360 ಡಿಗ್ರಿ ಗುಣಮಟ್ಟದ ಸೋನಿ ಸ್ಪೀಕರ್

Posted By: Staff

360 ಡಿಗ್ರಿ ಗುಣಮಟ್ಟದ ಸೋನಿ ಸ್ಪೀಕರ್
ಸೋನಿ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಯಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡಿರುವುದರಿಂದ ಅದರತ್ತ ಗ್ರಾಹಕರ ಒಲವು ಹೆಚ್ಚಾಗಿರುತ್ತದೆ. ಸಾಮಾನ್ಯ ಜನರಿಗೂ ಚಿರಪರಿಚಿತವಾಗಿರುವ ಈ ಕಂಪನಿ ಇತ್ತೀಚಿಕೆಗೆ ಚಿಕ್ಕ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ.

ಸೋನಿ SA NS300 ಹೆಸರಿನ ಈ ಸ್ಪೀಕರ್ ಬಳಕೆದಾರನಿಗೆ ಅತ್ಯಂತ ಮುದ ನೀಡುವ ಹಾಗೆ ಬಹಳ ಚಾಣಕ್ಷದಿಂದ ಈ ಸಾಧನವನ್ನು ತಯಾರಿಸಲಾಗಿದೆ. ಇದು ಒಳ್ಳೆಯ ಗುಣಮಟ್ಟದ 360 ಡಿಗ್ರಿ ಸ್ಪೀಕರ್ ಆಗಿದೆ.

ಈ ಸ್ಪೀಕರ್ ಅನ್ನು ಮೊಬೈಲ್, ಲ್ಯಾಪ್ ಟಾಪ್ ಗೀಗೆ ಯಾವುದೆ ಡಿಜಿಟಲ್ ಸಾದನಕ್ಕೆ ಬಳಸಲಾಗಿದ್ದು ಇದನ್ನು ಹೋಮ್ ಶೇರ್ ನೆಟ್ ವರ್ಕ್ಸ್ ಸ್ಪೀಕರ್ ಎಂದು ಸಹ ಕರೆಯಲಾಗಿದೆ.

ಈ ಸ್ಪೀಕರ್ ಅನ್ನು ಸೋನಿ ಬ್ಲೂ ರೇ ಡಿಸ್ಕ್ ಪ್ಲೇಯರ್ ಬಳಸಿ ಜೋಡಿಸಬಹುದಾಗಿದ್ದು ಇದರಿಂದಾಗಿ ಉತ್ತಮ ಗುಣಮಟ್ಟದ ಶಬ್ದವು ದೊರೆಯುವುದು.
ಇದರ ಮತ್ತೊಂದು ಆಕರ್ಷಣೆ ಎಂದರೆ ಇದರ ವಿನ್ಯಾಸ ಮತ್ತು ಗಾತ್ರ ಆಗಿದೆ.

ಇದರಲ್ಲಿ ಒಂದೇ ಮುಖಾಂತರ ಮಿಡ್ ಬ್ಲೋಯಿಂಗ್ ಸಾಧನವನ್ನು ಯಾವುದೆ ವೈಫೈ ಇರುವ ಸಾಧನಕ್ಕೆ ಜೋಡಿಸಬಹುದಾಗಿದೆ.ಈ ಸ್ಪೀಕರ್ ತೂಕ 470 ಗ್ರಾಂ ಹೊಂದಿದ್ದು, 141 x 141 x 123 mm ಡೈಮೆಂಶನ್ ಹೊಂದಿದ್ದು, 100 Hz ನಿಂದ 20 kHz ಕಂಪನಾಂಕವನ್ನು ಹೊಂದಿದೆ.

ಇದು ನೋಡಲು ಕಪ್ಪು ಬಣ್ಣದಲ್ಲಿದ್ದು ಅದರ ವಿನ್ಯಾಸವು ನೋಡುಗರನ್ನು ಸೆಳೆಯುವಂತಿದೆ.ಈ ವೈರ್ ಲೆಸ್ ಸ್ಪೀಕರ್ ವೈಫೈ ಐಪೋಡ್ ಮತ್ತು ಐಫೋನ್ ಗಳನ್ನು ಸಪೋರ್ಟ್ ಮಾಡುತ್ತಿದೆ.

ಸುಲಭವಾಗಿ ಜೊತೆಗೆ ಕೊಂಡೊಯ್ಯಬಹುದಾದ ಈ ಸ್ಪೀಕರ್ ಬೆಲೆ ರು. 7,500 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot