ಮೆರಿಡಿಯನ್ ನಿಂದ ಬಂದಿದೆ ನೂತನ ಸಬ್ ವೂಫರ್

Posted By: Staff

ಮೆರಿಡಿಯನ್ ನಿಂದ ಬಂದಿದೆ ನೂತನ ಸಬ್ ವೂಫರ್
ಹೋಮ್ ಥಿಯೇಟರ್ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿರುವ ಈ ಸಮಯದಲ್ಲಿ ಹೋಮ್ ಥಿಯೇಟರ್ ಗೆ ಅತಿ ಪ್ರಮುಖವೆನಿಸಿರುವ ಸಬ್ ವೂಫರ್ ಮತ್ತು ಲೌಡ್ ಸ್ಪೀಕರ್ ಗಳ ತಯಾರಿಕೆ ಮತ್ತು ಮಾರಾಟದಲ್ಲೂ ಪೈಪೋಟಿ ಹೆಚ್ಚಿದೆ.

ವಿನೂತನ ಮಾದರಿಯ ಲೌಡ್ ಸ್ಪೀಕರ್ ಮತ್ತು ಸಬ್ ವೂಫರ್ ಮಾದರಿಗಳು ಮೆರಿಡಿಯನ್ ನಲ್ಲಿ ನಿಮಗೆಂದೇ ಲಭ್ಯವಿದೆ. ಮೆರಿಡಿಯನ್ ಇತ್ತೀಚೆಗಷ್ಟೆ DSW ಸಬ್ ವೂಫರ್ ಬಿಡುಗಡೆಗೊಳಿಸಿದೆ. ಮೆರಿಡಿಯನ್ ಡಿಜಿಟಲ್ ಥಿಯೇಟರ್ ಮತ್ತು ಮ್ಯುಸಿಕ್ ಗೆಂದು ಬಿಡುಗಡೆಗೊಳಿಸಿರುವ ಈ ಸಾಧನ ಅನೇಕ ಸೌಲಭ್ಯವನ್ನೂ ಹೊಂದಿದೆ.

DSP 3300 ಮತ್ತು ಇನ್ನಿತರ ಮೆರಿಡಿಯನ್ DSP ಲೌಡ್ ಸ್ಪೀಕರ್ ಗಳನ್ನೂ ಮೆರಿಡಿಯನ್ ಪರಿಚಯಿಸಿದೆ. ಮೆರಿಡಿಯನ್ ಸಬ್ ವೂಫರ್ ನಲ್ಲಿ ಸ್ಪೀಕರ್ ಲಿಂಕ್ ಸೌಲಭ್ಯ ವಿಶೇಷವೆನಿಸಿದೆ. ಇದರಿಂದ ಬಳಕೆದಾರರು ಅತಿ ಬೇಗನೆ ಇನ್ನಿತರ ಸಾಧನಗಳೊಂದಿಗೆ ಸಂಪರ್ಕ ಹೊಂದಲು ಸಾಧ್ಯವಿದೆ.

ಮೆರಿಡಿಯನ್ DSW ಕಂಪನಿಯ ಮೊದಲ ಡಿಜಿಟಲ್ ಸಿಗ್ನಲ್ ಪ್ರೊಸೆಸಿಂಗ್ ಸಬ್ ವೂಫರ್ ಆಗಿದ್ದು, ಇದರ ಕ್ರಿಯೇಟಿವ್ ವಿನ್ಯಾಸ, ಕರ್ವ್ ಗಳು ನೋಡಲು ಆಕರ್ಷಕವೆನಿಸುತ್ತದೆ. ಆಡಿಯೋ ಕೋರ್ 200, ಸರೌಂಡ್ ಕಂಟ್ರೋಲರ್ ಮತ್ತು ಇನ್ನಿತರ ಮೆರಿಡಿಯನ್ ಲೌಡ್ ಸ್ಪೀಕರ್ ಗಳೊಂದಿಗೆ ಸಂಪರ್ಕ ಕಲ್ಪಿಸಲು ಇದರಲ್ಲಿನ ಸ್ಪೀಕರ್ ಲಿಂಕ್ ಸಹಾಯವಾಗಲಿದೆ.

ಈ ಸಾಧನದಲ್ಲಿ ಬ್ಯಾಸ್ ಕೂಡ ಇದ್ದು, ಸಿನಿಮಾ ಮತ್ತು ಸಂಗೀತ ಎರಡರಲ್ಲೂ ಉತ್ತಮ ಶಬ್ದವನ್ನು ನೀವು ನಿರೀಕ್ಷಿಸಬಹುದು. ಇದರಲ್ಲಿ ಅಳವಡಿಸಿರುವ DSP ತಂತ್ರಜ್ಞಾನದಿಂದ ವಾಲ್ಯೂಮ್, ಸಿಗ್ನಲ್ ಎಲ್ಲವನ್ನೂ ನಿಯಂತ್ರಿಸುವ ಅವಕಾಶವಿದೆ. ಈ ಮೆರಿಡಿಯನ್ DSW ಸಬ್ ವೂಫರ್ ಬೆಲೆ 2 ಲಕ್ಷಕ್ಕಿಂತ ಹೆಚ್ಚಿರಬಹುದೆಂದು ಅಂದಾಜಿಸಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot