ನಿಕ್ಸಾನ್ ನ ಸೂಪರ್ 3 ಆಡಿಯೊ ಸಾಧನಗಳು

Posted By: Staff

ನಿಕ್ಸಾನ್ ನ ಸೂಪರ್ 3 ಆಡಿಯೊ ಸಾಧನಗಳು
ನಿಕ್ಸಾನ್ ವಾಚ್ ಮತ್ತು ಯಂತ್ರಗಳ ಬಿಡಿ ಭಾಗಗಳ ತಯಾರಿಯಲ್ಲಿ ಪ್ರಸಿದ್ಧಿಯ್ನು ಪಡೆದಂತಹ ಕಂಪನಿ. ಇದರೊಂದಿಗೆ ಉತ್ತಮ ಗುಣ ಮಟ್ಟದ ಶಬ್ದವನ್ನು ಉಂಟುಮಾಡುವ ಆಡಿಯೊ ಸಾಧನಗಳನ್ನು ಸಹ ತಯಾರಿಸುತ್ತದೆ. ದರಲ್ಲಿ ಈಗ 3 ಆಯಾಮಗಳ ಆಡಿಯೊಗಳನ್ನು ಬಿಡುಗಡೆ ಮಾಡಿದೆ.

1. RPM ಡಿಜೆ ಹೆಡ್ ಪೋನ್
2. ಕಡಿಮೆ ಪ್ರೊಫೈಲ್ ನ ಮೈಕ್ರೋ ಬ್ಲಾಸ್ಟರ ಹೆಡ್ ಫೋನ್
3. TPS ಇದನ್ನು ಪ್ರಯಾಣದ ಸಂದರ್ಭದಲ್ಲಿ ಬಳಸುವುದಕ್ಕಾಗಿಯೆ ವಿನ್ಯಾಸಗೊಳಿಸಲಾಗಿದೆ.

ನಿಕ್ಸಾನ್ RPM : ಇದರಲ್ಲಿ 40 mmನ ಡ್ರೈವರ್ ಇದ್ದು ಅದನ್ನು ಡಿ ಜೆ ಮಾನಿಟರ್ ಮಾಡಲು ಬಳಸಬಹುದಾಗಿದೆ. ಇದರಲ್ಲಿರುವ ಇಂಟರ್ ಲಾಕಿಂಗ್ ಕೊಯಿಲ್ಡ್ ಕೇಬಲ್ ಅನ್ನು ಬಳಸಿ ಬಳಕೆದಾರರು ಪ್ರೊಫೆಷನಲ್ ಸಂಪರ್ಕವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಮತ್ತೊಂದು ರಿಮೋಟ್ ಕೇಬಲ್ ಅನ್ನು ಮೈಕ್ರೊಫೋನ್ ನೊಂದಿಗೆ ನೀಡುತ್ತಿದ್ದು ಅದರಿಂದ ಐಫೋನ್ ಗೆ ಜೋಡಿಸಬಹುದಾಗಿದೆ.

ನಿಕ್ಸಾನ್ ಮೈಕ್ರೊಬ್ಲಾಸ್ಟರ್ : ಇದರಲ್ಲಿ 8mm ಟೈಟಾನಿಯಮ್ ಡ್ರೈವರ್ ಬಳಸಿದ್ದು ಅದರ ಕಾರ್ಯ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯಕವಾಗಿದೆ. ಇದರಲ್ಲಿ ಕಸ್ಟಮ್ ಮೋಲ್ಡ್ ಡ್ ಟ್ರಾವಲ್ ಕೇಸ್ ಬಳಸಲಾಗಿದ್ದು ಕೊಂಡೊಯ್ಯಲು ಸುಲಭವಾಗಿದೆ. ಅಲ್ಲದೆ ಇದರಲ್ಲಿ ಡ್ಯುಯಲ್ ಡ್ಯೂರೋಮೀಟರ್ ಸಲಿಕಾನ್ ಹಿಯರ್ ಟಿಪ್ಸ್ ಸಾಧನವನ್ನು ಬಳಸಲಾಗಿದ್ದು ಇದರಿಂದ ಸ್ಪಷ್ಟವಾದ ಶಬ್ದವನ್ನು ಪಡೆಯಬಹುದಾಗಿದೆ.

ನಿಕ್ಸಾನ್ TPS : ಈ ಸಾಧನವು ಗಾತ್ರದಲ್ಲಿ ಚಿಕ್ಕದಾಗಿದ್ದು ಪ್ರಯಾಣದ ಸಂದರ್ಭದಲ್ಲಿ ಕೊಂಡೊಯ್ಯಲು ಸುಲಭವಾಗಿದೆ. ಇದನ್ನು ಬಳಸಿ ನಿರಂತರವಾಗಿ 6 ಗಂಟೆಗಳ ಕಾಲದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದ ಅತಿ ಬೇಗನೆ ಹಾನಿಗೊಳಗಾಗದಂತೆ ತಡೆಯಲು ಇದರ ಮೇಲ್ಮೈಗೆ ಅಲ್ಯುಮಿನಿಯಂ ಹೊರಕವವಿದ್ದು ಕಪ್ಪು ಮತ್ತು ಸಿಲ್ವರ್ ಬಣ್ಣದಲ್ಲಿ ಲಭ್ಯವಿದೆ.

ಈ ನಿಕ್ಸಾನ್ ಆಡಿಯೊ ಸಾಧನಗಳಲ್ಲಿ ನಿಕ್ಸಾನ್ RPM ಮತ್ತು ನಿಕ್ಸಾನ್ ಮೈಕ್ರೊಬ್ಲಾಸ್ಟರ್ ರು. 10, 000 ಮತ್ತು ನಿಕ್ಸಾನ್ TPS ರು. 4000 ದರದಲ್ಲಿ ಸಿಗಲಿದ್ದು ಇವುಗಳು ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗುವುದು ಎಂಬ ನಿರೀಕ್ಷೆಯಲ್ಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot