ನೋಕಿಯಾ ನೀಡುತ್ತಿದೆ ಪ್ಯೂರಿಟಿ ಹೆಡ್ ಸೆಟ್

Posted By: Staff

ನೋಕಿಯಾ ನೀಡುತ್ತಿದೆ ಪ್ಯೂರಿಟಿ ಹೆಡ್ ಸೆಟ್
ಮೊಬೈಲ್ ಮಾರುಕಟ್ಟೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ನೋಕಿಯಾ 'ನೋಕಿಯಾ ಪ್ಯೂರಿಟಿ' ಎಂಬ ಹೆಡ್ ಸೆಟ್ ತಯಾರಿಸಿ ಮತ್ತಷ್ಟು ಬೃಹತ್ತಾದ ಮಾರುಕಟ್ಟೆಯನ್ನು ಉಂಟು ಮಾಡುವ ನಿರೀಕ್ಷೆಯಲ್ಲಿದೆ.

ಗುಣಮಟ್ಟದಲ್ಲಿ ಉತ್ತಮವಾಗಿರುವ ಈ HD ಸ್ಟಿರಿಯೋ ಹೆಡ್ ಸೆಟ್ ಕಂಪನಿಯ ಲುಮಿಯ ಹೆಡ್ ಸೆಟ್ ನಲ್ಲಿ ಬಳಸಬಹುದಾಗಿದೆ, ಅಲ್ಲದೆ ಇದನ್ನು ಸ್ಟ್ಯಾಂಡರ್ಡ್ 3.5mm ಜಾಕ್ ಬಳಸಿ ಜೋಡಿಸಲಾಗುವುದು. ಇದನ್ನು ಮಡಚಬಹುದಾಗಿರುವುದರಿಂದ ಜೊತೆಗೆ ಕೊಂಡೊಯ್ಯಲು ಸುಲಭವಾಗಿರುವಂತಿದೆ.

ಇದನ್ನು ಬಳಸಿ ಸಂಗೀತ ಕೇಳುತ್ತಿದ್ದರೆ ಇದು ಉತ್ತಮ ಗುಣಮಟ್ಟದ ಶಬ್ದವನ್ನು ನೀಡುವುದರಿಂದ ಯಾವುದೇ ರೀತಿಯ ಗದ್ದಲವು ಸಂಗೀತದ ಸವಿಗೆ ರಸಭಂಗ ಉಂಟುಮಾಡುವುದಿಲ್ಲ.

ನೋಕಿಯಾ ಮಾನಸ್ಟರ್ ನೊಂದಿಗೆ ಸೇರಿ ಮತ್ತಷ್ಟು ಆಡಿಯೊ ಉತ್ಪನ್ನಗಳನ್ನು ತಯಾರಿಸಲಿದ್ದು ಇವೆರೆಡು ಜೊತೆಗೂಡಿ ತಯಾರಿಸಿದ ಹೆಡ್ ಸೆಟ್ ಗುಣಮಟ್ಟದಲ್ಲಿ ಉತ್ತಮವಾಗಿದೆ.

ಬಿಳಿ, ಮೆಜಂತ, ಕಪ್ಪು ಹೀಗೆ ಆಕರ್ಷಕ ಬಣ್ಣದಲ್ಲಿ ಸಿಗುವ ಈ ಹೆಡ್ ಸೆಟ್ ಬೆಲೆಯನ್ನು ಕಂಪನಿಯು ಇನ್ನೂ ಪ್ರಕಟಗೊಳಿಸಲಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot