ಸ್ಪಷ್ಟ ಶಬ್ದಕ್ಕೆ ಕ್ಲಿಯರ್ ಹಾರ್ಮೋನಿ ಹೆಡ್ ಫೋನ್ ನ

Posted By:
ಸ್ಪಷ್ಟ ಶಬ್ದಕ್ಕೆ ಕ್ಲಿಯರ್ ಹಾರ್ಮೋನಿ ಹೆಡ್ ಫೋನ್ ನ

ಹೆಡ್ ಫೋನ್ ಗಳನ್ನು ಹೆಚ್ಚಿನವರು ಮನೆಯಲ್ಲಿ ಉಪಯೋಗಿಸುತ್ತಾರೆ. ಏಕೆಂದರೆ ಹೊರಗಡೆ ಹೋಗುವಾಗ ಗಾಡಿಗಳ ಶಬ್ದ, ಜನರ ಗದ್ದಲದಿಂದ ಸಂಗೀತ ಕೇಳಲು ಕಿರಿಕಿರಿ ಉಂಟಾಗುತ್ತದೆ. ಆದರೆ ಇನ್ನು ಮುಂದೆ ಅ ಚಿಂತೆ ಇಲ್ಲ. ಇದಕ್ಕಾಗಿಯೆ ಏಬ್ಲೆ ಪ್ಲಾನೆಟ್ ಸಧ್ಯದಲ್ಲಿಯೆ ಕ್ಲಿಯರ್ ಹಾರ್ಮೋನಿ ಎಂಬ ಹೆಡ್ ಫೋನ್ ತರಲಿದೆ. ಹೊರಗಿನ ಗದ್ದಲವನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ.

ಈ ಕ್ಲಿಯರ್ ಹಾರ್ಮೋನಿ 1/4 ಇಂಚಿನ ಅಡಾಪ್ಟರ್ , ಏರ್ ಪ್ಲೆನ್ ಅಡಾಪ್ಟರ್, 5 ಅಡಿಯ ಹೆಡ್ ಫೊನ್ ಕೋಡ್ ಹೊಂದಿದೆ.ಇದು ನೋಡಲು ಆಕರ್ಷಕವಾಗಿದ್ದು ಇದನ್ನು ಪ್ಲಾಸ್ಟಿಕ್ ನಿಂದ ಮಾಡಲಾಗಿದ್ದರಿಂದ ಹಗುರವಾಗಿದೆ. ಇದು ಸಿಲ್ವರ್ ಬ್ಲ್ಯಾಕ್ ಬಣ್ಣವನ್ನು ಹೊಂದಿದ್ದು ಇದನ್ನು ಬಳಿಸಿದರೆ ಯಾವುದೆ ಕಿರಿಕಿರಿ ಉಂಟಾಗುವುದಿಲ್ಲ.

ಇದರಲ್ಲಿ ಬಳಸಿರುವ AAA ಬ್ಯಾಟರಿ ಸ್ವಚ್ ಆಫ್ ಆಗುವವರೆಗೂ ಇದು ಉನ್ನತ್ತ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತದೆ. ಇದರಲ್ಲಿ ಉತ್ತಮ ರೀತಿಯ ಶಬ್ದದ ಕಂಪನಾಂಕವನ್ನು ಹೊಂದಿದೆ. ಇದು ಅತಿ ಕಡಿಮೆ ಕಂಪನಾಂಕದಲ್ಲಿ ಸಹ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಸ್ಪಷ್ಟವದ ಶಬ್ದವನ್ನು ನೀಡುವ ಈ ಕ್ಲಿಯರ್ ಹಾರ್ಮೋನಿ ಹೆಡ್ ಫೋನ್ ಮಾರುಕಟ್ಟೆ ದರ ರು. 10,000.

Please Wait while comments are loading...
Opinion Poll

Social Counting