ಬರಲಿದೆ ಆಪಲ್ ಬ್ಲೂಟೂಥ್ ಹೆಡ್ ಫೋನ್

Posted By:
ಬರಲಿದೆ ಆಪಲ್ ಬ್ಲೂಟೂಥ್ ಹೆಡ್ ಫೋನ್

ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಹೆಚ್ಚು ವ್ಯಾಪ್ತಿಯನ್ನು ಗಳಿಸುತ್ತಿದ್ದರೂ ಅದು ಆಪಲ್ ಮಾರುಕಟ್ಟೆಯನ್ನು ಯಾವುದೇ ರೀತಿಯಲ್ಲಿ ಭಾದಿಸಲಿಲ್ಲ. ದಿನದಿಂದ ದಿನಕ್ಕೆ ಆಪಲ್ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಾ ಜನರಿಗೆ ಸಂಗೀತ ಪ್ರೇಮಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಇದೀಗ ಆಪಲ್ ವೈ- ಗೇರ್ ಬ್ಲೂಟೂಥ್ ಹೆಡ್ ಸೆಟ್ ಕಂಪನಿಯನ್ನು ಕೊಳ್ಳಲಿದೆ ಎಂಬ ಸುದ್ಧಿ ಲಭಿಸಿದೆ.

ಐಮ್ಯಾಕ್, ಐಪೋಡ್, ಐಫೋನ್ ಗಳಲ್ಲಿ ಸಾಕಷ್ಟು ಮಾರುಕಟ್ಟೆಯನ್ನು ಹೊಂದಿದ್ದರೂ ತನ್ನದೆ ಆದ ಬ್ಲೂಟೂಥ್ ಹೆಡ್ ಸೆಟ್ ಇರಲಿಲ್ಲ. ಇದೀಗ ಆಪಲ್ iOS ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಬ್ಲೂಟೂಥ್ ಗಳನ್ನು ಸಧ್ಯದಲ್ಲಿಯೆ ಮಾರುಕಟ್ಟೆಗೆ ತರಲಿದೆ.

ವೈ- ಗೇರ್ ಬ್ಲೂಟೂಥ್ ಹೆಡ್ ಸೆಟ್ ಕಂಪನಿ ಅತ್ಯಾಧುನಿಕ ತಂತ್ರಕ್ಞಾನವನ್ನು ಬಳಸಿ ಹ್ಯಾಂಡ್ ಸೆಟ್ ಗಳನ್ನು ತಯಾರಿಸುವ ಕಂಪನಿಯಾಗಿದೆ. ಇದು iOS ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಹ್ಯಾಂಡ್ ಸೆಟ್ ಗಳಿಗಾಗಿಯೆ ಬ್ಲೂಟೂಥ್ ಹೆಡ್ ಫೋನ್ ಗಳನ್ನು ತಯಾರಿಸುತ್ತದೆ. ಈ ವೈ-ಗೇರ್ ಈಗ ಆಪಲ್ ಕಂಪನಿಯ ಸ್ವಾಧೀನದಲ್ಲಿದೆ.

ಆಪಲ್ ಹೊಸ ಉಪಾಯಗಳನ್ನು ಹೊಂದಿದ್ದು ಅದನ್ನು ವೈ ಗೇರ್ ನೊಂದಿಗೆ ಸೇರಿ ಜಾರಿಗೆ ತರಲಿದೆ.ಆಪಲ್ ಹೊಸತನದ ಬ್ಲೂಟೂಥ್ ಸ್ಟಿರಿಯೊ ಹೆಡ್ ಫೋನ್ ಗಳನ್ನು ತರಲಿದ್ದು ಅದರಲ್ಲಿ A2DP ತಂತ್ರಜ್ಞಾನವನ್ನು ಬಳಸಲಾಗಿದೆ. ಈ ಹೆಡ್ ಫೋನ್ ಗಳು ಬಂದರೆ ಉಳಿದೆಲ್ಲಾ ಹೆಡ್ ಫೋನ್ ಗಳಿಗಿಂತ ಉತ್ತಮ ಗುಣಮಟ್ಟವನ್ನು ಹೊಂದಿರುವುದು ಎಂಬ ನಿರೀಕ್ಷೆ ಇದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot