲ್ಲ. ಇದರಲ್ಲಿ ಅತ್ಯುನ್ನತ ಟ್ರಿಪಲ್ ಎ ಬ್ಯಾಟರಿ ನೀಡಲಾಗಿದೆ.

ಅತ್ಯುನ್ನತ ಐಗೊ ಹೆಡ್ ಸೆಟ್ ಬೆಲೆ 7,150 ರು, ಐಗೊ ಮಿಡ್ ಸೈಝ್ ಹೆಡ್ ಫೋನ್ ಬೆಲೆ 2,500 ಮತ್ತು ಐಗೊ ಲೋ ಎಂಡ್ ಹೆಡ್ ಫೋನ್ ಬೆಲೆ 1,250 ಎಂದು ತಿಳಿದುಬಂದಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot