ನಿಕೊನ್ ಲೆನ್ಸ್ ಫೋಟೋಗ್ರಫಿಗಲ್ಲ, ಸಂಗೀತಕ್ಕೆ !

Posted By: Staff

ನಿಕೊನ್ ಲೆನ್ಸ್ ಫೋಟೋಗ್ರಫಿಗಲ್ಲ, ಸಂಗೀತಕ್ಕೆ !
ಎಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ಅಟೊಮೊಬೈಲ್ ವಸ್ತಗಳವರೆಗೆ ವಸ್ತುಗಳನ್ನು ತಯಾರಿಸುವಾಗ ಗುಣಮಟ್ಟದ ಜೊತೆ ನೋಡಲು ಸುಂದರವಾಗಿರುವಂತೆ ತಯಾರಿಸಲು ಹೆಚ್ಚಿನ ಗಮನಕೊಡುತ್ತಾರೆ. ಏಕೆಂದರೆ ಇಂತಹ ವಸ್ತುಗಳೆ ಮಾರುಕಟ್ಟೆಯಲ್ಲಿ ಚೆನ್ನಾಗಿ ಓಡುವುದು.

ನಿಕೊನ್ ಕೂಡ ಇಂತಹ ಟ್ರಿಕ್ಸ್ ಬಳಸಿದ್ದು ನೀಡಿದ ತಕ್ಷಣ ಸೆಳೆಯುವಂತಹ ನಿಕೊನ್ ಲೆನ್ಸ್ ಸ್ಪೀಕರ್ ಅನ್ನು ಪರಿಚಯಿಸಿದೆ.ಇದನ್ನು ನೋಡಿದಾಗ ಯಾವುದೊ ಫೋಟೋಗ್ರಫಿಯ ಸಾಧನದಂತೆ ಕಾಣಿಸುತ್ತದೆ.

ನೋಡಲು ಸುಮಾರಾಗಿ ನಿಕೊನ್ ಟೆಲಿಪೋಟೊ 55-200mm ಲೆನ್ಸ್ ತರವಿರುವ ಈ ಸ್ಪೀಕರ್ ನಲ್ಲಿ ಲೆನ್ಸ್ ಬದಲು ಸ್ಪೀಕರ್ ಡ್ರೈವರ್ ಇದೆ.ಇದು ಸ್ಟಿರಿಯೊ 3.5mm ಮಿನಿ ಜಾಕ್ ಬಳಸಿ ಸ್ಮಾರ್ಟ್ ಫೋನ್ ಮತ್ತು ಕಂಪ್ಯೂಟರಿನಲ್ಲಿ ಸಂಗೀತವು ಉತ್ತಮ ರೀತಿಯಲ್ಲಿ ಕೇಳುವಂತೆ ಮಾಡುತ್ತದೆ.

ಇದನ್ನು ಹೊರಗಡೆ ಹೋಗುವಾಗ ಜೊತೆಗೆ ಕೊಂಡೊಯ್ಯಬಹುದಾಗಿದೆ. ಇದನ್ನು ಸರಿಯಾಗಿ ಗಮಮನಿಸಿದಾಗ ಮಾತ್ರ ಇದು ಲೆನ್ಸ್ ಅಲ್ಲ ಎಂದು ಗೊತ್ತಾಗುತ್ತದೆ.

ಇದರಲ್ಲಿರುವ ಕಂಟ್ರೋಲ್ ಬಟನ್ ಬಳಸಿ ಬೇಕಾದ ಹಾಡನ್ನು ಆಯ್ಕೆ ಮಾಡುವುದು ನಿಲ್ಲಿಸುವುದು ಮಾಡಬಹುದಾಗಿದೆ. ಇದರಲ್ಲಿರು ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ ನಿರಂತರವಾಗಿ ನಾಲ್ಕು ಗಂಟೆಗಳ ಸಂಗೀತವನ್ನು ಕೇಳಬಹುದಾಗಿದೆ.

ಈ ಆಕರ್ಷಕವಾದ ಸ್ಪೀಕರ್ ದರ ಕೂಡ ಆಕರ್ಷಕ ರೀತಿಯಲ್ಲಿಯೆ ಇದ್ದು ರು.1, 000- 2, 000 ರೇಂಜಿನಲ್ಲಿ ಸಿಗಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot