Subscribe to Gizbot

ಆಪಲ್ ಹೇರ್ ಬ್ಯಾಂಡ್ ಹಾಕಿಕೊಳ್ಳಲು ರೆಡಿಯಾಗಿ

Posted By:
ಆಪಲ್ ಹೇರ್ ಬ್ಯಾಂಡ್ ಹಾಕಿಕೊಳ್ಳಲು ರೆಡಿಯಾಗಿ

ಆಪಲ್ ಸಾಧನಗಳು ಗುಣಮಟ್ಟದಿಂದ ಖ್ಯಾತಿ ಹೊಂದಿದ್ದರೂ ಅದರ ಜೊತೆ ಅದರ ಸ್ಟೈಲ್ ಕೂಡ ಇದರ ಜನಪ್ರಿಯತೆಗೆ ಸಮಾನವಾದ ಕಾರಣವಾಗಿದೆ. ತನ್ನದೆಯಾದ ವಿನ್ಯಾಸವನ್ನು ಹೊಂದಿರುವ ಆಪಲ್ ಇದೀಗ ಹೊಸ ಹೆಡ್ ಫೋನ್ ಅನ್ನು ತಯಾರಿಸಿದೆ. ಈ ಹೊಸ ಹೆಡ್ ಫೋನ್ ನೋಡಿದಾಗ ಹೇರ್ ಬ್ಯಾಂಡ್ ನೆನಪು ಬರುತ್ತದೆ. ಏಕೆಂದರೆ ಇದರ ವಿನ್ಯಾಸ ಹೇರ್ ಬ್ಯಾಂಡ್ ನಂತೆ ಇದ್ದು ನೋಡಲು ಆಕರ್ಷಕವಾಗಿದೆ.

ಆಪಲ್ ಹೇರ್ ಬ್ಯಾಂಡ್ ಹೆಡ್ ಫೋನ್, ಆಪಲ್ ಐಮ್ಯಾಕ್, ಮ್ಯಾಕ್ ಬುಕ್ಸ್ ಸ್ಟೈಲಿಷ್ ನಲ್ಲಿ ಮತ್ತು ಅಲ್ಯುಮಿನಿಯಂ ಫಿನಿಷ್ ನಲ್ಲಿ ಹೆಚ್ಚು ಕಡಿಮೆ ಒಂದೇ ತರ ಇದೆ. ಈ ಹೆಡ್ ಫೋನ್ ಹೊಳೆಯುವ ಆಪಲ್ ಲೋಗೊವನ್ನು ಹೊಂದಿದ್ದು , ಇದರಲ್ಲಿರುವ ಶಬ್ದ ನಿಯಂತ್ರಿಸುವ ಸಾಧನವು ಲೋಗೊದ ಹಿಂದೆ ಮರೆಯಾಗಿರುವಂತೆ ತಯಾರಿಸಲಾಗಿದೆ.

ಈ ಹೆಡ್ ಫೋನ್ ಬಳಸಿದರೆ ಬಳಕೆದಾರರಿಗೆ ಆರಾಮವೆನಿಸುವುದರ ಜೊತೆಗೆ ಇದು ಕಾರ್ಯದಲ್ಲಿದೆ ಎಂದು ಆಪಲ್ ಲೋಗೊದಲ್ಲಿಯೆ ಇಂಡಿಕೇಟರ್ ಇರುವುದರಿಂದ ತಿಳಿದು ಕೊಳ್ಳಬಹುದು.ಈ ಆಪಲ್ ಹೆಡ್ ಫೋನ್ ಸಧ್ಯದಲ್ಲಿಯೆ ಮಾರುಕಟ್ಟೆಗೆ ಬರಲಿದ್ದು, ಹೆಡ್ ಫೋನ್ ಗಳಲ್ಲಿ ಉತ್ತಮ ಗುಣಮಟ್ಟದ ಹೆಡ್ ಫೋನ್ ಇದಾಗಲಿದೆಯೆ ಎಂದು ಕಾದು ನೋಡ ಬೇಕಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot